Monday, December 23, 2024

ಇವರೇ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದ ಅತಿಥಿಗಳು! : ರಿವೀಲ್ ಆಯ್ತು ಗೆಸ್ಟ್ ಲೀಸ್ಟ್

ಬೆಂಗಳೂರು : ವೀಕೆಂಡ್ ಬಂತು ಅಂದ್ರೆ ಥಟ್ಟನೆ ನೆನಪಾಗೋದು ವೀಕೆಂಡ್ ವಿತ್ ರಮೇಶ್! ಕೊಂಚ ಬಿಡುವು ಪಡೆದಿದ್ದ ಈ ಕಾರ್ಯಕ್ರಮ ಮತ್ತೆ ಮರಳಿ ಬಂದಿದೆ. ಈ ಬಾರಿಯ ನಿಮ್ಮ ನೆಚ್ಚಿನ ಸೆಲೆಬ್ರೆಟಿಗಳೇ ಗೆಸ್ಟ್ ಸೀಟ್ ನಲ್ಲಿ ಕೂರಲಿದ್ದಾರೆ.

ಹೌದು, ಖುದ್ದು ನಟ ರಮೇಶ್ ಅರವಿಂದ್ ಅವರೇ ಈ ಬಾರಿಯ ಗೆಸ್ಟ್​ಗಳು ಯಾರೆಂಬುದನ್ನು ರಿವೀಲ್ ಮಾಡಿದ್ದಾರೆ. ಆ ಮೂಲಕ ಪ್ರೇಕ್ಷಕರಿಗೆ ಕಿಕ್ ಕೊಟ್ಟಿದ್ದಾರೆ.

ಇದೇ ಮಾರ್ಚ್ 25ರಿಂದ ಜೀ ಕನ್ನಡದಲ್ಲಿ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮ ಆರಂಭವಾಗಲಿದೆ. 5ನೇ ಸೀಸನ್ ಇದಾಗಿದ್ದು, ರಮೇಶ್ ಅರವಿಂದ್ ಅವರೇ ನಿರೂಪಕರಾಗಿ ಮುಂದುವರಿಯಲಿದ್ದಾರೆ. ವೀಕೆಂಡ್ ವಿತ್ ರಮೇಶ್ ಪ್ರಾರಂಭದ ಕುರಿತು ಜೀ ವಾಹಿನಿಯ ಚೀಫ್ ಕಂಟೆಂಟ್ ಆಫೀಸರ್ ರಾಘವೇಂದ್ರ ಹುಣಸೂರು ಹಾಗೂ ರಮೇಶ್ ಅರವಿಂದ್ ಮಾಹಿತಿ ಹಂಚಿಕೊಂಡಿದ್ದಾರೆ.

ಸೀಸನ್ 5ಗೆ ರಮ್ಯಾ ಚೈತ್ರಕಾಲ

ವೀಕೆಂಡ್ ವಿತ್ ರಮೇಶ್ ಸೀಸನ್ 5ರ ಮೊದಲ ಅತಿಥಿ ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ಎನ್ನುವುದು ವಿಶೇಷ. ಇದನ್ನು ಖುದ್ದು ರಾಘವೇಂದ್ರ ಹುಣಸೂರು ಅವರೇ ರಿವೀಲ್ ಮಾಡಿದ್ದಾರೆ. ಜೊತೆಗೆ ಯಾರೆಲ್ಲಾ ಅತಿಥಿಗಳು ಇರಲಿದ್ದಾರೆ ಎನ್ನುವುದರ ಕುರಿತು ಸುಳಿವು ನೀಡಿದ್ದಾರೆ. ಈಗಾಗಲೇ ನಟಿ ರಮ್ಯಾ ಅವರ ಶೂಟಿಂಗ್ ನಡೆಯುತ್ತಿದೆ ಎಂದು ತಿಳಿದುಬಂದಿದೆ.

ಡ್ಯಾನ್ಸ್ ಕಿಂಗ್ ಪ್ರಭುದೇವ

ಇನ್ನೂ ಎರಡನೇ ಎಪಿಸೋಡ್ ನಲ್ಲಿ ಖ್ಯಾತ ಡ್ಯಾನ್ಸರ್, ನಟ ಪ್ರಭುದೇವ ರಮೇಶ್ ಅರವಿಂದ್ ಜೊತೆ ತಮ್ಮ ಸಿನಿ ಜರ್ನಿ ಬಗ್ಗೆ ಮಾತನಾಡುವುದು ಬಹುತೇಕ ಖಚಿತವಾಗಿದೆ. ಎರಡನೇ ಅತಿಥಿಯಾಗಿ ಸಾಧಕರ ಕುರ್ಚಿಯ ಮೇಲೆ ಕೂರಲಿದ್ದು, ಪ್ರಭುದೇವ ಅಭಿಮಾನಿಗಳು ಖುಷ್ ಆಗಿದ್ದಾರೆ.

ರಮೇಶ್ ಅಡ್ಡಾಗಿ ಆಕ್ಷನ್ ಫ್ರಿನ್ಸ್!

ಸ್ಯಾಂಡಲ್ ವುಡ್ ನ ಮತ್ತೊಬ್ಬ ಬರವಸೆಯ ನಟ ಯಾರೆಂದ್ರೆ ಧ್ರುವ ಸರ್ಜಾ. ಈ ಬಾರಿಯ ಸೀಸನ್ ನಲ್ಲಿ ಆಕ್ಷನ್ ಫ್ರಿನ್ಸ್ ಧ್ರುವ ಸಹ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಸಾಕಷ್ಟು ಫ್ಯಾನ್ ಫಾಲೋಯಿಂಗ್ ಹೊಂದಿರುವ ಧ್ರುವರ ಸಿನಿ ಕೆರೆಯರ್ ಕಿರುತೆರೆಯಲ್ಲಿ ಅನಾವರಣವಾಗಲಿದೆ. ತಮ್ಮ ನೆಚ್ಚಿನ ನಟನ ಜೀವನದ ಬಗ್ಗೆ ತಿಳಿಯಲು ಅಭಿಮಾನಿಗಳು ಕಾತರರಾಗಿದ್ದಾರೆ.

ಸಾಧಕರ ಸೀಟ್ ನಲ್ಲಿ ಕನಸಿನ ರಾಣಿ

ಚಂದನವನದ ಕನಸಿನ ರಾಣಿ ನಟಿ ಮಾಲಾಶ್ರಿ. ಯಾವ ಹಿರೋಗಳಿಗೂ ಕಮ್ಮಿಯಿಲ್ಲದ ಆಕ್ಷನ್, ಖಡಕ್ ಡೈಲಾಗ್, ಪೊಲೀಸ್ ಪಾತ್ರಕ್ಕೆ ನ್ಯಾಯ ಒದಗಿಸಬಲ್ಲ ನಟ. ಹೀರೋಗಳಿಗೆ ಸೆಡ್ಡು ಹೊಡೆದು ನಾಯಕಿಯಾಗಿ ಮಿಂಚಿದ್ದ ಅಪರೂಪದ ತಾರೆ. ಇವರ ಹೆಸರು ಸಹ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದ ಗೆಸ್ಟ್ ಲೀಸ್ಟ್ ನಲ್ಲಿದೆ.

ಸಾಧನೆ ಬಗ್ಗೆ ಬುಲ್ ಬುಲ್ ಮಾತು

ನಟಿ ರಮ್ಯಾ ಬಳಿಕ ಸ್ಯಾಂಡಲ್ ವುಡ್ ನಲ್ಲಿ ಛಾಪು ಮೂಡಿಸಿರುವ ನಟಿ ಎಂದರೆ ಡಿಂಪಲ್ ಕ್ವೀನ್ ರಚಿತಾ ರಾಮ್. ರಚಿತಾ ಸಹ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ಸಾಧಕರ ಸೀಟ್ ಅಲಂಕರಿಸಲಿದ್ದಾರೆ. ಚಂದನವನಕ್ಕೆ ಎಂಟ್ರಿ ಕೊಟ್ಟು 10 ವರ್ಷ ಪೂರೈಸಿರುವ ರಚಿತಾ ಅವರಿಗೆ ಇದು ತುಂಬಾನೇ ಸ್ಪೆಷಲ್ ಮೂಮೆಂಟ್ ಆಗಿರಲಿದೆ.

ಇನ್ನೂ, ಸದ್ಗುರು ಜಗ್ಗಿ ವಾಸುದೇವ್ ಅವರ ಹೆಸರು ಸಹ ಸಾಧಕರ ಸೀಟ್ ನ ಗೆಸ್ಟ್ ಲೀಸ್ಟ್ ನಲ್ಲಿ ಕೇಳಿಬಂದಿದೆ. ಆದರೆ, ವಾಸುದೇವ್ ಅವರು ಪಾಲ್ಗೊಳ್ಳುವ ಬಗ್ಗೆ ಫೈನಲ್ ಆಗಿಲ್ಲ. ಒಟ್ನಲ್ಲಿ ಈ ಬಾರಿ ವೀಕೆಂಡ್ ವಿತ್ ರಮೇಶ್ ಹಲವು ವಿಶೇಷತೆಗಳಿಂದ ಕೂಡಿದ್ದು, ಪ್ರೇಕ್ಷಕರು ಕಾತರರಾಗಿದ್ದಾರೆ.

 

RELATED ARTICLES

Related Articles

TRENDING ARTICLES