Wednesday, January 22, 2025

‘ನೆಕ್ಲೆಸ್’ ಚೆನ್ನಾಗಿದೆ ಎಂದ ಯಡಿಯೂರಪ್ಪ ಸಖತ್ ಟ್ರೋಲ್!

ಬೆಂಗಳೂರು : ಸದಾ ಶಾಂತ ಸ್ವಾಭಾವದ ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಆಗಾಗ ನೆಟ್ಟಿಗರಿಗೆ ಆಹಾರವಾಗ್ತಾರೆ. ಅದು ಮಹಿಳೆಯರ ವಿಚಾರಕ್ಕೆ ಅನ್ನೋದು ವಿಶೇಷ. ಇದೀಗ ಬಿಎಸ್ ವೈ ವಿಡಿಯೋ ಒಂದು ವೈರಲ್ ಆಗಿ ಬೇಜಾನ್ ಸದ್ದು ಮಾಡುತ್ತಿದೆ.

ಹೌದು, ಬಿ.ಎಸ್.ಯಡಿಯೂರಪ್ಪ ಅವರು ಕಳೆದ ಶುಕ್ರವಾರ ಶಿವಮೊಗ್ಗದ ಶಿಕಾರಿಪುರದಲ್ಲಿ  ಕೆಎಸ್ಸಾರ್ಟಿಸಿ(KSRTC) ನಿಲ್ದಾಣ ಲೋಕಾರ್ಪಣೆಗೊಳಿಸಲು ಆಗಮಿಸಿದ್ದರು. ಅಲ್ಲಿದ್ದ ಮಹಿಳೆಯರು ಅವರಿಗೆ ಆರತಿ ಬೆಳಗಿ ಸ್ವಾಗತಿಸಿದ್ದರು.

ಈ ಸಂದರ್ಭದಲ್ಲಿ ಆರತಿ ಮಾಡುತ್ತಿದ್ದ ಮಹಿಳೆಯ ಕತ್ತಿನಲ್ಲಿದ್ದ ಸರ (ನೆಕ್ಲೆಸ್) ಗಮನಿಸಿದ ಯಡಿಯೂರಪ್ಪನವರು ತುಂಬಾ ಚೆನ್ನಾಗಿ ಕಾಣುತ್ತಿದೆ ಎಂದು ಹೇಳಿ ತಮಾಷೆ ಮಾಡಿದ್ದರು. ಈ ವಿಡಿಯೋ ಭಾರಿ ವೈರಲ್ ಆಗುತ್ತಿದೆ. ವೈರಲ್ ಆದ ವಿಡಿಯೋವನ್ನು ‘THE BOYS’ ಎಂದು ಫನ್ನಿಯಾಗಿ ಎಡಿಟ್ ಮಾಡಿ ಟ್ರೋಲ್ ಮಾಡಲಾಗುತ್ತಿದೆ.

ಶಾಸಕಿ ಹೆಗಲ ಮೇಲೆ ಕೈ ಹಾಕಿದ್ದ ಬಿಎಸ್ ವೈ

ನಿನ್ನೆ ಬಿ.ಎಸ್.ಯಡಿಯೂರಪ್ಪ ಬಿಜೆಪಿ ಸಮಾವೇಶ ಹಿನ್ನೆಲೆಯಲ್ಲಿ ಚಿತ್ರದುರ್ಗ ಜಿಲ್ಲೆಯ ಹಿರಿಯೂರಿಗೆ ತೆರಳಿದ್ದರು. ಈ ವೇಶಳೆ ಸುದ್ದಿಗಾರರೊಂದಿಗೆ ಮಾತನಾಡುತ್ತಿರುವಾಗ ಹಿರಿಯೂರು ಶಾಸಕಿ ಕೆ. ಪೂರ್ಣಿಮಾ ಹೆಗಲ ಮೇಲೆ ಕೈಹಾಕಿದ್ದರು.‌ ಪೂರ್ಣಿಮಾ ನಮ್ಮ ಜೊತೆಗಿದ್ದಾರೆ. ಯಾವುದೇ ಕಾರಣಕ್ಕೂ ಪಕ್ಷ ತೊರೆಯುವುದಿಲ್ಲ ಎಂದು ಹೇಳಿದ್ದರು.

RELATED ARTICLES

Related Articles

TRENDING ARTICLES