Sunday, January 19, 2025

ನನ್ನ ಸಾಧನೆ ನೋಡಿ ಶಿವನ ಪಾದ ಸೇರಿಕೊಳ್ಳಿ ಎಂದಿದ್ದೇನೆ : ಕುಮಾರಸ್ವಾಮಿ ಭಾವುಕ

ಬೆಂಗಳೂರು : ವಿಧಾನಸಭೆ ಚುನಾವಣೆಗೆ ಕೆಲವೇ ತಿಂಗಳು ಬಾಕಿ ಇದ್ದು, ಉಭಯ ಪಕ್ಷಗಳು ಆಡಳಿತ ಚುಕ್ಕಾಣಿ ಹಿಡಿಯಲು ಅಬ್ಬರದ ಪ್ರಚಾರದಲ್ಲಿವೆ. ಅದರಂತೆ ಜೆಡಿಎಸ್ ಪಕ್ಷ ಕೂಡ ರಾಜ್ಯಾದ್ಯಂತ ಪಂಚರತ್ನ ಯಾತ್ರೆ ಹಮ್ಮಿಕೊಂಡಿದೆ.

ಹೌದು, ಹೇಗಾದರೂ ಮತದಾರರನ್ನು ಸೆಳೆಯಲು ಪ್ರಯತ್ನಿಸುತ್ತಿದೆ. ಈ ಯಾತ್ರೆ ವೇಳೆ ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಭಾವನಾತ್ಮಕವಾಗಿ ಭಾಷಣ ಮಾಡಿದ್ದಾರೆ.

ದೇವೇಗೌಡರಿಗೆ ಶಪಥ ಮಾಡಿ ಬಂದಿದ್ದೇನೆ

ಮೊನ್ನೆ ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡರನ್ನು ಮಣಿಪಾಲ್ ಆಸ್ಪತ್ರೆಗೆ ಸೇರಿಸಲಾಗಿತ್ತು. ಆರೋಗ್ಯದ ಸಮಸ್ಯೆಯಿಂದ ಹಲವು ಕಡೆ ದೇವೇಗೌಡರು ಬರಲು ಆಗಿಲ್ಲ. ನಾನು ಆಸ್ಪತ್ರೆಗೆ ಹೋಗಿದ್ದಾಗ ದೇವೇಗೌಡರಿಗೆ ಶಪಥ ಮಾಡಿ ಬಂದಿದ್ದೇನೆ. ನೀವು 60 ವರ್ಷ ಸಾಧನೆ ಮಾಡಿದ್ದನ್ನು ಸಾಧಿಸಿ ತೋರಿಸುತ್ತೇನೆ ಎಂದಿದ್ದೇನೆ ಎಂದು ಭಾವುಕರಾಗಿದ್ದಾರೆ.

ಮೈಸೂರಿನ ಪಂಚರತ್ನ ಯಾತ್ರೆ ಕಾರ್ಯಕ್ರಮದಲ್ಲಿ ಮಾತನಾಡಿದ ಎಚ್.ಡಿ ಕುಮಾರಸ್ವಾಮಿ, ನೀವು 60 ವರ್ಷ ಸಾಧನೆ ಮಾಡಿದ್ದನ್ನು ಸಾಧಿಸಿ ತೋರಿಸುತ್ತೇನೆ ಎಂದು ದೇವಗೌಡರ ಬಳಿ ಶಪಥ ಮಾಡಿ ಬಂದಿದ್ದೇನೆ.

ಅದನ್ನು ನೋಡಿದ ದಿನ ಬೇಕಾದರೆ ನೀವು ಶಿವನ ಪಾದವನ್ನು ಸೇರಿಕೊಳ್ಳಿ ಎಂದಿದ್ದೇನೆ. ಅಲ್ಲಿಯವರೆಗೂ ನೀವು ಸಾಯಬಾರದು ಎಂದು ಅವರ ಕೈ ಮುಟ್ಟಿ ಶಪಥ ಮಾಡಿದ್ದೇನೆ ಎಂದು ಟಿ.ನರಸೀಪುರದಲ್ಲಿ ಎಚ್.ಡಿ ಕುಮಾರಸ್ವಾಮಿ ಭಾವುಕರಾಗಿ ಮಾತನಾಡಿದ್ದಾರೆ.

RELATED ARTICLES

Related Articles

TRENDING ARTICLES