Wednesday, January 22, 2025

ಇದೇ ಕಾರಣಕ್ಕೆ ಮೋದಿ ಇಷ್ಟ ಆಗೋದು! : ಯಾರೇ ಬಂದ್ರೂ ಮೋದಿ ನಮಸ್ಕಾರ

ಬೆಂಗಳೂರು : ಧಾರವಾಡದ ಐಐಟಿ ಕ್ಯಾಂಪಸ್ ಉದ್ಘಾಟನೆಗಾಗಿ ಆಗಮಿಸಿದ್ದ ಪ್ರಧಾನಿ ನರೇಂದ್ರ  ಮೋದಿ, ಕಾರ್ಯಕರ್ತರು ಹಾಗೂ ರಾಜ್ಯದ ಜನರ ಮನಗೆದ್ದಿದ್ದಾರೆ.

ಸಮಾರಂಭದ ವೇದಿಕೆಯತ್ತ ತೆರಳುವಾಗ ಪ್ರಧಾನಿ ನರೇಮದ್ರ ಮೋದಿ ಅವರ ಕಾಲಿಗೆ ಆರ್.ಎಸ್.ಎಸ್. ಕಾರ್ಯಕರ್ತರು ನಮಿಸಲು ಮುಂದಾದರು. ಇದಕ್ಕೆ ಪ್ರತಿಯಾಗಿ ಮೋದಿ ಅವರೂ ಬಾಗಿ ಪ್ರತಿ ನಮಸ್ಕಾರ ಮಾಡಿದ್ದಾರೆ.

ಇನ್ನೂ ಮಂಡ್ಯ ಸಮಾವೇಶದಲ್ಲೂ ಮಹಿಳೆಯೊಬ್ಬರು ಮೋದಿಗೆ ನಮಸ್ಕರಿಸಲು ಮುಂದಾಗಿದ್ದರು. ಈ ವೇಳೆ ನಮೋ ಮಹಿಳೆ ಕಾಲಿಗೆ ನಮಸ್ಕಾರ ಮಾಡಲು ಮುಂದಾದರು. ಈ ಫೋಟೋಗಳು ಭಾರೀ ವೈರಲ್ ಆಗುತ್ತಿವೆ.

ಯಾರೇ ಬಂದ್ರೂ ಮೋದಿ ನಮಸ್ಕಾರ

ಪ್ರಧಾನಿ ಹುದ್ದೆಗೆ ಕಳಂಕ ತಂದಿದ್ದಾರೆ ಎಂಬ ಕಾಂಗ್ರೆಸ್ ಟ್ವೀಟ್​​​ಗೆ ಪ್ರತಿಕ್ರಿಯಿಸಲು ಸಿಎಂ ನಿರಾಕರಿಸಿದ್ದಾರೆ. ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಸಾರ್ವಜನಿಕವಾಗಿ ಯಾರೇ ಬಂದ್ರೂ ಮೋದಿ ನಮಸ್ಕಾರ ಮಾಡ್ತಾರೆ ಎಂದು ಸಿಎಂ ಹೇಳಿದ್ದಾರೆ.

ಇದನ್ನೂ ಓದಿ : ಪ್ರಧಾನಿ ಮೋದಿ ಮುಂದೆ ಸಿಎಂ ಬೊಮ್ಮಾಯಿ ಅಬ್ಬರದ ಭಾಷಣ

ಮಂಡ್ಯ ಮತ್ತು ಧಾರವಾಡದ ಕಾರ್ಯಕ್ರಮಗಳಿಗಾಗಿ ಪ್ರಧಾನಿ ನರೇಂದ್ರ ಮೋದಿ ಭಾನುವಾರ ಕರ್ನಾಟಕಕ್ಕೆ ಆಗಮಿಸಿದ್ದರು. ಮಂಡ್ಯದಲ್ಲಿ ಆಯೋಜಿಸಿದ್ದ ಬೆಂಗಳೂರು–ಮೈಸೂರು ರಾಷ್ಟ್ರೀಯ ಹೆದ್ದಾರಿ ಉದ್ಘಾಟನೆಗೆಂದು ಮೈಸೂರಿಗೆ ಬಂದಿಳಿದಿದ್ದ ನರೇಂದ್ರ ಮೋದಿ ಅವರನ್ನು ಬರಮಾಡಿಕೊಂಡ ಬಿಜೆಪಿ ನಾಯಕರ ನಿಯೋಗದಲ್ಲಿ ಫೈಟರ್‌ ರವಿ ಇದ್ದರು ಎನ್ನಲಾಗಿದ್ದು, ಈ ಚಿತ್ರವನ್ನು ಕಾಂಗ್ರೆಸ್​ ಶೇರ್​ ಮಾಡಿತ್ತು.

ಫೈಟರ್‌ ರವಿ ಎಂಬುವವರ ಎದುರು ಕೈಮುಗಿದು ನಿಂತ ನರೇಂದ್ರ ಮೋದಿ ಅವರಿಂದ ಪ್ರಧಾನಿ ಹುದ್ದೆಗೆ ಕಳಂಕ ಅಂಟಿದೆ ಎಂದು ಕಾಂಗ್ರೆಸ್‌ ಆರೋಪಿಸಿತ್ತು.

RELATED ARTICLES

Related Articles

TRENDING ARTICLES