ಬೆಂಗಳೂರು : ಆಡಳಿತರೂಢ ಬಿಜೆಪಿ ಹಾಗೂ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಪ್ರತಿಪಕ್ಷಗಳು ಪೋಸ್ಟರ್ ಅಭಿಯಾನ ಮಾಡುತ್ತಿರುವುದು ಸಾಮಾನ್ಯ. ಆದರೆ, ಮೋದಿ ವಿರುದ್ಧ ಆಕ್ಷೇಪಾರ್ಹ ಪೋಸ್ಟರ್ ಗಳನ್ನು ಹಾಕಿದ್ದ ಸಂಬಂಧ ಬರೋಬ್ಬರಿ 100 ಎಫ್ಐಆರ್ ದಾಖಲಾಗಿವೆ.
ಹೌದು, ವಿವಾದಿತ ಪೋಸ್ಟರ್ ನಲ್ಲಿ ‘ಮೋದಿ ಹಟಾವೋ – ದೇಶ್ ಬಚಾವೋ’ ಎಂಬ ಘೋಷಣೆಗಳನ್ನು ಬರೆದಿರುವುದು ಬೆಳಕಿಗೆ ಬಂದಿದೆ. ದೆಹಲಿಯಾದ್ಯಂತ 2 ಸಾವಿರಕ್ಕೂ ಹೆಚ್ಚು ಪೋಸ್ಟರ್ಗಳನ್ನು ತೆಗೆದುಹಾಕಲಾಗಿದೆ.
ಈ ಪೋಸ್ಟರ್ ಎಎಪಿ ಪಕ್ಷಕ್ಕೆ ಸಂಬಂಧಿಸಿದ್ದು, ಪೋಸ್ಟರ್ ಗಳನ್ನು ತುಂಬಿದ್ದ ವಾಹನ (ವ್ಯಾನ್) ಎಎಪಿ ಪಕ್ಷದ ಕಚೇರಿಯಿಂದ ಹೊರಟ್ಟಿತ್ತು. ಈ ವೇಳೆ ಪೊಲೀಸರು ದಾಳಿ ನಡೆಸಿ ಸಾಕಷ್ಟು ಪೋಸ್ಟರ್ ಗಳನ್ನು ವಶಕ್ಕೆ ಪಡೆದಿದ್ದಾರೆ. ಅಲ್ಲದೆ, ಹಲವರನ್ನು ಬಂಧಿಸಿದ್ದಾರೆ.
ಸಾವಿರಾರು ಮೋದಿ ವಿರೋಧಿ ಪೋಸ್ಟರ್
ಪ್ರಧಾನಿ ನರೇಂದ್ರ ಮೋದಿ ಅವರನ್ನು ಪದಚ್ಯುತಿಗೊಳಿಸುವ ಸಂಚು ಸಂಬಂಧ ಸಾವಿರಾರು ಪೋಸ್ಟರ್ ದೆಹಲಿಯಲ್ಲಿ ಪತ್ತೆಯಾಗಿದ್ದು, ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ. ಆರೋಪಿಗಳ ಪೈಕಿ ಇಬ್ಬರು ಪ್ರಿಂಟಿಂಗ್ ಪ್ರೆಸ್ ಹೊಂದಿದ್ದಾರೆ ಎನ್ನಲಾಗಿದೆ.