Friday, March 29, 2024

ನಾನೊಬ್ಬನೇ 3ನೇ ಮಹಾಯುದ್ಧ ತಡೆಯಬಲ್ಲವನು : ಡೊನಾಲ್ಡ್ ಟ್ರಂಪ್

ಬೆಂಗಳೂರು : ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸದಾ ಒಂದಿಲ್ಲೊಂದು ವಿಷಯಗಳ ಮೂಲಕ ಸುದ್ದಿಯಲ್ಲಿರುತ್ತಾರೆ. ಇದೀಗ, ಟ್ರಂಪ್ ನೀಡಿರುವ ಹೇಳಿಕೆ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ಹುಟ್ಟುಹಾಕಿದೆ.

ಹೌದು, 2024ರ ಅಧ್ಯಕ್ಷೀಯ ಚುನಾವಣೆಯ ಅಭ್ಯರ್ಥಿಗಳ ಪೈಕಿ ಮೂರನೇ ಮಹಾಯುದ್ಧವನ್ನು ತಡೆಯಬಲ್ಲವನು ನಾನೊಬ್ಬನೇ ಎಂದು ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.

3ನೇ ಮಹಾಯುದ್ಧ ನಡೆಯುತ್ತೆ

ಲೋವಾದಲ್ಲಿ ನಡೆದ ಚುನಾವಣಾ ಪ್ರಚಾರ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಟ್ರಂಪ್, ಮೂರನೇ ಮಹಾಯುದ್ಧ ನಡೆಯಲಿದೆ ಎಂದು ನಾನು ನಂಬುತ್ತೇನೆ. ಈ ರೀತಿ ಹಿಂದೆಂದೂ ಜಗತ್ತಿಗೆ ಇಷ್ಟು ಅಪಾಯಕಾರಿ ಸಮಯ ಬಂದಿರಲಿಲ್ಲ ಎಂದು ಟ್ರಂಪ್ ತಿಳಿಸಿದ್ದಾರೆ.

ಇದನ್ನೂ ಓದಿ : ನನ್ನನ್ನು ಹತ್ಯೆ ಮಾಡಿದ್ರೆ, ನೀವು ಹೋರಾಟ ಮಾಡ್ಬೇಕು : ಇಮ್ರಾನ್ ಖಾನ್ ಕರೆ

ಜೋ ಬೈಡನ್ ರಷ್ಯಾವನ್ನು ಚೀನಾದ ತೆಕ್ಕೆಗೆ ಸೇರಿಸಿದರು ಮತ್ತು ಈ ಸರ್ಕಾರವು ದೇಶವನ್ನು ಪರಮಾಣು ಯುದ್ಧಕ್ಕೆ ಕೊಂಡೊಯ್ಯುತ್ತದೆ. ಅದು ಬಹುಶಃ ಜಗತ್ತನ್ನು ಕೊನೆಗೊಳಿಸಬಹುದು. ಈ ಸರ್ಕಾರದ ಆಡಳಿತಾವಧಿಯಲ್ಲಿ ಮೂರನೇ ಮಹಾಯುದ್ಧವನ್ನು ನೋಡಬೇಕಾಗಿದೆ. ಏಕೆಂದರೆ, ಅವರು ಯಾರೊಂದಿಗೂ ಸರಿಯಾಗಿ ವ್ಯವಹರಿಸುತ್ತಿಲ್ಲ. ಮೃದುವಾಗಿ ಇರಬೇಕಾದ ಕಠಿಣವಾಗಿ ವರ್ತಿಸುತ್ತಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.

RELATED ARTICLES

Related Articles

TRENDING ARTICLES