Monday, December 23, 2024

ಪ್ರಧಾನಿ ಮೋದಿಗೇ ಆಸ್ಕರ್ ಕೊಡ್ಬೇಕು : ಬಿ.ವಿ ಶ್ರೀನಿವಾಸ್ ಲೇವಡಿ

ಬೆಂಗಳೂರು : ಇಡೀ ವೀಶ್ವದಲ್ಲೇ ಯಾರಿಗಾದರೂ ಆಸ್ಕರ್ ಅವಾರ್ಡ್ ಕೊಡಬೇಕು ಅಂದ್ರೆ ಅದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕೊಡಬೇಕು ಎಂದು ಯುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಬಿ.ವಿ ಶ್ರೀನಿವಾಸ್ ಲೇವಡಿ ಮಾಡಿದ್ದಾರೆ.

ಬೆಳಗಾವಿಯಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ ನಡೆಯುತ್ತಿರುವ ಯುವ ಕ್ರಾಂತಿ ಸಮಾವೇಶದಲ್ಲಿ ಮಾತನಾಡಿ, ರಾಜ್ಯ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಬೆಳಗ್ಗೆ ಎದ್ದ ಕೂಡಲೇ ಸುಳ್ಳು ಹೇಳುತ್ತಾರೆ. ಮಧ್ಯಾಹ್ನ ಬರ್ತಾರೆ ಒಮದು ಸುಳ್ಳು ಹೇಳ್ತಾರೆ. ರಾತ್ರಿ ಬರ್ತಾರೆ ಒಂದು ಸುಳ್ಳು ಹೇಳ್ತಾರೆ. ದಿನವಿಡೀ ಸುಳ್ಳು ಹೇಳುವುದೇ ಮೋದಿ ಅವರ ಸಾಧನೆ. ಸಾವಿರ ಸುಳ್ಳಿನ ಸರದಾರ ಎಂದು ಮೋದಿ ವಿರುದ್ಧ ಗುಡುಗಿದ್ದಾರೆ.

ಬಿಜೆಪಿ ಅಂದ್ರೆ ಸುಳ್ಳು ಹೇಳುವ ಪಾರ್ಟಿ

ಬಿಜೆಪಿ ಅಂದ್ರೆ ನಿರುದ್ಯೋಗ ಸಮಸ್ಯೆ. ಬಿಜೆಪಿ ಅಂದ್ರೆ 40%. ಬಿಜೆಪಿ ಅಂದ್ರೆ ಸುಳ್ಳು ಹೇಳುವ ಪಾರ್ಟಿ. ಇದು ಇಡೀ ದೇಶದ ಜನರಿಗೆ ಗೊತ್ತಿರುವ ವಿಷಯ. ರಾಹುಲ್ ಗಾಂಧಿ ತಮ್ಮ 18 ವರ್ಷದ ರಾಜಕೀಯ ಜೀವನದಲ್ಲಿ ಯಾವುದಾದರು ಒಂದು ಸುಳ್ಳು ಹೇಳಿದ್ದರೆ ತೋರಿಸಲಿ. ಅಚ್ಚೇ ದಿನ ಅಂದ್ರು, ಎಲ್ಲಿ ಸ್ವಾಮಿ ಅಚ್ಚೇ ದಿನ್. 400 ಗ್ಯಾಸ್ 800 ರೂ. ಆಯ್ತು ಎಂದು ಆಕ್ರೋಶ ಹೊರಹಾಕಿದ್ದಾರೆ.

ಕಾಂಗ್ರಸ್ ಪಕ್ಷ ಮೂರು ಗ್ಯಾರೆಂಟಿಗಳನ್ನು ಕೊಟ್ಟಿದೆ. ಇದೀಗ ರಾಹುಲ್ ಗಾಂಧಿ ಮತ್ತೊಂದು ಗ್ಯಾರೆಂಟಿ ಘೋಷಿಸಲಿದ್ದಾರೆ. ಯುವ ಕ್ರಾಂತಿ ಸಮಾವೇಶದ ಮೂಲಕ ರಾಜ್ಯದ ಯುವಜನತೆಗೆ ರಾಹುಲ್ ಗಾಂಧಿ ಅಭಯ ನೀಡಲಿದ್ದಾರೆ ಎಂದು ಹೇಳಿದ್ದಾರೆ.

RELATED ARTICLES

Related Articles

TRENDING ARTICLES