Friday, November 22, 2024

‘ಜನತಾ ಕರ್ಫ್ಯೂ’ ಘೋಷಿಸಿ ಇಂದಿಗೆ ಮೂರು ವರ್ಷ : ಹೇಗಿತ್ತು ಗೊತ್ತಾ ಕೊರೋನಾ ಜರ್ನಿ?

ಬೆಂಗಳೂರು : ಮಾರ್ಚ್ 22, 2020..! ಈ ದಿನವನ್ನು ಯಾರು ತಾನೇ ಮರೆಯಲು ಸಾಧ್ಯ. ಮಾನವ ಕುಲಕ್ಕೇ ಭಯ ಹುಟ್ಟಿಸಿ, ಜೀವನವನ್ನೇ 4 ಕೋಣೆ ಮಧ್ಯೆ ಕಳೆಯುವಂತೆ ಮಾಡಿದ ಕರಾಳ ದಿನ. ಆ ಕರಾಳ ದಿನ ನಡೆದು ಇಂದಿಗೆ ಭರ್ತಿ ಮೂರು ವರ್ಷ.

ಹೌದು, ಭಾರತದಲ್ಲಿ ಕೋವಿಡ್‌ ತಡೆಯಲು ‘ಜನತಾ ಕರ್ಫ್ಯೂ’ ಘೋಷಿಸಿ ಮೂರು ವರ್ಷವಾಗಿದ್ದು, ಮೊದಲ ಲಾಕ್‌ಡೌನ್‌ ಆರಂಭಗೊಂಡು ಮಾರ್ಚ್24ಕ್ಕೆ ಮೂರು ವರ್ಷವಾಗುತ್ತಿದೆ.

ಮೂರು ವರ್ಷಗಳ ಹಿಂದೆ ಕೊರೋನಾ ಸೋಂಕು ಇಡೀ ಜಗತ್ತನ್ನೇ ಬೆಚ್ಚಿ ಬೀಳಿಸಿತ್ತು. ದೇಶದಲ್ಲೂ ಕೋವಿಡ್ ಮಹಾಮಾರಿ ಹರಡುತ್ತಿದ್ದ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು 2020ರ ಮಾರ್ಚ್ 22ರಂದು ಭಾರತದಾದ್ಯಂತ ‘ಜನತಾ ಕರ್ಫ್ಯೂ’ ಘೋಷಿಸಿ ಆದೇಶಿಸಿದ್ದರು.

ಇಂದಿಗೆ ‘ಜನತಾ ಕರ್ಫ್ಯೂ’ ಹೇರಿ ಮೂರು ವರ್ಷ ಪೂರ್ಣಗೊಂಡಿದೆ. ಈ ಹಿನ್ನೆಲೆ ಸೋಶಿಯಲ್ ಮೀಡಿಯಾದಲ್ಲಿ ನೆಟ್ಟಿಗರು ಅಂದು ಜನರು ‘ಗೋ ಕೊರೋನಾ ಗೋ..’ ಎಂದು ಘೋಷಣೆ ಕೂಗುತ್ತಿರುವ ವಿಡಿಯೋ ತುಣುಕುಗಳನ್ನು ಸೋಶಿಯಲ್ ಮೀಡಿಯಾಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ.

ಇದನ್ನೂ ಓದಿ : ಸೈಲೆಂಟ್ ಆಗಿಯೇ ಏರುತ್ತಿದೆ ಕೋವಿಡ್ ಕೇಸ್! : ಒಂದೇ ದಿನ 699 ಪ್ರಕರಣ

ಲಾಕ್‌ಡೌನ್‌ಗೆ ಆರಂಭಕ್ಕೆ ಮೂರು ವರ್ಷ

ಭಾರತದಲ್ಲಿ 2020ರ ಜನವರಿ 30ರಂದು ಮೊದಲ ಕೊರೊನಾ ಪ್ರಕರಣ ಪತ್ತೆಯಾಗಿತ್ತು. ವುಹಾನ್‌ನಿಂದ ಮರಳಿದ ಕೇರಳದ ಒಬ್ಬ ವಿದ್ಯಾರ್ಥಿಯಲ್ಲಿ ಸೋಂಕು ಪತ್ತೆಯಾಗಿತ್ತು. ಮಾರ್ಚ್ 11ರಂದು ಇದೊಂದು ಸಾಂಕ್ರಾಮಿಕ ಎಂದು ವಿಶ್ವಸಂಸ್ಥೆ ಘೋಷಿಸಿತ್ತು.

ಕಲಬುರಗಿಯಲ್ಲಿ ಮೊದಲ ಸಾವು

ಮಾರ್ಚ್ 11ರ ಮರುದಿನ, ರಾಜ್ಯದ ಕಲಬುರಗಿಯಲ್ಲಿ ದೇಶದಲ್ಲಿ ಮೊದಲ ಕೊರೋನಾ ಸಾವು ಸಂಭವಿಸಿತು. ಪ್ರಧಾನಿ ನರೇಂದ್ರ ಮೋದಿ ಮಾರ್ಚ್ 22ರಂದು ಒಂದು ದಿನದ ‘ಜನತಾ ಕರ್ಫ್ಯೂ’ ಘೋಷಿಸಿದ್ದರು. ಮಾರ್ಚ್ 25ರಿಂದ ಏಪ್ರಿಲ್ 14ರವರೆಗೆ 20 ದಿನಗಳ ದೇಶಾದ್ಯಂತ ಲಾಕ್‌ಡೌನ್‌ ಘೋಷಿಸಲಾಯಿತು.

ಒಂದೇ ದಿನ 1,134 ಹೊಸ ಪ್ರಕರಣ

ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 1,134 ಹೊಸ ಪ್ರಕರಣಗಳು ದಾಖಲಾಗಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ 7,026 ಆಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿದೆ. ಮಂಗಳವಾರ ನೆರೆಯ ಮಹಾರಾಷ್ಟ್ರದಲ್ಲಿ ಹೆಚ್ಚುತ್ತಿರುವ ಕೋವಿಡ್ -19 ಪ್ರಕರಣಗಳ ಮಧ್ಯೆ ದೆಹಲಿಯಲ್ಲಿ ಒಂದು ಕೋವಿಡ್ ಸಾವು ಮತ್ತು 83 ಹೊಸ ಪ್ರಕರಣಗಳು ದಾಖಲಾಗಿವೆ.

RELATED ARTICLES

Related Articles

TRENDING ARTICLES