Monday, December 23, 2024

ಕರ್ಪೂರ ಹಚ್ಚಿ ಸತ್ಯ ನಿರೂಪಿಸಿದ ಜೆಡಿಎಸ್ ಶಾಸಕರ ಪತ್ನಿ

ಬೆಂಗಳೂರು : ಮಾಗಡಿ ಜೆಡಿಎಸ್ ಶಾಸಕ ಮಂಜುನಾಥ್ ಪತ್ನಿ ಲಕ್ಷ್ಮಿ ಅವರ ವಿರುದ್ಧ ಗುತ್ತಿಗೆದಾರರಿಂದ ಕಮಿಷನ್​ ಪಡೆದ ಆರೋಪ ಕೇಳಿ ಬಂದಿದ್ದು, ಈ ಆರೋಪ ಸುಳ್ಳು ಎಂದು ದೇವಸ್ಥಾನದ ಮುಂದೆ ಲಕ್ಷ್ಮಿ ಕರ್ಪೂರ ಹಚ್ಚಿ ಪ್ರಮಾಣ ಮಾಡಿದ್ದಾರೆ.

ಮಾಜಿ ಶಾಸಕ ಬಾಲಕೃಷ್ಣ ಮಾಡಿದ ಆರೋಪ ಸುಳ್ಳು ಎಂದು ಹೇಳಿ ಮಾಗಡಿ ಪಟ್ಟಣದ ತಿರುಮಲೆ ಶ್ರೀರಂಗನಾಥ ಸ್ವಾಮಿ ದೇವಸ್ಥಾನದ ಮುಂದೆ ಲಕ್ಷ್ಮಿ ಮಂಜುನಾಥ್​​ ಹಾಗೂ ತಾಪಂ ಮಾಜಿ ಅಧ್ಯಕ್ಷ ಚಿಕ್ಕಣ್ಣ ಕರ್ಪೂರ ಹಚ್ಚಿ ಪ್ರಮಾಣ ಮಾಡಿದರು.

ಲಕ್ಷ್ಮಿ ಮಂಜುನಾಥ್ ಕಾಮಗಾರಿಗಳಲ್ಲಿ ಕಮಿಷನ್ ಪಡೆಯುತ್ತಿದ್ದಾರೆ ಎಂದು ಮಾಜಿ ಶಾಸಕ ಬಾಲಕೃಷ್ಣ ಆರೋಪಿಸಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡುವ ಸಲುವಾಗಿ ಲಕ್ಷ್ಮಿ ಮಂಜುನಾಥ್ ಮಾಗಡಿಯಲ್ಲಿ ದೇವಸ್ಥಾನದ ಮುಂದೆ ಕರ್ಪೂರ ಹಚ್ಚಿ ಆರೋಪವನ್ನು ತಳ್ಳಿ ಹಾಕಿದ್ದಾರೆ. ಪಟ್ಟಣದ ಶ್ರೀರಂಗನಾಥ ಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ, ಮಾಜಿ ಶಾಸಕ ಬಾಲಕೃಷ್ಣ ಆರೋಪಕ್ಕೆ ತಿರುಗೇಟು ನೀಡಿದ್ದಾರೆ.

ಇದನ್ನೂ ಓದಿ : ಒಕ್ಕಲಿಗ ಕುಲಕ್ಕೆ ಮಾಡಿದ ಘೋರ ಅವಮಾನ : ಎಚ್ಡಿಕೆ ಕಿಡಿಕಾರಿದ್ದು ಯಾರ ಮೇಲೆ?

ಬಾಲಕೃಷ್ಣ ಸಾಬೀತು ಪಡಿಸಬೇಕು

ಶಾಸಕ ಮಂಜುನಾಥ್ ಕಾಮಗಾರಿಯಲ್ಲಿ ಹಸ್ತಕ್ಷೇಪ ಮಾಡುತ್ತಿಲ್ಲ ಮಾಜಿ ಶಾಸಕ ಬಾಲಕೃಷ್ಣರವರು ಕಾಮಗಾರಿ ಆರಂಭ ಮಾಡಬೇಕಾದರೆ ನನ್ನ ಅನುಮತಿ ಪಡೆಯಬೇಕು ಎಂಬ ಸುಳ್ಳು ಆರೋಪ ಮಾಡಿದ್ದಾರೆ. ಇದನ್ನು ಮಾಜಿ ಶಾಸಕ ಬಾಲಕೃಷ್ಣರವರು ಸಾಬೀತು ಪಡಿಸಬೇಕು. ಕೂಟ್ಕಲ್ ಕಾಮಗಾರಿಯಲ್ಲಿ ನನ್ನ ಹಸ್ತಕ್ಷೇಪವಿದೆ ಎಂದು ಆರೋಪ ಮಾಡಿದ್ದಾರೆ.

ಯಾರಾದರೂ ಇದನ್ನು ಸಾಬೀತುಪಡಿಸಿದರೆ ನಾನು ಮಾಜಿ ಶಾಸಕ ಬಾಲಕೃಷ್ಣರವರಿಗೆ ಸನ್ಮಾನ ಮಾಡಿ ಪಾದಪೂಜೆ ಮಾಡಿ ಕ್ಷೇತ್ರಕ್ಕೆ ಬರುವುದೇ ಇಲ್ಲ ಎಂದು ಲಕ್ಷ್ಮಿ ಸವಾಲು ಹಾಕಿದ್ದಾರೆ.

RELATED ARTICLES

Related Articles

TRENDING ARTICLES