Wednesday, January 22, 2025

ಎಚ್ಚರ.. H3N2 ಮಹಾಮಾರಿಗೆ ಮತ್ತೆ ಎರಡು ಬಲಿ

ಬೆಂಗಳೂರು : ಕೋವಿಡ್ ರೂಪಾಂತರಿ ವೈಸರ್ ಎನ್ನಲಾಗುತ್ತಿರುವ H3N2 ಸೋಂಕಿಗೆ ದೇಶದಲ್ಲಿ ಮತ್ತೆ ಇಬ್ಬರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.

ಈ ಸಂಬಂಧ ಆರೋಗ್ಯ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಅಹ್ಮದ್‌ ನಗರದ ವೈದ್ಯಕೀಯ ವಿದ್ಯಾರ್ಥಿಯೊಬ್ಬ (23) ಹಾಗೂ ನಾಗ್ಪುರದ (72)ವ್ಯಕ್ತಿಯೊಬ್ಬ ಕೋವಿಡ್-19 ಸಾಂಕ್ರಾಮಿಕ(H3N2)ಕ್ಕೆ ಬಲಿಯಾಗಿದ್ದಾನೆ. ದೇಶದಲ್ಲಿ ಎರಡೂ ಸೋಂಕುಗಳು ತಗುಲಿದ ವ್ಯಕ್ತಿ ಮೃತಪಟ್ಟಿರುವ ಮೊದಲ ಪ್ರಕರಣ ಇದಾಗಿದೆ ಎಂದು ಹೇಳಿದ್ದಾರೆ.

ವೈದ್ಯಕೀಯ ವಿದ್ಯಾರ್ಥಿ ಬಲಿ

ಎರಡು ಶಂಕಿತ ಇನ್ಫುಯೆನ್ಝಾ H3N2 ಸಂಬಂಧಿತ ವ್ಯಕ್ತಿಗಳ ಸಾವಿನ ಬಗ್ಗೆ ಮಹಾರಾಷ್ಟ್ರದ ಆರೋಗ್ಯ ಇಲಾಖೆ ವರದಿ ಮಾಡಿದೆ. ಇದರಲ್ಲಿ ವೈದ್ಯಕೀಯ ವಿದ್ಯಾರ್ಥಿ ಹಾಗೂ ನಾಗ್ಪುರದ 72 ವರ್ಷ ವಯಸ್ಸಿನ ವೃದ್ಧ ಸೇರಿದ್ದಾರೆ.

58 H3N2 ಪ್ರಕರಣ ದೃಢ

ಆರೋಗ್ಯ ಸಚಿವ ತಾನಾಜಿ ಸಾವಂತ್ ವಿಧಾನಸಭೆಗೆ ಮಾಹಿತಿ ನೀಡಿದ್ದು, ಮಹಾರಾಷ್ಟ್ರದಲ್ಲಿ ಜನವರಿಯಿಂದ ಈಚೆಗೆ ಇನ್‌ಫ್ಲುಯೆನ್ಝಾ ಸೋಂಕಿಗಾಗಿ ಸುಮಾರು 2.61 ಲಕ್ಷ ಮಂದಿಯ ಆರೋಗ್ಯ ತಪಾಸಣೆ ಮಾಡಲಾಗಿದೆ. ಈ ಪೈಕಿ 303 H1N1 ಪ್ರಕರಣಗಳು ಹಾಗೂ 58 H3N2 ಪ್ರಕರಣಗಳು ದೃಢಪಟ್ಟಿವೆ ಎಂದು ತಿಳಿಸಿದ್ದಾರೆ.

ಇನ್ನೂ, ಕಳೆದ ವಾರ ಕರ್ನಾಟಕ ಹಾಗೂ ಹರಿಯಾಣದಲ್ಲಿ ಎಚ್3ಎನ್2 ಸೋಂಕಿಗೆ ಇಬ್ಬರು ಸಾವನ್ನಪ್ಪಿರುವ ಬಗ್ಗೆ ಕೇಂದ್ರ ಆರೋಗ್ಯ ಸಚಿವಾಲಯ ದೃಢಪಡಿಸಿತ್ತು.

RELATED ARTICLES

Related Articles

TRENDING ARTICLES