Wednesday, January 22, 2025

ಗಂಡನ ಮನೆ ಮುಂದೆ ಮಾಟ ಮಾಡಿಸಿದ ಹೆಂಡ್ತಿ : ಮುಂದೇನಾಯ್ತು ನೋಡಿ

ಬೆಂಗಳೂರು : ಅದು ಕೆಳೆದ ಕೆಲವು ದಿನಗಳ ಹಿಂದೆ ದೂರವಾಗಿದ್ದ ಸಂಸಾರ. ಬಳಿಕ, ಪತಿಯೊಂದು ತೀರಾ, ಪತ್ನಿಯೊಂದು ತೀರಾ. ಪತಿ ಸುಮ್ಮನೆ ಇದ್ರು ಪತ್ನಿ ಸುಮ್ಮನೆ ಕೂರಲಿಲ್ಲ. ಗಂಡನ ಮನೆ ಮುಂದೆ ಮಾಟ ಮಂತ್ರ ಮಾಡಿಸಿದ್ದಾಳೆ.

ಅರಮನೆನಗರಿ ಮೈಸೂರಿನಲ್ಲಿ ಇಂಥದೊಂದು ಘಟನೆ ನಡೆದಿದೆ. ನಿನ್ನೆ ಯುಗಾದಿ ಅಮಾವಾಸ್ಯೆ ದಿನ ಗಂಡನ ಮನೆ ಮುಂದೆ ಪತ್ನಿ ಮಾಟ ಮಂತ್ರ ಮಾಡಿಸಿದ್ದಾಳೆ ಎಂಬ ಆರೋಪ ಕೇಳಿ ಬಂದಿದೆ. ಅಲ್ಲದೆ, ಸಾರ್ವಜನಿಕರು ಅವಳನ್ನು ರೆಡ್ ಹ್ಯಾಂಡಾಗಿ ಹಿಡಿದಿದ್ದಾರೆ.

ಮೈಸೂರಿನ ನಾಚನಹಳ್ಳಿ ಪಾಳ್ಯದ 8ನೇ ಕ್ರಾಸ್‌ನಲ್ಲಿ ಸಮ್ರೀನ್ ಎಂಬ ಮಹಿಳೆ ತನ್ನ ಪತಿ ರಫಿ ಮನೆ ಮುಂದೆ ಮಾಟ ಮಾಡಿಸಿದ್ದಾಳೆ. ಪತಿಯ ಮನೆ ಮುಂದೆ ಮಡಿಕೆ, ನಿಂಬೆಹಣ್ಣು, ಮೆಣಸಿನಕಾಯಿ, ಉಪ್ಪು ಸೇರಿ ಹಲವು ವಸ್ತುಗಳನ್ನು ಹಾಕಲು ಬಂದಿದ್ದಾಗ ಸಾರ್ವಜನಿಕರು ಮಹಿಳೆಯನ್ನು ಹಿಡಿದಿದ್ದಾರೆ.

ಠಾಣೆಯಲ್ಲಿ ದೂರು ದಾಖಲು

ಕೆಲವು ದಿನಗಳಿಂದ ಪತಿಯಿಂದ ದೂರವಾಗಿದ್ದ ಸಮ್ರೀನ್, ಪ್ರತಿ ಅಮಾವಾಸ್ಯೆ ದಿನ ರಫಿ ಮನೆ ಮುಂದೆ ಮಾಟ ಮಂತ್ರ ಮಾಡಿಸುತ್ತಿದ್ದಳಂತೆ. ಪ್ರತಿ ಅಮಾವಾಸ್ಯೆಯಂದು ರಫಿ ಮನೆ ಮುಂದೆ ಮಾಟ ಮಂತ್ರದ ವಸ್ತುಗಳು ಬಿದ್ದಿರುತ್ತಿದ್ದವು. ನಿನ್ನೆ ರಾತ್ರಿ ಮಾಟ ಮಂತ್ರದ ವಸ್ತುಗಳನ್ನು ಹಾಕುವಾಗ ರೆಡ್ ಹ್ಯಾಂಡ್ ಆಗಿ ಸಮ್ರೀನ್‌ಳನ್ನು ಹಿಡಿದಿದ್ದಾರೆ. ಈ ಸಂಬಂಧ ಮೈಸೂರಿನ ವಿದ್ಯಾರಣ್ಯಪುರಂ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ.

ಅಮಾವಾಸ್ಯೆಯ ರಾತ್ರಿಗಳನ್ನು ತಂತ್ರ-ಮಂತ್ರಗಳ ಸಿದ್ಧಿಗಾಗಿ ವಿಶೇಷ ದಿನವೆಂದು ಪರಿಗಣಿಸಲಾಗುತ್ತದೆ. ಹೀಗಾಗಿ, ಈ ಅಮವಾಸ್ಯೆಯ ರಾತ್ರಿಯಂದು ಅನೇಕರು ಮಾಟ ಮಂತ್ರಗಳನ್ನು ಮಾಡಿಸುತ್ತಾರೆ. ಈ ದಿನಗಳಲ್ಲಿ ತಾಂತ್ರಿಕರು ಮತ್ತು ಅಘೋರಿಗಳು ಅಮವಾಸ್ಯೆಯ ರಾತ್ರಿ ತಮ್ಮ ಶಕ್ತಿಯನ್ನು ಸಾಧಿಸುತ್ತಾರೆ ಎಂದು ತಿಳಿದುಬಂದಿದೆ.

RELATED ARTICLES

Related Articles

TRENDING ARTICLES