Monday, December 23, 2024

Rash Driving ಪ್ರಶ್ನಿಸಿದ್ದಕ್ಕೆ ಚಾಕುವಿನಿಂದ ಇರಿದು ಹಲ್ಲೆ

ಬೆಂಗಳೂರು : ರ‍್ಯಾಶ್‌ ಡ್ರೈವಿಂಗ್‌ ಪ್ರಶ್ನಿಸಿದ್ದಕ್ಕೆ ಚಾಕುವಿನಿಂದ ಇರಿದು ಹಲ್ಲೆ ಮಾಡಿರುವ ಘಟನೆ ಬೆಂಗಳೂರಿನ ಕೊಡಿಗೇಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಹಲ್ಲೆಗೆ ಒಳಗಾದ ವೆಂಕಟೇಶ್ ಸ್ಥಿತಿ ಗಂಭೀರವಾಗಿದ್ದು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಘಟನೆ ಸಂಬಂಧ ಕೊಡಿಗೇಹಳ್ಳಿ ಪೊಲೀಸ್ ಠಾಣೆಯಲ್ಲಿ ಗೋಪಾಲಸ್ವಾಮಿ ಸೇರಿ 9 ಜನರ ವಿರುದ್ಧ ಎಫ್.ಐ.ಆರ್ ದಾಖಲಾಗಿದೆ.

ಬಾ ನಿನ್ನನ್ನ ನೋಡಿಕೊಳ್ತೀನಿ..!

ಸ್ನೇಹಿತನ‌ ಮನೆಗೆ ಕಾರ್ಯಕ್ರಮಕ್ಕೆಂದು ವೆಂಕಟೇಶ್ ಹೊಸಕೋಟೆಗೆ ಹೋಗಿದ್ದರು. ಈ ವೇಳೆ ಅದೇ ಮಾರ್ಗದಲ್ಲಿ ಗೋಪಾಲಸ್ವಾಮಿ ರ‍್ಯಾಶ್‌ ಡ್ರೈವಿಂಗ್‌ ಮಾಡಿದ್ದ. ಈ ವೇಳೆ ಇದನ್ನ ಪ್ರಶ್ನಿಸಿದಕ್ಕೆ ಕೊಡಿಗೇಹಳ್ಳಿಗೆ ಬಾ ನಿನ್ನನ್ನ ನೋಡಿಕೊಳ್ತೀನಿ ಎಂದು ಬೆದರಿಕೆ ಹಾಕಿದ್ದ.

ನಿನ್ನೆ ಸಂಜೆ ವೆಂಕಟೇಶ್ ಕೊಡಿಗೇಹಳ್ಳಿ ಮನೆಯ ಬಳಿ ಬಂದಾಗ ಗೋಪಾಲಸ್ವಾಮಿ ಹಾಗು ಆತನ ಮಕ್ಕಳು ಅವಾಚ್ಯ ಶಬ್ಧಗಳಿಂದ ನಿಂದಿಸಿ ಜಗಳ ಮಾಡಿದ್ದಾರೆ. ಮಾತಿಗೆ ಮಾತು ಬೆಳೆದು ವೆಂಕಟೇಶ್ ಕುತ್ತಿಗೆಗೆ ಗೋಪಾಲಸ್ವಾಮಿ ಚಾಕು ಇರಿದಿದ್ದಾನೆ.

ಪ್ರಕರಣ ಸಂಬಂಧ ಗೋಪಾಲಸ್ವಾಮಿ, ಮಕ್ಕಳಾದ ಧನುಷ್, ಚಂದ್ರಶೇಖರ್, ಶ್ರೀನಿವಾಸ್ ಸೇರಿ‌ 9 ಜನರ ವಿರುದ್ಧ ದೂರು ದಾಖಲಾಗಿದೆ. ಇನ್ನು ಆರೋಪಿ ಮತ್ತು ಗಾಯಾಳು ವೆಂಕಟೇಶ್ ಒಂದೇ ಕುಟುಂಬದವರು. ಈ ಹಿಂದೆ ಹಲವಾರು ಬಾರಿ ಗಲಾಟೆ ಮಾಡಿಕೊಂಡಿದ್ದರು ಎಂಬ ಮಾಹಿತಿ ತಿಳಿದು ಬಂದಿದೆ.

RELATED ARTICLES

Related Articles

TRENDING ARTICLES