Monday, December 23, 2024

ಭಾರತಕ್ಕೇ ಹೀನಾಯ ಸೋಲು : ಸರಣಿ 1-1 ಸಮಬಲ

ಬೆಂಗಳೂರು : ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಎರಡನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಹೀನಾಯ ಸೋಲು ಅನುಭವಿಸಿದೆ.

ಭಾರತದ ವಿರುದ್ಧ ಆಸಿಸ್ 10 ವಿಕೆಟ್ ಅಂತರದ ಭರ್ಜರಿ ಜಯ ದಾಖಲಿಸಿದೆ. ಕೇವಲ 118 ರನ್ ಗುರಿ ಬೆನ್ನಟ್ಟಿದ ಆಸಿಸಿ ವಿಕೆಟ್ ನಷ್ಟವಿಲ್ಲದೆ 11 ಓವರ್ ಗಳಲ್ಲೇ ಜಯದ ಹಾದಿ ಮುಟ್ಟಿತು.

ಆಸಿಸ್ ಪರ ಮಿಚೆಲ್ ಮಾರ್ಷ್ ಅಜೇಯ 66 ಹಾಗೂ ಟ್ರಾವಿಸ್ ಅಜೇಯ 51 ರನ ಸಿಡಿಸಿದರು. ಮೊದಲ ಇನ್ನಿಂಗ್ಸ್ ನಲ್ಲಿ ನೀರಸ ಬ್ಯಾಟಿಂಗ್ ಪ್ರದರ್ಶಿಸಿದ ಟೀಂ ಇಂಡಿಯಾ ಬೌಲಿಂಗ್ ನಲ್ಲೂ ಕಳಪೆ ಆಟ ಪ್ರದರ್ಶಿಸಿತು.

ರೋಹಿತ್ ಪಡೆ ಬ್ಯಾಟಿಂಗ್, ಬೌಲಿಂಗ್, ಫೀಲ್ಡಿಂಗ್ ಸೇರಿದಂತೆ ಎಲ್ಲಾ ವಿಭಾಗಗಳಲ್ಲಿಯೂ ಆಸಿಸ್ ಗೆ ಶರಣಾಯಿತು. ಈ ಗೆಲುವಿನ ಮೂಲಕ ಆಸ್ಟ್ರೇಲಿಯಾ ಮೂರು ಏಕದಿನ ಪಂದ್ಯಗಳ ಸರಣಿಯಲ್ಲಿ 1-1ರ ಸಮಬಲ ಸಾಧಿಸಿದೆ.

 

RELATED ARTICLES

Related Articles

TRENDING ARTICLES