ಬೆಂಗಳೂರು : ಭಾರತ ಹಾಗೂ ಆಸ್ಟ್ರೇಲಿಯಾ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಮುಗ್ಗರಿಸಿದೆ.
ಟೀಂ ಇಂಡಿಯಾ ಬ್ಯಾಟರ್‌ಗಳು ಮರೆತವರಂತೆ ಬ್ಯಾಟಿಂಗ್ ಮಾಡಿದ್ದು, ಆಸಿಸಿ ವೇಗಿ ಸ್ಟಾರ್ಕ್ ಬೌಲಿಂಗ್ ಬಿರುಗಾಳಿಗೆ ತರಗೆಲೆಗಳಂತೆ ವಿಕೆಟ್‌ಗಳು ಉದುರಿದವು. ಆಸೀಸ್ ಮಾರಕ ಬೌಲಿಂಗ್ ದಾಳಿಗೆ ತತ್ತರಿಸಿದ ಭಾರತ, 117 ರನ್‌ಗಳಿಗೆ ಆಲೌಟಾಗಿದೆ.
ಆಸಿಸ್ ಪರ ವೇಗಿ ಸ್ಟಾರ್ಕ್ 5 ವಿಕೆಟ್ ಪಡೆದು ಮಿಂಚಿದರು. ಅಬೋಟ್ 3, ನಥನ್ 2 ವಿಕೆಟ್ ಪಡೆದು ಸ್ಟಾರ್ಕ್ ಅವರಿಗೆ ಉತ್ತಮ ಸಾಥ್ ನೀಡಿದರು. ಭಾರತದ ಪರ ವಿರಾಟ್ ಕೊಹ್ಲಿ 31, ಅಕ್ಷರ್ 29* ರನ್ ಗಲಿಸಿದ್ದು ಬಿಟ್ಟರೆ ಉಳಿದ ಬ್ಯಾಟರ್‌ಗಳು ಅಲ್ಪ ಮೊತ್ತಕ್ಕೆ ಔಟಾದರು. ಸೂರ್ಯಕುಮಾರ್ 2ನೇ ಬಾರಿಗೆ ಡಕ್‌ಔಟ್ ಆದರು.
2ನೇ ಬಾರಿಗೆ ಡಕ್‌ಔಟ್
ಟೀಂ ಇಂಡಿಯಾ ಫ್ಯೂಚರ್ ಸ್ಟಾರ್ ಸೂರ್ಯಕುಮಾರ್ ಯಾದವ್ ಅಭಿಮಾನಿಗಳಿಗೆ ಮತ್ತೊಮ್ಮೆ ನಿರಾಸೆ ಮೂಡಿಸಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಸ್ಟಾರ್ಕ್ ಬೌಲಿಂಗ್ ನಲ್ಲಿ LBWಗೆ ಬಲಿಯಾಗಿದ್ದರು. ಇದೀಗ ಎರಡನೇ ಪಂದ್ಯದಲ್ಲಿಯೂ ಅದೇ ರೀತಿ ಔಟ್ ಆಗಿದ್ದಾರೆ. ಎರಡೂ ಪಂದ್ಯದಲ್ಲಿ ಗೋಲ್ಡನ್ ಡಕ್ ಆಗಿ ಪೆವಿಲಿಯನ್ ಹಾದಿ ಹಿಡಿದಿದ್ದು ಸೂರ್ಯಕುಮಾರ್ ಅಭಿಮಾನಿಗಳಿಗೆ ನಿರಾಸೆಯಾಗಿದೆ.