Monday, December 23, 2024

ಈ ಸಂಖ್ಯೆಗಳು ಸಿಲಿಂಡರ್ ಮೇಲೆ ಯಾಕೆ ಇರುತ್ತೆ? ನೀವು ಎಂದಾದ್ರೂ ನೋಡಿದ್ದೀರಾ?

ಬೆಂಗಳೂರು : ಒತ್ತಡದ ಜೀವನ, ಕೆಲಸದ ಟೆಕ್ಷನ್ ಯಾರಿಗೆ ತಾನೇ ಇಲ್ಲ ಹೇಳಿ. ಇದರಿಂದ ನಾವು ಗಳಿಸಿದ್ದಕ್ಕಿಂತ ಕಳೆದುಕೊಂಡದ್ದೇ ಹೆಚ್ಚು. ಸಣ್ಣ ಸಣ್ಣ ವಿಷಯಗಳೂ ಸಹ ನಮಗೆ ತಿಳಿಯುವುದಿಲ್ಲ. ಇದಕ್ಕೆ ನಾವು ಹೇಳುತ್ತಿರುವ ವಿಷಯವೇ ಸಾಕ್ಷಿ.

ಹೌದು, ನಮ್ಮ ದೈನಂದಿನ ಜೀವನದಲ್ಲಿ ಗ್ಯಾಸ್ ಸಿಲಿಂಡರ್‌ಗಳು ಪ್ರಮುಖ ಭಾಗವಾಗಿದೆ. ಗ್ಯಾಸ್ ಬಳಕೆ ಎಲ್ಲರೂ ಮಾಡಿರುತ್ತೇವೆ. ಆದರೆ, ಗ್ಯಾಸ್ ಸಿಲಿಂಡರ್‌ ಸರಿಯಾಗಿ ಗಮನಿಸಿದರೆ ನಿಮೆಗೆ ಅಚ್ಚರಿಯ ವಿಷಯ ತಿಳಿಯುತ್ತೆ. ಅದನ್ನು ತಿಳಿಯಲು ತಪ್ಪದೇ ಈ ಸುದ್ದಿ ಓದಿ.

ಗ್ಯಾಸ್ ಸಿಲಿಂಡರ್ ಉಪಯುಕ್ತವಾಗಿದ್ದರೂ ಸಹ, ಇದಕ್ಕೆ ಸಂಬಂಧಿಸಿದ ಅಪಾಯಗಳು ತಪ್ಪಿದ್ದಲ್ಲ. ಇನ್ನು ನೀವು ಸಿಲಿಂಡರ್ ಅನ್ನು ಎಚ್ಚರಿಕೆಯಿಂದ ನೋಡಿದರೆ ಗ್ಯಾಸ್ ಸಿಲಿಂಡರ್‌ ಗಳ ಮೇಲೆ ಸಂಖ್ಯೆಗಳು ಇರುತ್ತದೆ. ನೀವು ಎಂದಾದರೂ ನೋಡಿದ್ದೀರಾ? ಅದರ ಮೇಲ್ಭಾಗದಲ್ಲಿ ನೀವು ಕೆಲವು ಕೋಡ್ ಅನ್ನು ನೋಡಿರುತ್ತೀರಿ. ಇದು ಏನನ್ನು ಸೂಚಿಸುತ್ತದೆ ನಿಮಗೆ ಗೊತ್ತಾ?

A, B, C, D ಅಕ್ಷರಗಳು

ಈ ಸಂಕೇತಗಳ ಆರಂಭದಲ್ಲಿ ಬರೆಯಲಾದ A, B, C, D ಅಕ್ಷರಗಳು ವರ್ಷದ 12 ತಿಂಗಳುಗಳಿಗೆ ಸಂಬಂಧಿಸಿದ 4೪ ಗುಂಪುಗಳಲ್ಲಿವೆ. ಇಲ್ಲಿ A ಅಕ್ಷರವನ್ನು ಜನವರಿ, ಫೆಬ್ರವರಿ ಮತ್ತು ಮಾರ್ಚ್ ತಿಂಗಳುಗಳಲ್ಲಿ ಬಳಸಿದರೆ, B ಅಕ್ಷರಗಳನ್ನು ಏಪ್ರಿಲ್, ಮೇ ಮತ್ತು ಜೂನ್ ತಿಂಗಳುಗಳಲ್ಲಿ ಬಳಸಲಾಗುತ್ತದೆ. ಅದೇ ರೀತಿ, ಜುಲೈ, ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳುಗಳಲ್ಲಿ C ಅಕ್ಷರವನ್ನು ಬಳಸಲಾಗುತ್ತದೆ, ಆದ್ದರಿಂದ D ಅನ್ನು ಅಕ್ಟೋಬರ್, ನವೆಂಬರ್ ಮತ್ತು ಡಿಸೆಂಬರ್‌ನಲ್ಲಿ ಬಳಸಲಾಗುತ್ತದೆ.

ಅಕ್ಷರಗಳ ನಂತರ ವರ್ಷವನ್ನು ಪ್ರತಿನಿಧಿಸುವ ಸಂಖ್ಯೆಗಳು. A೨೦ ಅನ್ನು ಸಿಲಿಂಡರ್ ನಲ್ಲಿ ಬರೆದರೆ, ಇದರರ್ಥ ೨೦೨೦ರ ಜನವರಿ, ಫೆಬ್ರವರಿ ಅಥವಾ ಮಾರ್ಚ್ ತಿಂಗಳುಗಳು. ಉದಾಹರಣೆಗೆ, ಸಿಲಿಂಡರ್‌ನಲ್ಲಿನ ಕೋಡ್ B.೨೧ ಇದ್ದರೆ ೨೦೨೧ ರ ಏಪ್ರಿಲ್, ಮೇ ಮತ್ತು ಜೂನ್‌ನಲ್ಲಿ ಸಿಲಿಂಡರ್ ಅವಧಿ ಮುಗಿಯಲಿದೆ ಎಂದರ್ಥ.

ನೀವು ಪರೀಕ್ಷೆಯ ದಿನಾಂಕವನ್ನು ಮೀರಿ ಅವಧಿ ಮೀರಿದ ಸಿಲಿಂಡರ್ ಅನ್ನು ತೆಗೆದುಕೊಂಡರೆ, ಆ ಸಿಲಿಂಡರ್ ನಿಮಗೆ ಹಾನಿಕಾರಕವಾಗಬಹುದು. ಹಾಗಾಗಿ, ಇನ್ನುಮುಂದೆ ಸಿಲಿಂಡರ್ ಕೊಳ್ಳುವ ಮೊದಲು ಈ ಕೋಡ್ ಗಳನ್ನು ಪರೀಕ್ಷಿಸಿ.

  • ವಿದ್ಯಾ ಸಿದ್ದರಾಮಯ್ಯ, ಪವರ್ ಟಿವಿ

RELATED ARTICLES

Related Articles

TRENDING ARTICLES