Wednesday, January 22, 2025

ಕುಮಾರಸ್ವಾಮಿಗೆ ರೌಡಿಶೀಟರ್ ಕಂಟಕ : ಆರೋಪಿ ಬಂಡೆ ಮಂಜನಿಗೆ ರೆಡ್ ಕಾರ್ಪೆಟ್ ಹಾಸಿದ ಜೆಡಿಎಸ್?

ಬೆಂಗಳೂರು : ವರ್ಷಗಟ್ಟಲೇ ಸೈಲೆಂಟ್ ಆಗಿದ್ದ ರೌಡಿಶೀಟರ್ ಗಳು ಚುನಾವಣಾ ಫೀವರ್ ಹೆಚ್ಚಾಗುತ್ತಿದ್ದಂತೆ ರಾಜಕೀಯ ನಾಯಕರುಗಳ ಜೊತೆಗೆ ಕಾಣಿಸಿಕೊಳ್ಳುತ್ತಿದ್ದಾರೆ. ಇಷ್ಟು ದಿನ ಬಿಜೆಪಿಗೆ ಅಂಟಿದ್ದ ಈ ಕಳಂಕ ಇದೀಗ ಜೆಡಿಎಸ್ ಗೂ ಹಬ್ಬಿದೆ.

ಹೌದು, ಬಿಜೆಪಿ ಮೇಲೆ ಕೆಂಡಕಾರುತ್ತಿದ್ದ ಜೆಡಿಎಸ್ ಇದೀಗ ಬಿಜೆಪಿ ಹಾದಿಯನ್ನೇ ತುಳಿದಿದೆ. ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಜೊತೆ ರೌಡಿ ಶೀಟರ್ ಒಬ್ಬ ಕಾಣಿಸಿಕೊಂಡಿದ್ದು, ಇದು ಪ್ರತಿಪಕ್ಷಗಳಿಗೆ ಅಸ್ತ್ರವಾಗಿದೆ.

ಎಚ್‌ಡಿಕೆ ಜೊತೆ ಬಂಡೆ ಮಂಜ

ಕುಮಾರಸ್ವಾಮಿ ಅವರ ಜೊತೆಗೆ ಬೆಮೆಲ್ ಕೃಷ್ಣಪ್ಪ ಕೊಲೆಯ ಎ2 ಆರೋಪಿ ರೌಡಿಶೀಟರ್ ಬಂಡೆ ಮಂಜ ಕಾಣಿಸಿಕೊಂಡಿದ್ದಾರೆ. ಈ ಫೋಟೋವೊಂದು ಸಾಮಾಜಿಕ ಜಾಲತಾನದಲ್ಲಿ ವೈರಲ್ ಆಗಿದೆ. ಇದನ್ನು ಕಂಡ ಪ್ರತಿಪಕ್ಷಗಳು, ಜೆಡಿಎಸ್‌ ಕೂಡ ರೌಡಿಶೀಟರ್‌ಗಳಿಗೆ ರೆಡ್ ಕಾರ್ಪೆಟ್ ಹಾಸಿದೆ ಎಂದು ತಿರುಗೇಟು ನೀಡುತ್ತಿವೆ.

ಜೆಡಿಎಸ್ ಶಾಸಕನೊಂದಿಗೆ ಒಡನಾಟ

ನೆಲಮಂಗಲ ಜೆಡಿಎಸ್ ಶಾಸಕ ಶ್ರೀನಿವಾಸಮೂರ್ತಿ ಜೊತೆ ರೌಡಿ ಶೀಟರ್ ಬಂಡೆ ಮಂಜ ಒಡನಾಟ ಹೊಂದಿದ್ದಾರೆ. ಹೀಗಾಗಿಯೇ, ಸಮಾರಂಭವೊಂದರಲ್ಲಿ ಶ್ರೀನಿವಾಸಮೂರ್ತಿ ಅವರೊಟ್ಟಿಗೆ ಕಾಣಿಸಿಕೊಂಡಿದ್ದಾನೆ. ಅಲ್ಲದೆ, ಶಾಸಕರ ಜೊತೆಗೆ ಫೋಟೋಗೆ ಫೋಸ್ ಕೊಟ್ಟಿದ್ದಾನೆ ಎಂದು ಹೇಳಲಾಗುತ್ತಿದೆ.

ಇನ್ನೂ, ವಿಧಾನ ಪರಿಷತ್ ಮಾಜಿ ಸದಸ್ಯ ಕಾಂತರಾಜು ಫೋಟೋ ಹಾಗೂ ವಿಡಿಯೋ ರಿಲೀಸ್ ಮಾಡಿದ್ದಾರೆ. ಅದರಲ್ಲಿ ಮಾಜಿ ಸಿಎಂ ಎಚ್‌.ಡಿ ಕುಮಾರಸ್ವಾಮಿ ಹಾಗೂ ಜೆಡಿಎಸ್ ನಾಯಕರ ಜೊತೆ ಬಂಡೆ ಮಂಜ ಕಾನಿಸಿಕೊಂಡಿದ್ದಾರೆ.

RELATED ARTICLES

Related Articles

TRENDING ARTICLES