Friday, November 15, 2024

ಚೀನಾ ನಡವಳಿಕೆ ಕಳವಳಕಾರಿಯಾಗಿದೆ : ರಿಷಿ ಸುನಕ್

ಬೆಂಗಳೂರು : ಚೀನಾ ದೇಶದ ನಡವಳಿಕೆ ಬಗ್ಗೆ ಬ್ರಿಟನ್ ಪ್ರಧಾನಿ ರಿಷಿ ಸುನಕ್ ಮೌನ ಮುರಿದಿದ್ದಾರೆ. ಕಳೆದ ಕೆಲವು ವರ್ಷಗಳಲ್ಲಿ ಚೀನಾದ ನಡವಳಿಕೆಯು ಕಳವಳಕಾರಿಯಾಗಿದೆ ಎಂದು ಹೇಳಿದ್ದಾರೆ.

ಆಕಸ್ ಒಪ್ಪಂದದ ಕುರಿತಾದ ಚರ್ಚೆಗೆ ಅಮೆರಿಕಕ್ಕೆ ಆಗಮಿಸಿರುವ ಅವರು, ವಿಶ್ವದ ಎರಡನೇ ಅತಿದೊಡ್ಡ ಆರ್ಥಿಕತೆಯ ಮೌಲ್ಯಗಳು ಬ್ರಿಟನ್‌ಗಿಂತಲೂ ಹೆಚ್ಚು ಭಿನ್ನವಾಗಿವೆ ಎಂದು ಪ್ರತಿಪಾದಿಸಿದ್ದಾರೆ.

ಆರ್ಥಿಕ ಹಿತಾಸಕ್ತಿಗಳಿಗೆ ಬೆದರಿಕೆ

ಚೀನಾ ನಮ್ಮ ಆರ್ಥಿಕ ಹಿತಾಸಕ್ತಿಗಳಿಗೆ ಬೆದರಿಕೆಯಾಗಿದ್ದು, ಇಡೀ ವಿಶ್ವಕ್ಕೆ ವ್ಯವಸ್ಥಿತ ಸವಾಲನ್ನು ಒಡ್ಡುತ್ತಿದೆ ಎಂಬುದು ಸ್ಪಷ್ಟವಾಗಿದೆ. ಆ ದೇಶವು ಮೂಲಭೂತವಾಗಿ ವಿಭಿನ್ನ ಮೌಲ್ಯಗಳನ್ನು ಹೊಂದಿದೆ ಮತ್ತು ಕಳೆದ ಕೆಲವು ವರ್ಷಗಳಿಂದ ಅದರ ನಡವಳಿಕೆಯು ಕಳವಳಕಾರಿಯಾಗಿದೆ ಎಂದು ಸುನಕ್ ತನ್ನ ಪ್ರವಾಸದ ಸಮಯದಲ್ಲಿ ಖಾಸಗಿ ನ್ಯೂಸ್‌ಗೆ ತಿಳಿಸಿದ್ದಾರೆ.

ಬ್ರಿಟನ್ ಈಗ ತನ್ನ ಸ್ಥಾನಕ್ಕೆ ಮರಳಿದೆ. ಚೀನಾ ಒಡ್ಡುವ ಸವಾಲನ್ನು ಹೆಚ್ಚು ದೃಢವಾಗಿ ಎದುರಿಸಲು ಸಿದ್ಧವಾಗಿದೆ ಎಂದು ಪ್ರಧಾನಿ ರಿಷಿ ಸುನಕ್ ಹೇಳಿದ್ದಾರೆ.

ಇಂಡೊ-ಪೆಸಿಫಿಕ್‌ನಲ್ಲಿ ಹೆಚ್ಚುತ್ತಿರುವ ಚೀನಾದ ಮಿಲಿಟರಿ ಪ್ರಭಾವವನ್ನು ಇತರ ರಕ್ಷಣಾ ಪಾಲುದಾರ ದೇಶಗಳ ನೆರವಿನೊಂದಿಗೆ ಎದುರಿಸಲು ಅಮೆರಿಕ, ಬ್ರಿಟನ್ ಮತ್ತು ಆಸ್ಟ್ರೇಲಿಯಾ ಯೋಜಿಸಿವೆ.

RELATED ARTICLES

Related Articles

TRENDING ARTICLES