ಬೆಂಗಳೂರು : ಉರಿಗೌಡ ಮತ್ತು ನಂಜೇಗೌಡ ವಿಚಾರದಲ್ಲಿ ಬಿಜೆಪಿ ನಾಯಕರುಗಳಿಗೆ ನಿರ್ಮಲಾನಂದ ಸ್ವಾಮೀಜಿ ಅವರು ಬುದ್ಧಿ ಹೇಳಿದ್ದೆ ತಪ್ಪು ಎಂದು ಕೆಪಿಸಿಸಿ ಅಧ್ಯ ಕ್ಷ ಡಿ.ಕೆ ಶಿವಕುಮಾರ್ ಹೇಳಿದ್ದಾರೆ.
ಆದಿಚುಂಚನಗಿರಿ ಮಠದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿ.ಕೆ ಶಿವಕುಮಾರ್, ಉರಿಗೌಡ ಹಾಗೂ ನಂಜೇಗೌಡ ಬೇರೆಯಾರು ಅಲ್ಲ. ಶಾಸಕ ಸಿ.ಟಿ ರವಿ ಮತ್ತು ಅಶ್ವಥನಾರಾಯಣ ಅವರೇ ಎಂದು ಹೇಳಿದ್ದಾರೆ.
ನಮ್ಮ ಮಠಕ್ಕೆ ನಾನು ಬರುವುದು ಮತ್ತು ಪೂಜೆಮಾಡುವುದು ಸಾಮಾನ್ಯ. ಇದರಲ್ಲಿ ಯಾವುದೇ ರಾಜಕಾರಣ ಇಲ್ಲ. ಅಮಾವಾಸ್ಯೆ ಪೂಜೆಯು ಕಾಲಭೈರವನ ಪ್ರಸಿದ್ಧ ಧಾರ್ಮಿಕ ಕಾರ್ಯವಾಗಿದೆ. ಹೀಗಾಗಿ ಇಂದು ಕುಟುಂಬ ಸಮೇತವಾಗಿ ಬಂದುಪೂಜೆ ಸಲ್ಲಿಸಿದ್ದೇನೆ ಎಂದು ತಿಳಿಸಿದ್ದಾರೆ.
ಬುದ್ಧಿ ಹೇಳುವ ಅವಶ್ಯಕತೆ ಇಲ್ಲ
ನೂರಕ್ಕೂ ಹೆಚ್ಚು ಅಭ್ಯ ರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಆಗಲಿದೆ. ಬಿಜೆಪಿ ನಾಯಕರಿಗೆ ಶ್ರೀಗಳು ಬುದ್ಧಿ ಹೇಳುವ ಅವಶ್ಯಕತೆ ಇಲ್ಲ. ಈ ಸಮಾಜ ಯಾರನ್ನು ಭಿಕ್ಷೆ ಬೇಡುವ ಅವಶ್ಯ ಕತೆ ಇಲ್ಲ. ಶಾಸಕ ಸಿ.ಟಿ ರವಿ, ಸಚಿವ ಅಶ್ವಥ್ ನಾರಾಯಣ ಹಾಗೂ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೊಸ-ಹೊಸ ಇತಿಹಾಸ ಬರೆಯುತ್ತಿದ್ದಾರೆ ಎಂದಿದ್ದಾರೆ.
ಮುನಿರತ್ನ ಬ್ಯುಸಿನೆಸ್ ಮ್ಯಾನ್
ಸಚಿವ ಮುನಿರತ್ನ ಒಬ್ಬ ಬ್ಯುಸಿನೆಸ್ ಮ್ಯಾನ್. ಆತ ನೂರಾರು ಸಿನಿಮಾ ಮಾಡಿಕೊಳ್ಳಲಿ. ಒಕ್ಕಲಿಗರಿಗೆ ಅರಗಿಸಿಕೊಳ್ಳುವ ಶಕ್ತಿ ಇದೆ. ಒಕ್ಕಲಿಗರ ಸಮುದಾಯಕ್ಕೆ ಕಳಂಕ ತರುವ ಕೆಲಸ ಮಾಡಲಾಗ್ತಿದೆ. ಆದರೆ ಒಕ್ಕಲಿಗರು ಇದರಿಂದ ಹಿಂಜರಿಯುವುದಿಲ್ಲ. ನಮ್ಮ ಸ್ವಾಮಿಗಳು ಅವರನ್ನು ಕರೆದು ಮಾತನಾಡಿದ್ದೆ ತಪ್ಪು. ಇದು ಸ್ವಾಭಿಮಾನದ ಪ್ರಶ್ನೆಯಾಗಿದೆ. ಸರ್ಕಾರದ ಭ್ರಷ್ಟಾಚಾರ ಮರೆಮಾಚಲು ಕಥೆ ಕಟ್ಟಿದ್ದಾರೆ ಎಂದು ಕಿಡಿಕಾರಿದ್ದಾರೆ.