Monday, January 27, 2025

ಆ.. ಸಿ.ಡಿಯೊಳಗೆ ಮಂಚ ಮುರಿದಿರುವ ದೃಶ್ಯಗಳಿವೆ : ಇಬ್ರಾಹಿಂ

ಬೆಂಗಳೂರು : ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ಕಾವು ಒಂದೆಡೆಯಾದ್ರೆ, ಮತ್ತೊಂದೆಡೆ ಸಿ.ಡಿ ಪಾಲಿಟಿಕ್ಸ್ ಸದ್ದು ಮಾಡುತ್ತಿದೆ. ಸಿ.ಡಿ ವಿಚಾರವಾಗಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ ಇಬ್ರಾಹಿಂ ಸ್ಫೋಟಕ ಹೇಳಿಕೆಯೊಂದನ್ನು ನೀಡಿದ್ದಾರೆ.

ಹೌದು, ಬಿಜೆಪಿ ನಾಯಕ, ಮಾಜಿ ಸಚಿವ ರಮೇಶ್ ಜಾರಕಿಹೊಳಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರ ನಡುವೆ ಸಿ.ಡಿ ವಾರ್ ನಡೆಯುತ್ತಿರುವುದು ಎಲ್ಲರಿಗೂ ತಿಳಿದಿರುವ ವಿಷಯ. ಈ ಟಾಫಿಕ್ ಗೆ ಇದೀಗ ಬಿಜೆಪಿ ಹಾಗೂ ಜೆಡಿಎಸ್ ನಾಯಕರು ಎಂಟ್ರಿ ಕೊಟ್ಟಿದ್ದಾರೆ.

ಮಂಚ ಮುರಿದಿರುವ ದೃಶ್ಯಗಳಿವೆ!

ಸಿ.ಡಿ ವಿಚಾರವಾಗಿ ಸುದ್ದಿಗಾರರೊಂದಿಗೆ ಮಾತನಾಡಿರುವ ಸಿ.ಎಂ ಇಬ್ರಾಹಿಂ, 12 ಜನ ಮಂತ್ರಿಗಳು ಸಿ.ಡಿ‌ ಪ್ರಕರಣದಲ್ಲಿ ಸಿಕ್ಕಿ ಹಾಕಿಕೊಂಡಿದ್ದಾರೆ. ನ್ಯಾಯಾಲಯಕ್ಕೆ ಹೋಗಿ ನಮ್ಮ ಸಿ.ಡಿ‌ ತೋರಿಸಬೇಡಿ‌ ಅಂತ ಸ್ಟೇ ತಗೊಂಡಿದ್ದಾರೆ. ಆ ಸಿ.ಡಿಯೊಳಗೆ ಮಂಚ ಮುರಿದಿರುವ ದೃಶ್ಯಗಳಿವೆ. ಅವುಗಳನ್ನು ಮುಚ್ಚಿಡಲು ಉರಿಗೌಡ, ನಂಜೇಗೌಡ ವಿಚಾರ ತಗೆದಿದ್ದಾರೆ ಎಂದು ಬಿಜೆಪಿ ನಾಯಕರಿಗೆ ಟಾಂಗ್ ಕೊಟ್ಟಿದ್ದಾರೆ.

ಇದನ್ನೂ ಓದಿ : ಪದೇ ಪದೆ ಟಿಪ್ಪು ಯಾಕೆ ನೆನಪಾಗ್ತಾನೆ ನಮ್ಗೆ ಗೊತ್ತು : ಅಶ್ವತ್ಥನಾರಾಯಣ

ಸಿ.ಡಿ ಪಾರ್ಟಿ ಅಂತಾನೆ ಕರೀತಾರೆ

ಕಾಂಗ್ರೆಸ್ ಪಾರ್ಟಿಯನ್ನು ಸಿ.ಡಿ ಪಾರ್ಟಿ ಅಂತಾನೆ ಕರೀತಾರೆ. ಅವರದ್ದೇನು ವರ್ಕೌಟ್ ಆಗುವುದಿಲ್ಲ ಎಂದು ಸಚಿವ ಅಶ್ವತ್ಥ ನಾರಾಯಣ​ ವಾಗ್ದಾಳಿ ನಡೆಸಿದ್ದಾರೆ. ರಾಮನಗರದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್​ನವರಿಗೆ ಜನ 5 ರೂಪಾಯಿ ಕಿಮ್ಮತ್ತು ಕೊಡೂವುದಿಲ್ಲ. ಸಿ.ಡಿಗಳು ಸ್ಟಾಕ್ ಇದ್ದರೆ ಬಿಡೋಕೆ ಹೇಳಿ. ಇಡ್ಕೊಂಡು ವೇಸ್ಟ್ ಆಗುತ್ತೆ. ಸಿ.ಡಿ ಬ್ಲಾಕ್ ಮೇಲ್ ಎಲ್ಲಾ ವರ್ಕೌಟ್ ಆಗಲ್ಲ ಎಂದು ಲೇವಡಿ ಮಾಡಿದ್ದಾರೆ.

RELATED ARTICLES

Related Articles

TRENDING ARTICLES