Wednesday, January 22, 2025

ಮಾದಪ್ಪನ ಸನ್ನಿಧಾನದಲ್ಲಿ ಸೋಮಣ್ಣ-ಬಿಎಸ್ ವೈ ಒಗ್ಗಟ್ಟಿನ ಮಂತ್ರ!

ಬೆಂಗಳೂರು : ಕಳೆದ ಹಲವಾರು ದಿನಗಳಿಂದ ಬಿಜೆಪಿ ನಾಯಕರ ವಿರುದ್ಧ ಅಸಮಾಧಾನಗೊಂಡಿದ್ದ ಸಚಿವ ವಿ.ಸೋಮಣ್ಣ ಅವರ ಮುನಿಸು ಒಂದು ಮಟ್ಟಿಗೆ ಶಮನಗೊಂಡಿದ್ದು, ಬಿಎಸ್ ವೈ ಹಾಗೂ ಸೋಮಣ್ಣ ಒಂದಾಗಿ ಒಗ್ಗಟ್ಟಿನ ಮಂತ್ರ ಪಠಿಸಲು ವೇದಿಕೆ ಸಿದ್ಧವಾಗಿದೆ.

ಹೌದು, ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಮಲೆಮಹದೇಶ್ಚರ ಬೆಟ್ಟದಲ್ಲಿ ಇಂದು (ಮಾ.18) ನಡೆಯುವ ಮಲೆಮಹದೇಶ್ಚರ ಪ್ರತಿಮೆ ಲೋಕಾರ್ಪಣೆ ಕಾರ್ಯಕ್ರಮದ ಆಹ್ವಾನ ಪತ್ರಿಕೆಯಲ್ಲಿ ಯಡಿಯೂರಪ್ಪ ಹೆಸರು ಕಾಣಿಸಿಕೊಂಡಿದ್ದು, ಬಿಎಸ್ ವೈ ಹಾಗೂ ಸೋಮಣ್ಣ ಮುನಿಸು ಶಮನಕ್ಕೆ ಈ ಕಾರ್ಯಕ್ರಮ ವೇದಿಕೆ ಆಗಲಿದೆ.

ಯಡಿಯೂರಪ್ಪ ಹೆಸರು ಆಹ್ವಾನ ಪತ್ರಿಕೆ

ಶಿಷ್ಟಾಚಾರ ಪ್ರಕಾರ ಸರ್ಕಾರಿ ಕಾರ್ಯಕ್ರಮದಲ್ಲಿ ಸ್ಥಳೀಯ ಜನಪ್ರತಿನಿಧಿಗಳು, ಅಧಿಕಾರದಲ್ಲಿರುವವರ ಹೆಸರಷ್ಟೇ ಹಾಕಿಸಬೇಕು. ಆದರೆ, ಬಿ.ಎಸ್‌.ಯಡಿಯೂರಪ್ಪ ಹೆಸರು ಆಹ್ವಾನ ಪತ್ರಿಕೆಯಲ್ಲಿ ಕಾಣಿಸಿಕೊಂಡಿದ್ದು ಇಬ್ಬರು ನಾಯಕರು ಒಗ್ಗಟ್ಟಿನ ಮಂತ್ರ ಪಠಿಸಲು ಬಿಜೆಪಿ ವರಿಷ್ಟರು ಮಾದಪ್ಪನ ಬೆಟ್ಟದಲ್ಲಿ ಈ ವೇದಿಕೆ ಸಿದ್ಧಪಡಿಸಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ : ವಿಜಯೇಂದ್ರ ಯಾರು? ಅವನ ಮೇಲೆ ದೂರು ಕೊಟ್ಟು ಏನಾಗಬೇಕು?

ಮಲೆಮಹದೇಶ್ಚರ ಬೆಟ್ಟದಲ್ಲಿ ಆರಂಭಗೊಂಡ ಪ್ರಜಾಧ್ವನಿ ಯಾತ್ರೆಗೆ ಸಚಿವ ಸೋಮಣ್ಣ ಗೈರಾಗಿ ಭಿನ್ನಮತ ಸ್ಫೋಟಿಸಿದ್ದರು. ಈಗ ಅದೇ, ಮಲೆಮಹದೇಶ್ಚರ ಬೆಟ್ಟದಿಂದ ಲಿಂಗಾಯತ ಸಮುದಾಯದ ಪ್ರಬಲ ನಾಯಕರು ಒಗ್ಗಟ್ಟಿನ ಮಂತ್ರ ಪಠಿಸಲು ಮುಂದಾಗಿದ್ದಾರೆ. ಚುನಾವಣಾ ಹೊಸ್ತಿಲಿನಲ್ಲಿ ನಡೆಯುವ ಈ ಕಾರ್ಯಕ್ರಮ ಬಿಜೆಪಿ ಪಾಲಿಗಂತೂ ಪ್ಲಸ್ ಆಗಲಿದೆ.

RELATED ARTICLES

Related Articles

TRENDING ARTICLES