ಬೆಂಗಳೂರು : ಸೈಲೆಂಟ್ ಸುನಿಲ್ ಬಿಜೆಪಿ ಪಕ್ಷ ಹಾಗೂ ಸದಸ್ಯತ್ವ ಪಡೆದಿರುವ ಬಗ್ಗೆ ವದಂತಿ ಹಬ್ಬಿದ ಕೂಡಲೇ ಪ್ರತಿಪಕ್ಷಗಳು ಕೇಸರಿ ಪಡೆ ಮೇಲೆ ಸವಾರಿ ಮಾಡಿದ್ದರು. ಇದೀಗ, ಎಚ್ಚೆತ್ತಿರುವ ಬಿಜೆಪಿ ಸೈಲೆಂಟ್ ಸುನಿಲ್ ಗೆ ಶಾಕ್ ನೀಡಿದೆ.
ಸೈಲೆಂಟ್ ಸುನಿಲ್ ಹಾಗೂ ಬಿಜೆಪಿಗೆ ಯಾವುದೇ ಸಂಬಂಧವಿಲ್ಲ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಅಶ್ವತ್ಥನಾರಾಯಣ ತಿಳಿಸಿದ್ದಾರೆ.
ಈ ಸಂಬಂಧ ಪತ್ರಿಕಾ ಹೇಳಿಕೆ ನೀಡಿರುವ ಅವರು, ಸೈಲೆಂಟ್ ಸುನಿಲ್ ಬಿಜೆಪಿ ಸದಸ್ಯತ್ವ ಪಡೆದಿಲ್ಲ. ಪಡೆದಿದ್ದರೆ ಕೂಡಲೇ ರದ್ದುಗೊಳಿಸಲಾಗುವುದು. ಬಿಜೆಪಿ ಹೆಸರಿನಲ್ಲಿ ಸುನಿಲ್ ಪ್ರಚಾರ ಪಡೆಯುತ್ತಿದ್ದಾರೆ ಎನ್ನಲಾಗಿದೆ. ಅದಕ್ಕೂ ಬಿಜೆಪಿಗೂ ಸಂಬಂಧವಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ಇದನ್ನೂ ಓದಿ : ಧಮ್, ತಾಕತ್ತಿದ್ರೆ ಸಿದ್ದರಾಮಯ್ಯ ಕೋಲಾರದಲ್ಲಿ ನಿಲ್ಲಲಿ : ವರ್ತೂರು ಪ್ರಕಾಶ್ ಸವಾಲ್
17 ಪ್ರಕರಣಗಳಲ್ಲಿ ಭಾಗಿಯಾಗಿ
ಸೈಲೆಂಟ್ ಸುನಿಲ್ ಸುಮಾರು 17 ಪ್ರಕರಣಗಳಲ್ಲಿ ಭಾಗಿಯಾಗಿದ್ದು, ಹಲವು ಪೊಲೀಸ್ ಠಾಣೆಗಳ ರೌಡಿಶೀಟರ್ ಪಟ್ಟಿಯಲ್ಲಿ ಹೆಸರಿದೆ. ತನ್ನ ಪ್ರಭಾವ ಬಳಸಿ ಎಲ್ಲ ಪ್ರಕರಣಗಳಿಗೂ ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದಾನೆ.
ಬೆಂಗಳೂರಿನ ಚಾಮರಾಜಪೇಟೆಯಲ್ಲಿ ನಡೆದ ಸಮಾರಂಭವೊಂದರಲ್ಲಿ ಬಿಜೆಪಿ ಮುಖಂಡರ ಜೊತೆಗೆ ಸೈಲೆಂಟ್ ಸುನಿಲ್ ಕಾಣಿಸಿಕೊಂಡಿದ್ದನು. ಈ ವಿಷಯ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿತ್ತು. ಇದನ್ನೇ ಗುರಿಯಾಗಿಸಿಕೊಂಡು ವಿರೋಧ ಪಕ್ಷಗಳು ಆಡಳಿತರೂಢ ಬಿಜೆಪಿಯ ಮೇಲೆ ಸವಾರಿ ಮಾಡಿದ್ದವು.