Sunday, December 22, 2024

ಮಾಧ್ಯಮದವರ ಪ್ರಶ್ನೆಗೆ ಸಿದ್ದರಾಮಯ್ಯ ಕಕ್ಕಾಬಿಕ್ಕಿ : ಮುಂದೇನಾಯ್ತು?

ಬೆಂಗಳೂರು : ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ಫೀವರ್ ಹೆಚ್ಚಾಗುತ್ತಿದ್ದಂತೆಯೇ ರಾಜಕೀಯ ನಾಯಕರಿಗೂ ತಲೆ ಬಿಸಿ ಹೆಚ್ಚಾಗಿದೆ. ಹೀಗಾಗಿಯೇ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ತಲೆ ಬಿಸಿಯಾಗಿದ್ದಾರೆ.

ಹೌದು, ಮಾಧ್ಯಮದವರು ಕೇಳಿದ ಪ್ರಶ್ನೆಗೆ ಸಮಾಧಾನವಾಗಿ ಉತ್ತರಿಸುತ್ತಿದ್ದ ಸಿದ್ದರಾಮಯ್ಯನವರು ಇಂದು ಪ್ರತಿಕ್ರಿಯಿಸಲಾಗದೆ ಕಕ್ಕಾಬಿಕ್ಕಿಯಾಗಿದ್ದಾರೆ.

‘ಹೇ.. ನಡೀಯಪ್ಪ ನೀನು, ನನಗೆ ತಲೆ ಬಿಸಿಯಾಗಿದೆ’ ಅಂತಾ ಹೇಳಿ ವಿರೋಧ ಪಕ್ಷದ ನಾಯಕ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ಹೊರಟ ಘಟನೆ ಅರಮನೆನಗರಿ ಮೈಸೂರಿನಲ್ಲಿ ನಡೆದಿದೆ.

ನಂಜನಗೂಡು ಟಿಕೆಟ್ ಟೆನ್ಶನ್

ನಂಜನಗೂಡು ಟಿಕೆಟ್ ಟೆನ್ಷನ್ ನಲ್ಲಿ ಸಿದ್ದರಾಮಯ್ಯ ಇದ್ದಾರೆ ಎನ್ನಲಾಗಿದೆ. ಇಂದು ಬೆಳ್ಳಂಬೆಳಗ್ಗೆ ಮಾಜಿ ಸಿಎಂ ಸಿದ್ದರಾಮಯ್ಯ ಮನೆಗೆ ಮಾಜಿ ಸಚಿವ ಡಾ.ಎಚ್.ಸಿ ಮಹದೇವಪ್ಪ ದೌಡಾಯಿಸಿದ್ದಾರೆ. ಕೆಲಕಾಲ ನಂಜನಗೂಡು ಟಿಕೆಟ್ ವಿಚಾರವಾಗಿ ಮಾತುಕತೆ ನಡೆದಿದ್ದು, ನಗರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡದೆ ಸಿದ್ದರಾಮಯ್ಯ ಹೊರಟಿದ್ದು, ಟೆನ್ಶನ್ ನಲ್ಲಿರುವುದಕ್ಕೆ ಪುಷ್ಠಿ ನೀಡಿತ್ತು.

ಧ್ರುವನಾರಾಯಣ ಅವರ ಮಗನಿಗೆ ಟಿಕೆಟ್ ನೀಡಬೇಕೆಂದು ಗಲಾಟೆಯಾದ ವಿಚಾರಕ್ಕೆ ನಂಜನಗೂಡು ಟಿಕೆಟ್ ಆಕಾಂಕ್ಷಿ ಡಾ.ಹೆಚ್‍ಸಿ ಮಹದೇವಪ್ಪ ಬೇಸರ ವ್ಯಕ್ತಪಡಿಸಿದ್ದಾರೆ.

ಜೀವ ಹೋದ್ರೆ ಮತ್ತೊಂದು ಬಾರಿ ಸಿಗಲ್ಲ

ಯಾರಿಗೆ ಜೀವನದ ಮೂಲ್ಯದ ಬಗ್ಗೆ ಮಹತ್ವ ಇಲ್ಲವೋ ಅವರೆಲ್ಲಾ ಈ ರೀತಿ ಮಾತನಾಡುತ್ತಾರೆ. ಅಧಿಕಾರ, ಅಂತಸ್ತಿಗಿಂತಾ ಜೀವ ಮುಖ್ಯ. ಜೀವ ಹೋದ್ರೆ ಮತ್ತೊಂದು ಬಾರಿ ಸಿಗಲ್ಲ. ಅಘಾಕಾರಿ ಘಟನೆ ನಡೆದು ಧ್ರುವನಾರಾಯಣ ತೀರಿ ಹೋಗಿದ್ದಾರೆ. ಆ ನೋವು ಎಲ್ಲರಲ್ಲೂ ನನ್ನಲ್ಲೂ ಸೇರಿದಂತೆ ಇದೆ. ಜೀವದ ಮುಂದೆ ಪೊಲಿಟಿಕಲ್ ಪವರ್, ಟಿಕೆಟ್ ಯಾವುದೇ ಇಂಪಾರ್ಟೆಂಟ್ ಅಲ್ಲ ಎಂದು ಮಹದೇವಪ್ಪ ಹೇಳಿದ್ದಾರೆ.

RELATED ARTICLES

Related Articles

TRENDING ARTICLES