Sunday, December 22, 2024

ಮತ್ತೆ ನಾಲಿಗೆ ಹರಿಬಿಟ್ಟ ಪ್ರಮೋದ್ ಮುತಾಲಿಕ್ : ಹೊಸ ಕ್ಯಾತೆ ಶುರು?

ಬೆಂಗಳೂರು : ವಿಧಾನಸಭಾ ಚುನಾವಣೆ ಫೀವರ್ ಇದೆ. ಯುಗಾದಿ ಹಬ್ಬ ಬೇರೆ ಬರ್ತಾ ಇದೆ. ಇಷ್ಟಿದ್ದ ಮೇಲೆ ಪ್ರಮೋದ್ ಮುತಾಲಿಕ್ ಕ್ಯಾತೆ ಬೇಡ್ವೇ?

ಹೌದು, ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಯುಗಾದಿ ಹಬ್ಬದ ಸಂಭ್ರಮದಲ್ಲಿ ಮತ್ತೆ ಧರ್ಮ ದಂಗಲ್ ನ ಕಿಚ್ಚು ಹಚ್ಚಿದ್ದಾರೆ. ಮುಸ್ಲಿಮರು ಹಿಂದೂಗಳು ಕಟ್ ಮಾಡಿದ ಮಾಂಸ ತಿನ್ನುಲ್ಲ.. ನಾವ್ ಯಕ್ರೀ ಹಲಾಲ್ ಮಾಂಸವನ್ನು ತಿನ್ನಬೇಕು? ಅಂತಾ ಹೇಳಿದ್ದಾರೆ.

ಮಂಗಳೂರಿನಲ್ಲಿ ಮಾತನಾಡಿದ ಅವರು, ಈ ಬಾರಿಯೂ ಯುಗಾದಿ ಸಂದರ್ಭ ಹಲಾಲ್ ಕಟ್ ಬಹಿಷ್ಕಾರ ಅಭಿಯಾನ ಮುಂದುವರೆಯಲಿದೆ. ಹಲಾಲ್ ಕಟ್ ಬಹಿಷ್ಕರಿಸಿ ಜಟ್ಕಾ ಕಟ್ ಸ್ವೀಕರಿಸಿ ಎಂದು ಕಳೆದ ವರ್ಷ ಆರಂಭಿಸಿದ ಅಭಿಯಾನ ಯಶಸ್ವಿಯಾಗಿತ್ತು ಎಂದು ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.

ಎರಡು ಲಕ್ಷ ಕೋಟಿ ಎಲ್ಲಿಗೆ ಹೋಗುತ್ತೆ?

ಹಲಾಲ್ ಇಸ್ಲಾಂನದ್ದು, ಹಿಂದೂಗಳಿಗೆ ಸಂಬಂಧಿಸಿದ್ದಲ್ಲ. ಮುಸ್ಲಿಮರು ಹಿಂದೂಗಳು ಕಟ್ ಮಾಡಿದ ಮಾಂಸ ತಿನ್ನುವುದಿಲ್ಲ. ನಾವು ಯಾಕೆ ಅವರ ಹಲಾಲ್ ಮಾಂಸವನ್ನು ತಿನ್ನಬೇಕು? ಹಾಲಾಲ್​ನಿಂದ ಜಲಾಮ್-ಉಲೇಮಾ ಟ್ರಸ್ಟ್​ಗೆ ಎರಡು ಲಕ್ಷ ಕೋಟಿ ಆದಾಯವಿದೆ. ಈ ದುಡ್ಡು ಎಲ್ಲಿ ಖರ್ಚು ಆಗುತ್ತಿದೆ? ಹಲಾಲ್​ನ ದುಡ್ಡು ಉಗ್ರಗಾಮಿಗಳಿಗೆ ಸಂದಾಯವಾಗುತ್ತದೆ. ಭಯೋತ್ಪಾದನೆ, ಗಲಭೆ ಕೃತ್ಯಗಳಿಗೆ ಬಳಕೆಯಾಗುತ್ತಿದೆ ಎಂದು ಕಿಡಿಕಾರಿದ್ದಾರೆ.

ಅಲ್ಲಾಹು ಅಕ್ಬರ್ ಕೂಗಿದ್ದಕ್ಕೆ 5 ಲಕ್ಷ ರೂ.

ಕಳೆದ ವರ್ಷ ಮಂಡ್ಯದಲ್ಲಿ ಅಲ್ಲಾಹು ಅಕ್ಬರ್ ಕೂಗಿದ ವಿದ್ಯಾರ್ಥಿನಿಗೆ ಈ ಟ್ರಸ್ಟ್ 5 ಲಕ್ಷ ರೂ. ನೀಡಿದೆ. ರಾಜ್ಯದಲ್ಲಿ ನಡೆದ ಗಲಭೆಯ ಹಿಂದೆ ಹಲಾಲ್​ನ ಹಣವಿದೆ. ಹಲಾಲ್ ಸೇವಿಸಿ ಹಿಂದೂಗಳು, ಹಿಂದೂಗಳ ವಿರುದ್ಧ ಷಡ್ಯಂತ್ರಕ್ಕೆ ನಾವೇ ಕಾರಣವಾಗುತ್ತಿದ್ದೇವೆ ಎಂದು ತಿಳಿಸಿದ್ದಾರೆ.

RELATED ARTICLES

Related Articles

TRENDING ARTICLES