Friday, November 22, 2024

ಸ್ಪ್ಯಾನಿಶ್, ಇಟಾಲಿಯನ್ ಭಾಷೆಯಲ್ಲಿ ‘ಕಾಂತಾರ’ ರಿಲೀಸ್

ಬೆಂಗಳೂರು : ಕನ್ನಡದ ಸಿನಿಮಾಗಳು ದೇಶ-ಭಾಷೆಯ ಗಡಿ ಮೀರಿ ಬೆಳೆದಿವೆ. ಅದಕ್ಕೆ ‘ಕಾಂತಾರ’ ಸಿನಿಮಾದ ಯಶಸ್ಸೇ ಸಾಕ್ಷಿ. ಈ ಚಿತ್ರದಿಂದ ನಿರ್ಮಾಣ ಆಗಿರುವ ದಾಖಲೆಗಳು ಒಂದೆರಡಲ್ಲ.

ಹೌದು, ಸಾಧಾರಣ ಬಜೆಟ್​ನಲ್ಲಿ ಸಿದ್ಧವಾದ ಈ ಸಿನಿಮಾ ಬಾಕ್ಸ್​ ಆಫೀಸ್​ನಲ್ಲಿ 400 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್​ ಮಾಡಿದ್ದು ಈಗ ಇತಿಹಾಸ. ಇದರ ನಾಗಾಲೋಟ ಇನ್ನೂ ನಿಂತಿಲ್ಲ. ಈಗ ಕೆಲವು ವಿದೇಶಿ ಭಾಷೆಗಳಲ್ಲೂ ‘ಕಾಂತಾರ’ ರಿಲೀಸ್​ ಆಗಲಿದೆ.

ಬೇರೆ ದೇಶಗಳ ಪ್ರೇಕ್ಷಕರಿಂದ ಬೇಡಿಕೆ

ರಿಷಬ್​ ಶೆಟ್ಟಿ ನಿರ್ದೇಶನದ ಈ ಚಿತ್ರಕ್ಕೆ ಬೇರೆ ಬೇರೆ ದೇಶಗಳ ಪ್ರೇಕ್ಷಕರಿಂದ ಬೇಡಿಕೆ ಬಂದಿದೆ. ಹಾಗಾಗಿ, ಇಟಾಲಿಯನ್​ ಮತ್ತು ಸ್ಪ್ಯಾನಿಶ್​​ ಭಾಷೆಗಳಿಗೆ ಡಬ್​ ಮಾಡಿ ತೆರೆಕಾಣಿಸಲು ಸಿದ್ಧತೆ ನಡೆದಿದೆ. ಈ ಖುಷಿ ಸುದ್ದಿಯನ್ನು ‘ಹೊಂಬಾಳೆ ಫಿಲ್ಮ್ಸ್​’ ಹಂಚಿಕೊಂಡಿದೆ.

ಇದನ್ನೂ ಓದಿ : ‘MeToo’ ಬಗ್ಗೆ ಶಾಕಿಂಗ್ ಹೇಳಿಕೆ ಕೊಟ್ಟ ಸಾಯಿ ಪಲ್ಲವಿ

ಶೀಘ್ರದಲ್ಲೇ ರಿಲೀಸ್​ ದಿನಾಂಕ ಪ್ರಕಟ ಆಗಲಿದೆ. ಮೊದಲು ‘ಕಾಂತಾರ’ ಬಿಡುಗಡೆ ಆಗಿದ್ದು ಕನ್ನಡದಲ್ಲಿ ಮಾತ್ರ. ಮೊದಲ ದಿನವೇ ಈ ಚಿತ್ರಕ್ಕೆ ಭರ್ಜರಿ ಪ್ರತಿಕ್ರಿಯೆ ಸಿಕ್ಕಿತು. ಪರಭಾಷೆ ಪ್ರೇಕ್ಷಕರು ಕೂಡ ಆಸಕ್ತಿ ತೋರಿಸಿದ್ದರಿಂದ ತಮಿಳು, ತೆಲುಗು, ಮಲಯಾಳಂ ಹಾಗೂ ಹಿಂದಿ ಭಾಷೆಗೆ ಡಬ್​ ಮಾಡಿ ರಿಲೀಸ್​ ಮಾಡಲಾಯಿತು. ಎಲ್ಲ ಭಾಷೆಗಳಿಂದಲೂ ಉತ್ತಮ ಕಲೆಕ್ಷನ್​ ಆಯಿತು.

ಓಟಿಟಿ ಪ್ರೇಕ್ಷಕರಿಗಾಗಿ ಇಂಗ್ಲಿಷ್​ ವರ್ಷನ್​ ಕೂಡ ರಿಲೀಸ್​ ಆಯಿತು. ಈಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಇಟಾಲಿಯನ್​ ಮತ್ತು ಸ್ಪ್ಯಾನಿಶ್​​ ಭಾಷೆಗಳಿಗೆ ಡಬ್​ ಮಾಡಲಾಗುತ್ತಿರುವುದು ವಿಶೇಷ.

RELATED ARTICLES

Related Articles

TRENDING ARTICLES