ಬೆಂಗಳೂರು : ರಾಜ್ಯ ರಾಜಕೀಯ ನಾಯಕರ ಮುಂದಿರುವ ದೊಡ್ಡ ಸವಾಲು ವಿಧಾನಸಭಾ ಚುನಾವಣೆ. ಹೌದು, ಚುನಾವನೆ ಸಮೀಪಿಸುತ್ತಿದ್ದಂತೆ ಮತದಾರರ ಓಲೈಕೆಗೆ ರಾಜಕೀಯ ನಾಯಕರು ಹರಸಾಹಸಕ್ಕೆ ಮುಂದಾಗಿದ್ದಾರೆ.
ರೇಷನ್ ಕಿಟ್, ಕುಕ್ಕರ್, ಸೀರೆ, ಬೆಳ್ಳಿ ವಿಗ್ರಹ ಆಯ್ತು, ಇದೀಗ ಮತದಾರರ ಓಲೈಕೆಗೆ ಲಂಚ್ ಬಾಕ್ಸ್ ಆಮೀಷವೊಡ್ಡಿ ಮತದಾರರನ್ನು ಸೆಳೆಯಲು ಮುಂದಾಗಿದ್ದಾರೆ. ಆದರೆ, ದುರಾದೃಷ್ಟವಶಾತ್ ಅಧಿಕಾರಿಗಳು 400ಕ್ಕೂ ಹೆಚ್ಚು ಲಂಚ್ ಬಾಕ್ಸ್ ಗಳನ್ನು ಜಪ್ತಿ ಮಾಡಿದ್ದಾರೆ.
ಮಾಜಿ ಸಚಿವ ರಮೇಶ್ ಜಾರಕಿಹೊಳಿ ಆಪ್ತ ನಾಗೇಶ್ ಮನ್ನೋಳ್ಕರ್ ಗೆ ಚುನಾವಣಾ ಅಧಿಕಾರಿಗಳು ಶಾಕ್ ನಿಡಿದ್ದಾರೆ. ಹೆಬ್ಬಾಳ್ಕರ್ ಕ್ಷೇತ್ರದಲ್ಲಿ ಹಂಚಲು ತಂದಿದ್ದ ಲಂಚ್ ಬಾಕ್ಸ್ ಜಪ್ತಿ ಮಾಡಲಾಗಿದೆ. ಬೆಳಗಾವಿ ಜಿಲ್ಲಾಧಿಕಾರಿ, ಚುನಾವಣಾಧಿಕಾರಿ ನಿತೇಶ್ ಪಾಟೀಲ್ ಸೂಚನೆ ಮೇರೆಗೆ ದಾಳಿ ನಡೆಸಿದ್ದು, ಕುದ್ರೆಮನಿ ಗ್ರಾಮದಲ್ಲಿ ಮತದಾರರಿಗೆ ಹಂಚಲು ಟಿಫಿನ್ ಬಾಕ್ಸ್ ತಂದಿದ್ದಾರೆ.
ಬಿಜೆಪಿ ಟಿಕೆಟ್ ಆಕಾಂಕ್ಷಿ ನಾಗೇಶ್
ಕುದ್ರೆಮನಿ ಗ್ರಾಮ ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿದೆ. ಮತದಾರರಿಗೆ ಗಿಫ್ಟ್ ಕೊಡಲು ಲಂಚ್ ಬಾಕ್ಸ್ ಸಂಗ್ರಹಿಸಿಟ್ಟಿದ್ದ ಆರೋಪ ಮಾಡಲಾಗಿದೆ. ಬಿಜೆಪಿ ಟಿಕೆಟ್ ಆಕಾಂಕ್ಷಿ ನಾಗೇಶ್ ಮನ್ನೋಳ್ಕರ್ ಭಾವಚಿತ್ರ ಇರುವ ಲಂಚ್ ಬಾಕ್ಸ್ ಇದಾಗಿದೆ.
ಅಧಿಕಾರಿಗಳು 400ಕ್ಕೂ ಹೆಚ್ಚು ಲಂಚ್ ಬಾಕ್ಸ್ ವಶಕ್ಕೆ ಪಡೆದಿದ್ದಾರೆ. ನಾಗೇಶ್ ಗ್ರಾಮೀಣ ಠಾಣೆ ವ್ಯಾಪ್ತಿಯಲ್ಲಿ ಬಾಡೂಟ ಆಯೋಜನೆ ಮಾಡಿದ್ದು, ನಾಗೇಶ್ ಮನ್ನೋಳಕರ್ ಸೇರಿ ಇಬ್ಬರ ವಿರುದ್ಧ ಕೇಸ್ ದಾಖಲು ಮಾಡಲಾಗಿದೆ.