Monday, December 23, 2024

ಹೊಸ ಲೋಗೋದೊಂದಿಗೆ ಪ್ರೇಕ್ಷಕರ ಮುಂದೆ ‘ಸ್ಟಾರ್’ ಸುವರ್ಣ

ಬೆಂಗಳೂರು : ಮನರಂಜನಾ ವಾಹಿನಿಗಳು ಹೆಚ್ಚಾದಂತೆ, ಅದರಲ್ಲಿ ಮೂಡಿ ಬರುವ ಕಾರ್ಯಕ್ರಮಗಳು ಹೆಚ್ಚಾಗಿರುತ್ತವೆ. ಪ್ರತಿ ದಿನ, ಪ್ರತಿ ತಿಂಗಳು ಹಾಗೂ ವರ್ಷ ಒಂದಲ್ಲ ಒಂದು ಹೊಸತನದೊಂದಿಗೆ ಪ್ರೇಕ್ಷಕರನ್ನು ಸೆಳೆಯುತ್ತವೆ.

ಹೌದು, ಕಳೆದ 15 ವರ್ಷಗಳಿಂದ ಕನ್ನಡಿಗರನ್ನು ರಂಜಿಸುತ್ತಿರುವ ‘ಸ್ಟಾರ್ ಸುವರ್ಣ’ ವಾಹಿನಿಯು ಇದೀಗ ಇನ್ನಷ್ಟು ಹೊಸ ರೂಪದಲ್ಲಿ ಪ್ರೇಕ್ಷಕರಿಗೆ ರಸದೌತಣ ನೀಡಲು ಸಜ್ಜಾಗಿದೆ.

2007ರಲ್ಲಿ ಕರ್ನಾಟಕದಲ್ಲಿ ಪ್ರಾರಂಭವಾದ ವಾಹಿನಿ ಇದೀಗ ಕರ್ನಾಟಕದ ಮನರಂಜನೆಯ ಗೋಲ್ಡ್ ಫೀಲ್ಡ್  ಆಗಿದೆ. ದಕ್ಷಿಣ ಭಾರತದಲ್ಲೇ ಪ್ರಪ್ರಥಮ ಬಾರಿಗೆ ರಿಯಾಲಿಟಿ ಷೋಗಳಿಗೆ ನಾಂದಿ ಹಾಡುವ ಮೂಲಕ ತನ್ನ ವಿಜಯ ಯಾತ್ರೆಯನ್ನು ಮುಂದುವರೆಸುತ್ತಿದೆ.

ವಿನೂತನ ಪರಿಕಲ್ಪನೆ, ವಿಭಿನ್ನ ಪ್ರಯತ್ನಗಳು ಹಾಗೂ ಆರೋಗ್ಯಕರ ಪೈಪೋಟಿಯ ಮೂಲಕ ಮನರಂಜನೆಯ ಹೊಸ ಆಯಾಮವನ್ನೇ ಸೃಷ್ಟಿಸಿದೆ. ಸೂಪರ್ ಹಿಟ್ ಧಾರಾವಾಹಿಗಳಾದ ಕೃಷ್ಣರುಕ್ಮಿಣಿ, ಪ್ರೀತಿಯಿಂದ, ಅಮೃತವರ್ಷಿಣಿ, ಅವನು ಮತ್ತೆ ಶ್ರಾವಣಿ ನೋಡುಗರ ಮನಗೆದಿತ್ತು. 2016ರಲ್ಲಿ ಸುವರ್ಣ ‘ಸ್ಟಾರ್ ಸುವರ್ಣ’ವಾಗಿ ರೂಪುಗೊಂಡಿತು. ಮನರಂಜನೆ ಕಾರ್ಯಕ್ರಮಗಳ ಮೂಲಕ ಮನರಂಜನೆ ನೀಡುತ್ತಿದೆ.

ನೂತನ ಲೋಗೋ ಅನಾವರಣ

ಮನರಂಜನೆಗೆ ಮೊದಲ ಆದ್ಯತೆ ನೀಡುತ್ತಾ ಬಂದಿರುವ ವಾಹಿನಿ ಇದೀಗ ತನ್ನ ಹೊಸ ಲೋಗೋದೊಂದಿಗೆ ಇನ್ನಷ್ಟು ಹೊಸತನದ ಮೂಲಕ ನಿಮ್ಮ ಮುಂದೆ ಬರುತ್ತಿದೆ. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಪತ್ನಿ ಅಶ್ವಿನಿ ಪುನೀತ್ ರಾಜಕುಮಾರ್ ಹಾಗೂ ನಟ ಡಾಲಿ ಧನಂಜಯ್ ಅವರ ಉಪಸ್ಥಿಯಲ್ಲಿ ಹೊಸ ಲೋಗೋವನ್ನು ಅನಾವರಣ ಮಾಡಲಾಗಿದೆ.

ಒಟ್ಟಾರೆ, ಕಿರುತೆರೆ ಲೋಕದಲ್ಲಿ ಇಂದಿನಿಂದ ಇನ್ನಷ್ಟು ವರ್ಣಮಯಗೊಂಡು ಹೊಸ ರೂಪದಲ್ಲಿ, ಹೊಸ ಪ್ಯಾಕೇಜಿಂಗ್ ನೊಂದಿಗೆ ಹೊಸ ರೀತಿಯ ಧಾರಾವಾಹಿಗಳ ಟೈಟಲ್ ಕಾರ್ಡ್ಸ್ ಜೊತೆಗೆ ಪ್ರೇಕ್ಷಕರನ್ನು ರಂಜಿಸಲು ಸ್ಟಾರ್ ಸುವರ್ಣ ಸನ್ನದ್ಧವಾಗಿದೆ ಎನ್ನಬಹುದು.

RELATED ARTICLES

Related Articles

TRENDING ARTICLES