Friday, November 22, 2024

Kabzaa Box Office Collection Day 1 : ಕನ್ನಡ 20, ಹಿಂದಿ 12, ತೆಲುಗು 7, ತಮಿಳು 5, ಕೇರಳ 3 ಕೋಟಿ

ವರ್ಲ್ಡ್​ವೈಡ್ ಬರೋಬ್ಬರಿ ನಾಲ್ಕು ಸಾವಿರ ಸ್ಕ್ರೀನ್ಸ್​ನಲ್ಲಿ ತೆರೆಗಪ್ಪಳಿಸಿದ್ದ ಕಬ್ಜ, ಬಾಕ್ಸ್ ಆಫೀಸ್​ನಲ್ಲಿ ಫಸ್ಟ್ ಡೇ ಅಬ್ಬರಿಸಿ, ಆರ್ಭಟಿಸಿದೆ. 54 ಕೋಟಿ ಪೈಸಾ ವಸೂಲ್ ಮಾಡೋ ಮೂಲಕ ನೂತನ ದಾಖಲೆ ಬರೆದಿದೆ. ಇಷ್ಟಕ್ಕೂ ಎಲ್ಲೆಲ್ಲಿ ಎಷ್ಟೆಷ್ಟು ಕೋಟಿ ದೋಚಿದೆ ಅನ್ನೋ ಕಲೆಕ್ಷನ್ ರಿಪೋರ್ಟ್​ ಜೊತೆಗೆ ಡಾನ್ ಉಪ್ಪಿಯ ಅರ್ಕೇಶ್ವರ ಹೆಸರಲ್ಲಿರೋ ಅಸಲಿ ಸೀಕ್ರೆಟ್ ಏನು ಅನ್ನೋದನ್ನ ಕೂಡ ಹೇಳ್ತೀವಿ.

ಹೈಲೆಟ್ಸ್:

ಫಸ್ಟ್ ಡೇ ಕಬ್ಜ ಕಲೆಕ್ಷನ್ 54 ಕೋಟಿ.. ಅರ್ಕೇಶ್ವರದಲ್ಲಿ ‘ಕೇಶವರ’ | ಆರ್ ಚಂದ್ರು ತನ್ನ ಹುಟ್ಟಿದೂರಿನ ಹೆಸರಲ್ಲಿ ಉಪ್ಪಿ ಹೆಸ್ರು ಡಿಸೈನ್ | ಕನ್ನಡ 20, ಹಿಂದಿ 12, ತೆಲುಗು 7, ತಮಿಳು 5, ಕೇರಳ 3 ಕೋಟಿ | ಇಂಟರ್​ನ್ಯಾಷನಲ್ ಬಾಕ್ಸ್ ಆಫೀಸ್​​ನಲ್ಲಿ ಎಂಟು ಕೋಟಿ ಕಬ್ಜ..!

ಕನ್ನಡ ಸಿನಿಮಾಗಳಿಗೆ ಎಲ್ಲೆಡೆಯಿಂದ ಡಿಮ್ಯಾಂಡೋ ಡಿಮ್ಯಾಂಡ್. ಒಂದ್ಕಡೆ ಡಿಸ್ಟ್ರಿಬ್ಯೂಟರ್ಸ್​, ಮತ್ತೊಂದ್ಕಡೆ ಪ್ರೇಕ್ಷಕರು. ಇಬ್ಬರಿಂದಲೂ ಬೇಡಿಕೆ ಹೆಚ್ಚಿದ್ದು, ಅದಕ್ಕೆ ಪೂರಕವಾಗಿ ನಮ್ಮ ಚಂದನವನದಿಂದ ಪೂರೈಕೆ ಕೂಡ ಜೋರಾಗಿದೆ. ಕೆಜಿಎಫ್, ಕಾಂತಾರ ನಂತರ ಕಬ್ಜ ಹೊರ ಬಂದಿದೆ. ಬೊಂಬಾಟ್ ಮೇಕಿಂಗ್, ಆರ್ಟಿಸ್ಟ್ ಅಲ್ಟಿಮೇಟ್ ಪರ್ಫಾಮೆನ್ಸ್ ಜೊತೆ ಮನಮುಟ್ಟುವ ಕಥೆಯಿಂದ ಕಬ್ಜ ಕೇಕೆ ಹಾಕ್ತಿದೆ.

ಸ್ಯಾಂಡಲ್​ವುಡ್​ನ ಟ್ರೆಂಡ್ ಸೆಟ್ಟರ್​ಗಳೆಲ್ಲಾ ಕೂಡಿ ಮಾಡಿರೋ ಸಿನಿಮಾ ಇದು. ರಿಯಲ್ ಸ್ಟಾರ್ ಉಪೇಂದ್ರ ಲೀಡ್​​ನಲ್ಲಿದ್ರೆ, ಅವ್ರೊಟ್ಟಿಗೆ ಕಿಚ್ಚ ಸುದೀಪ್ ಹಾಗೂ ಸೆಂಚುರಿ ಸ್ಟಾರ್ ಡಾ. ಶಿವರಾಜ್​ಕುಮಾರ್ ಕೂಡ ಗಮನ ಸೆಳೆದಿದ್ದಾರೆ. ಆರ್ ಚಂದ್ರು ಡ್ರೀಮ್ ಪ್ರಾಜೆಕ್ಟ್​ಗಾಗಿ ಹಗಲಿರುಳು ತನ್ನ ತನು ಮನ ಧನವನ್ನು ಮುಡಿಪಾಗಿಟ್ಟು, ಬೆವರಿನ ಜೊತೆ ರಕ್ತ ಹರಿಸಿರೋದು ಚಿತ್ರದ ಒಂದೊಂದು ಫ್ರೇಮ್​​ನಲ್ಲೂ ಎದ್ದು ಕಾಣುತ್ತೆ.

ವಿಶ್ವದಾದ್ಯಂತ ಸುಮಾರು ನಾಲ್ಕು ಸಾವಿರ ಸ್ಕ್ರೀನ್ಸ್​​ನಲ್ಲಿ ತೆರೆ ಕಂಡ ಕಬ್ಜಗೆ ಅಕ್ಷರಶಃ ಪ್ರೇಕ್ಷಕರು ಥ್ರಿಲ್ ಆಗಿದ್ದಾರೆ. ಮೈ ಜುಮ್ಮೆನಿಸೋ ಮೇಕಿಂಗ್ ಹಾಗೂ ಪ್ರೊಡಕ್ಷನ್ ಕ್ವಾಲಿಟಿ ನೋಡಿ ದಂಗಾಗಿದ್ದಾರೆ. ನೋಡುಗರ ದಿಲ್ ಕಬ್ಜಾ ಜೊತೆಗೆ ಬಾಕ್ಸ್ ಆಫೀಸ್​ ಕೂಡ ಕಬ್ಜ ಮಾಡಿರೋ ಉಪೇಂದ್ರ – ಚಂದ್ರು, ಫಸ್ಟ್ ಡೇ ಬರೋಬ್ಬರಿ 54 ಕೋಟಿ ಗಳಿಕೆಯಿಂದ ದಿಲ್​ಖುಷ್ ಆಗಿದ್ದಾರೆ.

ಕರ್ನಾಟಕ ಒಂದರಲ್ಲೇ 20 ಕೋಟಿ ಗಲ್ಲಾ ಪೆಟ್ಟಿಗೆ ಕಲೆಕ್ಷನ್ ಆಗಿದ್ದು, ಹಿಂದಿಯಲ್ಲಿ 12, ಆಂಧ್ರ – ತೆಲಂಗಾಣ 7 ಕೋಟಿ, ತಮಿಳು 5 ಕೋಟಿ ಹಾಗೂ ಮಲಯಾಳಂನಲ್ಲಿ 3 ಕೋಟಿ ಬಾಕ್ಸ್ ಆಫೀಸ್ ಕಲೆಕ್ಷನ್ ಆಗಿದೆ. ಇನ್ನು ಓವರ್​ಸೀಸ್ ಕಲೆಕ್ಷನ್ ರಿಪೋರ್ಟ್​ ಪ್ರಕಾರ ವಿದೇಶಿಗಳಲ್ಲಿ 8 ಕೋಟಿ ಪೈಸಾ ವಸೂಲ್ ಆಗಿದೆ. ಅಲ್ಲಿಗೆ ನಮ್ಮ ಭಾರತೀಯರಿಗಷ್ಟೇ ಅಲ್ಲ, ವಿದೇಶಿಗರಿಗೂ ಕಬ್ಜ ರುಚಿಸಿದೆ ಅಂತಾಯ್ತು. ಆ್ಯಕ್ಷನ್ ಪ್ಯಾಕ್ಡ್ ಸಿನಿಮಾಗಳನ್ನ ಜನ ಮುಗಿಬಿದ್ದು ನೋಡ್ತಾರೆ ಅನ್ನೋದಕ್ಕೆ ಕೆಜಿಎಫ್ ನಂತರ ಕಬ್ಜ ಕೂಡ ಪ್ರೂವ್ ಮಾಡಿದೆ.

ಅಂದಹಾಗೆ ಕಬ್ಜದಲ್ಲಿ ನಟ ಉಪೇಂದ್ರ ಅರ್ಕೇಶ್ವರ ಅನ್ನೋ ಪಾತ್ರ ನಿರ್ವಹಿಸಿದ್ದಾರೆ. ನಿರ್ದೇಶಕ ಆರ್ ಚಂದ್ರು ಏನೇ ಮಾಡಿದ್ರೂ ಅದನ್ನ ಸಖತ್ ಕ್ರಿಯೇಟಿವ್ ಆಗಿ ಮಾಡ್ತಾರೆ. ತನ್ನ ಹುಟ್ಟಿದೂರಿನ ಹೆಸರನ್ನ ಉಪ್ಪಿ ಕ್ಯಾರೆಕ್ಟರ್ ನೇಮ್​​ನಲ್ಲಿ ಬರುವ ಹಾಗೆ ಡಿಸೈನ್ ಮಾಡಿದ್ದಾರೆ. ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಕೇಶವರ ಅನ್ನೋ ಗ್ರಾಮ ಚಂದ್ರು ಅವ್ರ ಹುಟ್ಟಿದೂರು. ಅರ್ಕೇಶ್ವರದಲ್ಲಿ ಕೇಶವರ ಅನ್ನೋ ಹೆಸರು ಬರುವಂತೆ ಮಾಡಿರೋದು ಅವ್ರ ಚಾಕ ಚಕ್ಯತೆ ಹಾಗೂ ಕ್ರಿಯಾಶೀಲತೆಯ ಕೈಗನ್ನಡಿಯಂತಿದೆ. ಸಿನಿಮಾ ನೋಡಿದ ಮೇಲೆ ಇಡೀ ಕೇಶವರ ಜನ ಚಂದ್ರು ಅವ್ರಿಗೆ ಬಹುಪರಾಕ್ ಅಂತಿದ್ದಾರಂತೆ.

ಅದೇನೇ ಇರಲಿ, ಸದ್ಯ 54 ಕೋಟಿ ಗಳಿಸಿರೋ ಈ ಸಿನಿಮಾ ಆದಷ್ಟು ಬೇಗ 100 ಕೋಟಿ, 500 ಕೋಟಿ ಕ್ಲಬ್ ಸೇರುವಂತಾಗಲಿ ಅನ್ನೋದು ಕನ್ನಡ ಸಿನಿಪ್ರಿಯರ ಆಶಯ. ಹಾನೆಸ್ಟ್ ಎಫರ್ಟ್​ ಹಾಕಿದ್ರೆ, ಅದಕ್ಕೆ ತಕ್ಕನಾದ ಪ್ರತಿಫಲ ಸಿಕ್ಕೇ ಸಿಗುತ್ತೆ ಅನ್ನೋದಕ್ಕೆ ಇದಕ್ಕಿಂತ ಬೆಸ್ಟ್ ಎಕ್ಸಾಂಪಲ್ ಮತ್ತೊಂದು ಬೇಕಿಲ್ಲ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ

RELATED ARTICLES

Related Articles

TRENDING ARTICLES