Monday, December 23, 2024

ಬೊಮ್ಮಾಯಿಯವರಷ್ಟು ಸಿಂಪಲ್ CMನ ನಾನು ನೋಡೇ ಇಲ್ಲ : ಆರ್. ಅಶೋಕ್

ಬೆಂಗಳೂರು : ರಾಜ್ಯದಲ್ಲಿ ಚುನಾವಣೆ ಫೀವರ್ ಶುರುವಾಗಿದೆ. ಹೀಗಾಗಿ, ಸಾಮಾನ್ಯವಾಗಿಯೇ ರಾಜಕೀಯ ನಾಯಕರು ತಮ್ಮ ಪಕ್ಷದ ನಾಯಕರನ್ನು ಹೊಗಳುವುದು ಸರ್ವೇ ಸಾಮಾನ್ಯ. ಬಿಜೆಪಿ ನಾಯಕರು ಇದಕ್ಕೆ ಹೊರತಾಗಿಲ್ಲ.

ಕಂದಾಯ ಸಚಿವ ಆರ್. ಅಶೋಕ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರನ್ನು ಬೆಂಗಳೂರಿನಲ್ಲಿ ಹಾಡಿ ಹೊಗಳಿದ್ದಾರೆ. ಬಸವನಗುಡಿಯ ನ್ಯಾಷನಲ್ ಕಾಲೇಜ್ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿ, ಸಿಎಂ ಬೊಮ್ಮಾಯಿಯವರಷ್ಟು ಸಿಂಪಲ್ ಸಿಎಂನ ನಾನು ನೋಡೇ ಇಲ್ಲ ಎಂದು ಆರ್. ಅಶೋಕ್ ಹೊಗಳಿದ್ದಾರೆ.

ಕಾಮನ್‌ಮ್ಯಾನ್ ಸಿಎಂ

ಇದು ಕಾಂಪ್ಲೆಕ್ಸ್ ಕಟ್ಟುವ ಕಾರ್ಯಕ್ರಮವಲ್ಲ, ಬಡವರ ಕಾರ್ಯಕ್ರಮ. ಬಡವರಿಗೆ ಸೈಟ್ ಕೊಡುವ ಕಾರ್ಯಕ್ರಮ ಎಂದ ತಕ್ಷಣ ಸಿಎಂ ನಾನು ಬರುತ್ತೇನೆ ಎಂದರು. ನಾನು ತುಂಬಾ ಸಿಎಂಗಳ ಜೊತೆ ಕೆಲಸ ಮಾಡಿದ್ದೇನೆ. ಆದರೆ, ಬೊಮ್ಮಾಯಿಯವರಷ್ಟು ಸಿಂಪಲ್ ಸಿಎಂನ ನಾನು ಎಲ್ಲಿಯೂ ನೋಡಿಲ್ಲ. ಕಾಮನ್‌ಮ್ಯಾನ್ ಸಿಎಂ ಎಂದು ಬಣ್ಣಿಸಿದ್ದಾರೆ.

ನನಗೆ ಕೆಲಸ ಮಾಡಲು ಪೂರ್ತಿ ಸ್ವಾತಂತ್ರ್ಯ ಕೊಟ್ಟಿದ್ದಾರೆ. ಬಡವರಿಗೋಸ್ಕರ ಏನು ಕೆಲಸ ಆದರೂ ಮಾಡು, ಅದಕ್ಕೆ ಸಹಿ ಮಾಡಲು ನಾನು ತಯಾರಿದ್ದೇನೆ ಅಂತಾ ಸಿಎಂ ಬೊಮ್ಮಾಯಿ ಹೇಳಿದ್ದಾರೆ ಎಂದಿದ್ದಾರೆ.

ಕಾರ್ಯಕ್ರಮದಲ್ಲಿ ಕರ್ನಾಟಕ ಭೂಕಂದಾಯ ಕಾಯ್ದೆ 1964ರ ಕಲಂ 94(ಸಿ), 94(ಸಿಸಿ) ಯೋಜನೆಯಡಿಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ 5,000 ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸಿದ್ದಾರೆ.

RELATED ARTICLES

Related Articles

TRENDING ARTICLES