Wednesday, January 22, 2025

ಕಾಂಗ್ರೆಸ್ ಟಿಕೆಟ್ ಗಾಗಿ ಮುಂದುವರಿದ ಲಾಭಿ : ದೆಹಲಿಗೆ ಆಕಾಂಕ್ಷಿಗಳ ದಂಡು

ಬೆಂಗಳೂರು : ವಿಧಾನಸಭಾ ಚುನಾವಣೆ ಸನಿಹದಲ್ಲಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಟಿಕೆಟ್​ಗಾಗಿ ಲಾಭಿ ಮುಂದುವರಿದಿದೆ. ಮತ್ತೊಂದೆಡೆ, ದೆಹಲಿಯಲ್ಲಿ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳ ದಂಡೇ ನೆರೆದಿದೆ.

ಹೌದು, ಸುಮಾರು 50ಕ್ಕೂ ಹೆಚ್ಚು ಟಿಕೆಟ್​ ಆಕಾಂಕ್ಷಿಗಳು ನವದೆಹಲಿ ತಲುಪಿದ್ದಾರೆ. ತಮ್ಮ ಬೆಂಬಲಿಗರೊಂದಿಗೆ ರಾಜಧಾನಿಯಲ್ಲಿ ಠಿಕಾಣಿ ಹೂಡಿರುವ ಆಕಾಂಕ್ಷಿಗಳು ಟಿಕೆಟ್​​ಗಾಗಿ ಇನ್ನಿಲ್ಲದ ಲಾಭಿ ನಡೆಸುತ್ತಿದ್ದಾರೆ.

ಈ ಮಧ್ಯೆ ರಾಜಾಜಿನಗರದಲ್ಲಿ ಬಿಜೆಪಿಯಿಂದ ವಲಸೆ ಬಂದ ಎಂಎಲ್ ಸಿ ಪುಟ್ಟಣ್ಣಗೆ ಯಾವುದೇ ಕಾರಣಕ್ಕೂ ಟಿಕೆಟ್​ ನೀಡಬಾರದೆಂದು ಕಾಂಗ್ರೆಸ್ ನಾಯಕಿ ಭವ್ಯ ನರಸಿಂಹಮೂರ್ತಿ ನೇತೃತ್ವದಲ್ಲಿ ಲಾಭಿ ನಡೆಯುತ್ತಿದೆ.

ಲಿಂಗಾಯತ ಮುಖಂಡರಿಗೆ ಪ್ರಾತಿನಿಧ್ಯ

ಚಿಕ್ಕಪೇಟೆಯಲ್ಲಿ ಮಾಜಿ ಮೇಯರ್​​ ಗಂಗಾಂಬಿಕೆ ಮಲ್ಲಿಕಾರ್ಜುನ್​​​ ಟಿಕೆಟ್​​​ ಕೊಡಬೇಕೆಂಬ ಒತ್ತಾಯ ಕೇಳಿ ಬರುತ್ತಿದೆ. ಈ ಮಧ್ಯೆ ಲಿಂಗಾಯತ ಮುಖಂಡರಿಗೆ ಪ್ರಾತಿನಿಧ್ಯ ನೀಡಬೇಕೆಂದು ಹಿರಿಯ ನಾಯಕ ಶಾಮನೂರು ಶಿವಶಂಕರಪ್ಪ ನೇತೃತ್ವದಲ್ಲಿ ಹಲವು ನಾಯಕರು ಪಟ್ಟು ಹಿಡಿದಿರುವುದು ಕೈ ನಾಯಕರಿಗೆ ತಲೆ ನೋವಾಗಿದೆ.

RELATED ARTICLES

Related Articles

TRENDING ARTICLES