Wednesday, January 22, 2025

ಹೀಗೂ ಸಾವು ಬರುತ್ತೆ! : ಫೋನ್ ನಲ್ಲಿ ಮಾತನಾಡುತ್ತಿದ್ದ ವ್ಯಕ್ತಿ ಸಾವು

ಬೆಂಗಳೂರು : ಜವರಾಯ ಯಾವಾಗ? ಯಾವ ರೂಪದಲ್ಲಿ ಬರುತ್ತಾನೆ ಗೊತ್ತಿಲ್ಲ. ಕೆಲವು ಘಟನೆಗಳು ನಮಗೆ ದಿಗ್ಬ್ರಮೆ ಉಂಟು ಮಾಡುವುದೂ ಸತ್ಯ. ಅದಕ್ಕೆ ಈ ಘಟನೆ ಹಿಡಿದ ಕೈಗನ್ನಡಿ.

ಮೊಬೈಲ್‌ ನಲ್ಲಿ ಮಾತನಾಡುತ್ತಿದ್ದ ವೇಳೆ ವ್ಯಕ್ತಿಯೊಬ್ಬ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆಯೊಂದು ಹಾಸನದಲ್ಲಿ ನಡೆದಿದೆ.

ಅಂಗಡಿಯ ಸಿಸಿಟಿವಿಯಲ್ಲಿ ಸೆರೆ

ಹಾಸನದ ಹೊಳೆನರಸೀಪುರದ ಕಾರ್ಯಾಲಯ ಬಡಾವಣೆಯ ನಿವಾಸಿ ವೀರೂಪಾಕ್ಷ (40) ಸಾವನ್ನಪ್ಪಿದ ವ್ಯಕ್ತಿ. ಹೊಳೆನರಸೀಪುರ ಪಟ್ಟಣದ ಅರಣ್ಯ ಕಚೇರಿ ಬಳಿ ಈ ಘಟನೆ ನಡೆದಿದ್ದು, ಘಟನೆಯ ಎಲ್ಲಾ ದೃಶ್ಯಗಳು ಅಂಗಡಿಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಕುಳಿತಲ್ಲೇ ಹಠಾತ್‌ ಹೃದಯಾಘಾತ

ವಿರೂಪಾಕ್ಷ ಅಂಗಡಿಯ ಮುಂಭಾಗದಲ್ಲಿ ಕುಳಿತು ಮೊಬೈಲ್‌ನಲ್ಲಿ ಮಾತನಾಡುತ್ತಿದ್ದ. ಈ ವೇಳೆ ಹಠಾತ್‌ ಹೃದಯಾಘಾತವಾಗಿದೆ. ನೋಡ ನೋಡುತ್ತಿದ್ದಂತೆ ವೀರೂಪಾಕ್ಷ ಕುಸಿದು ಬಿದ್ದಿದ್ದಾನೆ.

ಈ ವೇಳೆ ಅಲ್ಲಿದ್ದ ಸ್ಥಳೀಯರು ವಿರೂಪಾಕ್ಷನನ್ನು ಆಸ್ಪತ್ರೆಗೆ ಶಿಫ್ಟ್ ಮಾಡಿದ್ದಾರೆ. ಆದರೆ, ವಿರೂಪಾಕ್ಷ ಹೃದಯಾಘಾತದಿಂದ ಮೃತಪಟ್ಟಿದ್ದಾನೆ ಎಂದು ವೈದ್ಯರು ದೃಢಪಡಿಸಿದ್ದಾರೆ.

RELATED ARTICLES

Related Articles

TRENDING ARTICLES