Monday, December 23, 2024

ಅವ್ರ ಅಪ್ಪನ ಮನೆಯಿಂದ ಹಣ ತಂದು ಹೈವೇ ಮಾಡಿಲ್ಲ : ವಿಶ್ವನಾಥ್ ಗುಡುಗು

ಬೆಂಗಳೂರು : ಮೈಸೂರು-ಬೆಂಗಳೂರು ಹೈವೇ ಕ್ರೆಡಿಟ್ ಬಗ್ಗೆ ಎಂಎಲ್​ಸಿ ಹೆಚ್.ವಿಶ್ವನಾಥ್ ಅವರು ಪ್ರತಿಕ್ರಿಯೆ ನೀಡಿದ್ದು, ಸ್ವಪಕ್ಷದ ವಿರುದ್ಧವೇ ವಾಗ್ದಾಳಿ ನಡೆಸಿದ್ದಾರೆ.

ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಹೈವೇಯನ್ನು ಪ್ರಧಾನಿ ನರೇಂದ್ರ ಮೋದಿ ಅಥವಾ ಸಂಸದ ಪ್ರತಾಪ್ ಸಿಂಹ ಅವರಾಗಲಿ ಅವರ ಅಪ್ಪನ ಮನೆಯಿಂದ ಹಣ ತಂದು ಮಾಡಿಲ್ಲ. ಸಾರ್ವಜನಿಕರ ಹಣದಿಂದ ನಿರ್ಮಾಣ ಮಾಡಿರುವುದು ಎಂದು ಹೇಳಿದ್ದಾರೆ.

ಬೆಂಗಳೂರು-ಮೈಸೂರು ಹೆದ್ದಾರಿಯ ಟೋಲ್ ಸಂಗ್ರಹದ ಬಗ್ಗೆ ಮೈಸೂರಿನಲ್ಲಿ ಮಾತನಾಡಿದ ವಿಶ್ವನಾಥ್, ಬೆಂಗಳೂರು-ಮೈಸೂರು ಎಕ್ಸ್​ಪ್ರೆಸ್​ ಹೈವೇಯನ್ನು ಸಂಪೂರ್ಣ ಉದ್ಘಾಟನೆ ಮಾಡಿಲ್ಲ. ಕೇವಲ ಅರ್ಧ ಪೂರ್ಣಗೊಂಡಿರುವ ಹೈವೇ ಉದ್ಘಾಟನೆ ಮಾಡಿದ್ದಾರೆ. ಅರ್ಧ ಶೇವ್ ಮಾಡಿದ್ದಾರೆ. ಮತ್ತರ್ಧ ಶೇವ್ ಮಾಡಿಲ್ಲ ಎಂದು ವಿಶ್ವನಾಥ್ ವ್ಯಂಗ್ಯವಾಡಿದ್ದಾರೆ.

ಮಾ.17ರಂದು ಶಾಂತಿಯುತ ಪ್ರತಿಭಟನೆ

ಹೈವೇಯಲ್ಲಿ ಸಂಚರಿಸಲು ದುಬಾರಿ ಟೋಲ್​ ಹಾಕುತ್ತಿದ್ದಾರೆ. ಇದನ್ನು ವಿರೋಧಿಸಿ ಮಾರ್ಚ್ 17ರಂದು ಹೈವೇಯಲ್ಲಿ ಒಂದು ಗಂಟೆ ಶಾಂತಿಯುತ ಪ್ರತಿಭಟನೆ ಮಾಡುತ್ತೇನೆ. ನನ್ನೊಂದಿಗೆ ಯಾರು ಬರದಿದ್ದರೂ ಏಕಾಂಗಿಯಾಗಿ ಪ್ರತಿಭಟನೆ ಮಾಡುತ್ತೇನೆ ಎಂದು ಹೇಳಿದ್ದಾರೆ.

ಇದನ್ನೂ ಓದಿ : ಇದು 40% ಮಹಿಮೆಯೊ? 80% ಮಹಿಮೆಯೊ?

ಎಷ್ಟು ಕೋಟಿ ಮನೆ ಕಟ್ಟಿದ್ದೀಯಾ?

ಸ್ವಪಕ್ಷೀಯ ಸಂಸದ ಪ್ರತಾಪ್ ಸಿಂಹ ವಿರುದ್ಧವೇ ಕಿಡಿಕಾರಿದ ಹೆಚ್.ವಿಶ್ವನಾಥ್, ಎಷ್ಟು ಕೋಟಿ ಮನೆ ಕಟ್ಟಿದ್ದೀಯಾ ಬೆಂಗಳೂರು-ಮೈಸೂರು ಹೈವೇ ನಿರ್ಮಾಣದಲ್ಲಿ ಎಷ್ಟು ಕೋಟಿ ಬಂತು? ಬೆಕ್ಕು ಕಣ್ಮುಚ್ಚಿಕೊಂಡು ಹಾಲು ಕುಡಿದರೆ ಯಾರಿಗೂ ಗೊತ್ತಾಗುದಿಲ್ಲವಾ? ನಾನು ರಾಜಕಾರಣಕ್ಕೆ ಬಂದು 50 ವರ್ಷ ಆಯ್ತು. ನನ್ನ ಮನೆ ಹೇಗಿದೆ? ನೀನು ನಿನ್ನೆ ಬಂದವನು, ನಿನ್ನ ಮನೆ ಹೇಗಿದೆ? ಎಷ್ಟು ಕೋಟಿ ಖರ್ಚು ಮಾಡಿ ಮನೆ ಕಟ್ಟುತ್ತಿದ್ದೀಯಾ ಬಹಿರಂಗಪಡಿಸು ಎಂದು ಸವಾಲು ಹಾಕಿದ್ದಾರೆ.

ನಾಚಿಕೆ, ಮಾನ ಮರ್ಯಾದೆ ಇಲ್ಲ

ಎಕ್ಸ್​ಪ್ರೆಸ್​ ಹೈವೇ ಕಾಮಗಾರಿಯಲ್ಲಿ ಪ್ರತಾಪ್ ಸಿಂಹ ಲಾಭವಾಗಿಲ್ಲವೇ? ಹೈವೇ ನಿರ್ಮಾಣಕ್ಕೆ ಜಲ್ಲಿಕಲ್ಲು, ಮರಳು ಸರಬರಾಜು ಮಾಡಿದವರು ನಿಮ್ಮ ಸ್ನೇಹಿತರಲ್ಲವೇ? ಬೆಕ್ಕು ಕಣ್ಣುಮುಚ್ಚಿಕೊಂಡು ಹಾಲು ಕುಡಿದರೆ ಗೊತ್ತಾಗಲ್ವಾ ಪ್ರತಾಪ್​ ಸಿಂಹ. ಪ್ರತಾಪ್ ಸಿಂಹಗೆ ನಾಚಿಕೆ ಮಾನ ಮರ್ಯಾದೆ ಯಾವುದೂ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

RELATED ARTICLES

Related Articles

TRENDING ARTICLES