Monday, December 23, 2024

ಬಿಗ್ ಟ್ವಿಸ್ಟ್: ಕನ್ನಡದ ನಟಿಯಿಂದಲೇ ಬೆದರಿಕೆ

ಬೆಂಗಳೂರು : ನಟಿ ಸಂಜನಾ ಗಲ್ರಾನಿ ಪ್ರಕರಣಕ್ಕೆ ಇದೀಗ ಟ್ವಿಸ್ಟ್ ಸಿಕ್ಕಿದೆ. ಸಂಜನಾ ಕಡೆಯಿಂದಲೇ ಬೆದರಿಕೆ ಇದೆ ಎಂದು ಧೂಪನಹಳ್ಳಿಯಲ್ಲಿ ನಿವಾಸಿಯಾದ ರಾಜಣ್ಣ ಆರೋಪ ಮಾಡಿದ್ದಾರೆ.

ಪ್ರಕರಣ ಸಂಬಂಧ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ರಾಜಣ್ಣ, ನಟಿ ಸಂಜನಾ ಅವರು ಸುಖಾ ಸುಮ್ಮನೆ ನಮಗೆ ಕಿರಿಕಿರಿ ಕೊಡುತ್ತಿದ್ದಾರೆ. ನಮಗೆ ಇವರ ಸಹವಾಸವೇ ಬೇಡ. ಇಲ್ಲಿಗೇ ಬಿಟ್ಟು ಬಿಡಿ ಎಂದು ರಾಜಣ್ಣ ಹೇಳಿದ್ದಾರೆ.

ಇನ್ನೂ ನಟಿ ಸಂಜನಾ ಅವರು, ರಾಜಣ್ಣರ ಮೇಲೆ ಕೊಲೆ ಬೆದರಿಕೆ ಆರೋಪ ಮಾಡಿದ್ದರು. ವಾಹನ ನಿಲುಗಡೆ (ಪಾರ್ಕಿಂಗ್) ವಿಚಾರವಾಗಿ ನನಗೆ ಕಿರಿಕ್ ಮಾಡ್ತಿದ್ದಾರೆ ಎಂದಿದ್ದರು. ಇಂದಿರಾನಗರದ ಧೂಪನಹಳ್ಳಿಯಲ್ಲಿ ವಾಸವಿರುವ ಯಶೋಧಮ್ಮ, ರಾಜಣ್ಣ ನನಗೆ ತೊಂದರೆ ನೀಡುತ್ತಿದ್ದಾರೆ ಎಂದು ಇಂದಿರಾನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ನ್ಯಾಯಾಲಯದ ಅನುಮತಿ ಪಡೆದು ಎಫ್ಐಆರ್ ಕೂಡ ದಾಖಲು ಮಾಡಲಾಗಿತ್ತು.

ಇದನ್ನೂ ಓದಿ : ಕನ್ನಡ ಮಾತನಾಡಿದ ಅಧಿಕಾರಿಯನ್ನು ನಿಂದಿಸಿದ ನಟ

ಕ್ಷುಲ್ಲಕ ಕಾರಣಕ್ಕೆ ಜಗಳ

ಇನ್ನೂ ನಟಿ ಸಂಜನಾ ಕ್ಷುಲ್ಲಕ ಕಾರಣಕ್ಕೆ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ರಸ್ತೆಗೆ ಅಡ್ಡಲಾಗಿ ಕಾರಗಳನ್ನು ನಿಲ್ಲಿಸುತ್ತಾರೆ. ಪ್ರಶ್ನೆ ಮಾಡಿದರೆ ನನಗೆ ಕೊಲೆ ಬೆದರಿಕೆ ಹಾಕುತ್ತಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

RELATED ARTICLES

Related Articles

TRENDING ARTICLES