Friday, November 22, 2024

ಯುಗಾದಿ ಹಬ್ಬಕ್ಕೆ ಬೆಲೆ ಏರಿಕೆಯ ಬಿಸಿ : ಹೀಗಿದೆ ಹೂವು, ಹಣ್ಣಿನ ಬೆಲೆ

ಬೆಂಗಳೂರು : ಯುಗಾದಿ ಹಬ್ಬಕ್ಕೆ ಕೇವಲ ಎರಡೇ ದಿನ ಬಾಕಿ ಇದೆ. ಬೆಲೆ ಏರಿಕೆ ನಡುವೆಯೂ ಹೂವು, ಹಣ್ಣು ಖರೀದಿ ಭರಾಟೆ ಜೋರಾಗಿದೆ. ಕೋವಿಡ್ ನಿಂದಾಗಿ ಕಳೆಗುಂದಿದ್ದ ಹಬ್ಬಕ್ಕೆ ಈ ಬಾರಿ ಮೆರುಗು ಬಂದಿದೆ.

ಹೌದು, ಮಾರುಕಟ್ಟೆಗಳಲ್ಲಿ ವ್ಯಾಪಾರಿಗಳಿಗೆ ವ್ಯಾಪಾರದ ರಂಗು, ಮತ್ತೊಂದೆಡೆ ಗ್ರಾಹಕರಿಗೆ ಬೆಲೆ ಏರಿಕೆಯ ಶಾಕ್. ಇದು ಕೊರೊನಾ ನಂತರ ಸಂಭ್ರಮ ತಂದಿರುವ ಯುಗಾದಿಯ ವಿಶೇಷ.

ಜನವರಿ 1 ಪಾಶ್ಚಿಮಾತ್ಯರಿಗೆ ಹೊಸ ವರ್ಷ ವಾದ್ರೆ, ಹಿಂದೂಗಳಿಗೆ ಯುಗಾದಿಯೇ ಹೊಸ ವರ್ಷ. ಕಳೆದ 3 ವರ್ಷದಿಂದ ಕೊರೋನಾ ಮಹಾಮಾರಿಯಿಂದ ಯುಗಾದಿ ಹಬ್ಬದ ಮೇಲೆ ಕರಿನೆರಳು ಬಿದ್ದಿತ್ತು. ಹೀಗಾಗಿ ಯುಗಾದಿ ಹಬ್ಬವನ್ನು ಅಷ್ಟೇನೂ ಸಂಭ್ರಮದಿಂದ ಆಚರಣೆ ಮಾಡಿರಲಿಲ್ಲ.

ಒಂದೆಡೆ ಚಿಗುರಿದ ಮಾವು. ಮತ್ತೊಂದೆಡೆ, ಕಂಪು ಬೀರುವ ಮಲ್ಲಿಗೆ. ಹೀಗೆ ಇಡೀ ಮಾರುಕಟ್ಟೆಗಳಲ್ಲಿ ಹಬ್ಬದ ವಾತವರಣವೇ ಮನೆ ಮಾಡಿದೆ. ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿದ್ದರೂ, ಗ್ರಾಹಕರು ಮಾತ್ರ ತಮಗೆ ಬೇಕಾದ ವಸ್ತುಗಳ ಖರೀದಿಯಲ್ಲಿ ಬ್ಯೂಸಿಯಾಗಿದ್ದಾರೆ.

ಹೀಗಿದೆ ಹಣ್ಣುಗಳ ಬೆಲೆ

ಕಳೆದ ವಾರ                                ಪ್ರಸ್ತುತ

ಸೇಬು  -120 ರೂ. (ಕೆ.ಜಿ)            – 200 ರೂ.

ದ್ರಾಕ್ಷಿ – 60 ರೂ. (ಕೆ.ಜಿ)              –  70 ರೂ.

ದಾಳಿಂಬೆ- 180 ರೂ. (ಕೆ.ಜಿ)         – 220 ರೂ.

ಕಿತ್ತಳೆ ಹಣ್ಣು- 100 ರೂ. (ಕೆ.ಜಿ)      – 120 ರೂ.

ಬಾಳೆಹಣ್ಣು – 50 ರೂ. (ಕೆ.ಜಿ)       – 70 ರೂ.

 

ಹೀಗಿದೆ ಹೂವಿನ ಬೆಲೆ

ಕಳೆದ ವಾರ                                       ಪ್ರಸ್ತುತ

ಮಲ್ಲಿಗೆ –  220 ರೂ. (ಕೆ.ಜಿ)                  – 400 ರೂ.

ಕನಕಾಂಬರ –  400 ರೂ. (ಕೆ.ಜಿ)           – 800 ರೂ.

ಗುಲಾಬಿ –  60 ರೂ. (ಕೆ.ಜಿ)                 – 200 ರೂ.

ಕಾಕಡ -350 ರೂ. (ಕೆ.ಜಿ)                   – 400 ರೂ.

ಸೇವಂತಿಗೆ – 80 ರೂ. (ಕೆ.ಜಿ)                – 160 ರೂ.

ಒಟ್ಟಾರೆ, ಕೋವಿಡ್ ನಂತರ ಯುಗಾದಿ ಹಬ್ಬಕ್ಕೆ ಹೊಸ ಕಳೆ ಬಂದಿದೆ. ವರ್ಷದ ಮೊದಲ ಹಬ್ಬವನ್ನು ಸಂಭ್ರಮದಿಂದ ಆಚರಿಸಲು ರಾಜ್ಯದ ಜನರು ಕಾತರಾಗಿದ್ದಾರೆ.

 

RELATED ARTICLES

Related Articles

TRENDING ARTICLES