ಬೆಂಗಳೂರು : ಭಾರತವನ್ನು ಪ್ರಧಾನಿ ನರೇಂದ್ರ ಮೋದಿಯವರು ಹೊರಗೆ ಮತ್ತು ಒಳಗೆ ಕಾಯುತ್ತಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಭಿಪ್ರಾಯಪಟ್ಟಿದ್ದಾರೆ.
ತುಮಕೂರು ಜಿಲ್ಲೆಯ ಕೊರಟಗೆರೆಯಲ್ಲಿ ಹಮ್ಮಿಕೊಂಡಿದ್ದ ಬಿಜೆಪಿ ವಿಜಯ ಸಂಕಲ್ಪ ಯಾತ್ರೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ಮುಳುಗುವ ಹಡುಗು. ಮುಳುಗುವ ಹಡಗಿನಲ್ಲಿ ಯಾರಾದರೂ ಪ್ರಯಾಣ ಮಾಡುತ್ತಾರಾ? ಅದು ಮುಳುಗಿ, ಎಲ್ಲರನ್ನು ಮುಳುಗಿಸುತ್ತದೆ ಎಂದು ಸಿಎಂ ಬೊಮ್ಮಯಿ ಕುಟುಕಿದ್ದಾರೆ.
ಜನರೇ ಕಾಂಗ್ರೆಸ್ ಅನ್ನು ಮುಳುಗಿಸ್ತಾರೆ
ಕಾಂಗ್ರೆಸ್ ಪಕ್ಷದ ಹಡಗು ಉತ್ತರ ಪ್ರದೇಶ, ಹರಿಯಾಣ, ಗುಜರಾತ್, ಪಂಜಾಬ್ ಸೇರಿದಂತೆ ಎಲ್ಲ ಕಡೆ ಮುಳುಗಿದೆ. ಕರ್ನಾಟಕದಲ್ಲಿ ಮಾತ್ರ ಉಳಿದಿದ್ದು, ಇಲ್ಲಿಯೂ ಜನರು ಕಾಂಗ್ರೆಸ್ ನ್ನು ಮುಳುಗಿಸುತ್ತಾರೆ ಎಂದು ಮುಖ್ಯಮಂತ್ರಿ ಬೊಮ್ಮಾಯಿ ವಾಗ್ದಾಳಿ ನಡೆಸಿದ್ದಾರೆ.
ಇದನ್ನೂ ಓದಿ : ಆಜಾನ್ ಕೂಗೋದ್ರಿಂದ ಎಷ್ಟು ಪ್ರಾಬ್ಲಂ ಆಗ್ತಿದೆ ಗೊತ್ತಾ? : ಈಶ್ವರಪ್ಪ
ಪ್ರಜಾಪ್ರಭುತ್ವದ ಬಗ್ಗೆ ಅವಹೇಳನ
ಪಾಕಿಸ್ತಾನದಲ್ಲಿ ಆಡಳಿತ ಕುಸಿತ ಕಂಡಿದ್ದು ಜನರು ಅನ್ನಕ್ಕಾಗಿ ಪರದಾಡುತ್ತಿದ್ದಾರೆ. ಅವರು ಮೋದಿ ನಮ್ಮ ದೇಶ ಆಳಲಿ ಅಂತ ಹೇಳುತ್ತಿದ್ದಾರೆ. ಚೀನಾ ಕೂಡ ಮೋದಿಯವರ ಆಡಳಿತ ಮೆಚ್ಚುತ್ತಿದ್ದಾರೆ. ನಮ್ಮ ದೇಶದ ಪ್ರಜಾಪ್ರಭುತ್ವದ ಬಗ್ಗೆ ಕಾಂಗ್ರೆಸ್ ನವರು ಅವಹೇಳನ ಮಾಡಿದ್ದಾರೆ. ಅಂತಹವರಿಗೆ ವೋಟ್ ಹಾಕ್ತಿರಾ ಎಂದು ತಿಳಿಸಿದ್ದಾರೆ.
ಸಿದ್ದುಗೆ ಡಿಕೆಶಿ ಭಯ ಇದೆ
ಈಗ ಚುನಾವಣೆಯಲ್ಲಿ ಜನರು ಭಾಗವಹಿಸುವುದು ಪ್ರಜಾಪ್ರಭುತ್ವ ಅಲ್ವ. ಸಿದ್ದರಾಮಯ್ಯ, ಡಿಕೆಶಿ ಅವರು ಗ್ಯಾರೆಂಟಿ ಕಾರ್ಡ್ ಕೊಡುತ್ತಿದ್ದಾರೆ. ಅದು ಗ್ಯಾರೆಂಟಿ ಕಾರ್ಡ್ ಅಲ್ಲ. ವಿಜಿಟಿಂಗ್ ಕಾರ್ಡ್ ಕೊಡುತ್ತಿದ್ದಾರೆ. ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕಾಂಗ್ರೆಸ್ ನವರ ಜೊತೆಗೆ ಹೋರಾಟ ಮಾಡುತ್ತಿದ್ದಾರೆ. ಎಲ್ಲಿ ಸಿದ್ದರಾಮಯ್ಯ, ಡಿಕೆಶಿ ಸೋಲಿಸುತ್ತಾರೆ ಅನ್ನುವ ಭಯ ಇದೆ ಎಂದು ಛೇಡಿಸಿದ್ದಾರೆ.
ನಮ್ಮ ಸರ್ಕಾರ ಅವಧಿಯಲ್ಲಿ ಹಲವಾರು ಅಭಿವೃದ್ದಿ ಕಾರ್ಯಗಳನ್ನು ಮಾಡಿದ್ದೇವೆ. ಕೇಂದ್ರ ಮತ್ತು ರಾಜ್ಯದ ಸಾಧನೆಗಳನ್ನು ನಿಮ್ಮ ಮುಂದೆ ಇಟ್ಟು ಬಿಜೆಪಿಗೆ ಬೆಂಬಲಿಸಿ ಎಂದು ಕೇಳುತ್ತಿದ್ದೇವೆ ಎಂದು ಇದೇ ವೇಳೆ ಸಿಎಂ ಬೊಮ್ಮಾಯಿ ಹೇಳಿದ್ದಾರೆ.