Monday, December 23, 2024

RRRಗೆ ಆಸ್ಕರ್ ಅವಾರ್ಡ್ : ಹೀಗಿತ್ತು ನಾಟು.. ನಾಟು ಚಿತ್ರೀಕರಣ

ಬೆಂಗಳೂರು: ಭಾರತಕ್ಕೆ ಈಗಾಗಲೇ ದಿ ಎಲಿಫೆಂಟ್ ವಿಸ್ಪರರ್ಸ್ ಚಿತ್ರಕ್ಕೆ ಆಸ್ಕರ್ ಅವಾರ್ಡ್ ಸಿಕ್ಕಿದೆ. ಈಗ ಮತ್ತೊಂದು ಆಸ್ಕರ್ ಅವಾರ್ಡ್ ಭಾರತಕ್ಕೆ ಒಲಿದಿದೆ.

ರಾಜಮೌಳಿಯ RRR ಸಿನಿಮಾದ ನಾಟು ನಾಟು ಹಾಡಿಗೆ ಅತ್ಯುತ್ತಮ ಒರಿಜಿನಲ್ ಸಾಂಗ್ ಕೆಟಗರಿಯಲ್ಲಿ ಆಸ್ಕರ್ ಒಲಿದಿದ್ದು, ಭಾರತಕ್ಕೆ ಹೆಮ್ಮೆಯ ಕ್ಷಣ ಎನಿಸಿದೆ. ವೇದಿಕೆ ಏರಿ ಆಸ್ಕರ್ ಸ್ವೀಕರಿಸಿದ ಸಂಗೀತ ನಿರ್ದೇಶಕ ಕೀರವಾಣಿ ಹಾಡೊಂದನ್ನು ಹಾಡಿ ಸಂತಸಪಟ್ಟಿದ್ದು, ಆ‌ಆರ್‌ಆ‌ ಭಾರತದ ಹೆಮ್ಮೆ ಎಂದಿದ್ದಾರೆ.

ಅತ್ಯುತ್ತಮ ಮೂಲ ಹಾಡು ವಿಭಾಗದಲ್ಲಿ ಈ ಹಾಡು ಪ್ರಶಸ್ತಿ ಬಾಚಿಕೊಂಡಿದೆ. ಇದು ಈ ಚಿತ್ರಕ್ಕೆ ಲಭಿಸಿದ ಮೂರನೇ ಅಂತಾರಾಷ್ಟ್ರೀಯ ಗೌರವವಾಗಿದೆ. ಈ ಹಿಂದೆ ‌ಗೋಲ್ಡನ್‌ ಗ್ಲೋಬ್‌ ಹಾಗೂ ಕ್ರಿಟಿಕ್‌ ಚಾಯ್ಸ್‌ ಅವಾರ್ಡ್‌ಗೆ ಈ ಹಾಡು ಪಾತ್ರವಾಗಿತ್ತು.

ಚಂದ್ರಬೋಸ್‌ ಬರೆದಿರುವ ಈ ಹಾಡಿಗೆ ಎಂ.ಎಂ ಕೀರವಾಣಿಯವರು ಸಂಗೀತ ಸಂಯೋಜನೆ ಮಾಡಿದ್ದಾರೆ.

7 ದಿನ ಪ್ರಾಕ್ಟೀಸ್, 17 ದಿನ ಶೂಟಿಂಗ್

ನಾಟು ನಾಟು ಸಾಂಗ್ ಶೂಟಿಂಗ್ ಗೆ ಚಿತ್ರತಂಡ ಸಾಕಷ್ಟು ಎಫರ್ಟ್​ ಹಾಕಿತ್ತು. ಉಕ್ರೇನ್ ಅಧ್ಯಕ್ಷರ ಮನೆ ಮುಂದೆ ಚಿತ್ರಿತವಾದ ಈ ಹಾಡಿಗಾಗಿ ಬರೋಬ್ಬರಿ 7 ದಿನ ರಿಹಾರ್ಸಲ್ ಮಾಡಿದ್ದರು. ಪ್ರತೀ ದಿನ ಮೂರು ಗಂಟೆಗಳ ಕಾಲ ರಾಮ್ ಚರಣ್, ಜೂ. ಎನ್ ಟಿಆರ್ ಹಾಗೂ ತಂಡ ಚಿತ್ರೀಕರಣದಲ್ಲಿ ಭಾಗಿಯಾಗಿದ್ದರು. ಹೀಗಾಗಿಯೇ, ರಾಮ್ ಚರಣ್ ಹಾಗೂ ಜೂ. ಎನ್ ಟಿಆರ್ ಇಬ್ಬರದ್ದು ಒಂದೇ ರೀತಿ ಸ್ಟೆಪ್ಸ್ ಬರುವುದಕ್ಕೆ ಸಾಧ್ಯವಾಗಿದೆ. ಸುಮಾರು 17 ದಿನಗಳ ಕಾಲ ಚಿತ್ರೀಕರಣಗೊಂಡ ಈ ಹಾಡಿಗೆ 17 ರೀ ಟೇಕ್ಸ್ ತೆಗೆದುಕೊಂಡಿದ್ದು ಮತ್ತೊಂದು ವಿಶೇಷ ಎನ್ನಬಹುದು.

20 ಹಾಡುಗಳು ರಿಜೆಕ್ಟ್

150ಕ್ಕೂ ಅಧಿಕ ಮಂದಿ ಪ್ರೊಫೆಷನಲ್ ಡ್ಯಾನ್ಸರ್ಸ್​ ಹಾಗೂ 200 ಮಂದಿ ಟೀಂನೊಂದಿಗೆ ಇದು ಸಾಕಾರಗೊಂಡಿದೆ. ಅಲ್ಲದೆ, ಈ ಹಾಡಿನ ಟ್ಯೂನ್ ಕಂಪೋಸಿಂಗ್​ಗೆ ಬರೋಬ್ಬರಿ 19 ತಿಂಗಳ ಕಾಲಾವಕಾಶ ತೆಗೆದುಕೊಂಡಿದ್ದರಂತೆ ಕೀರವಾಣಿ. ಸುಮಾರು 20 ಹಾಡುಗಳು ಬರೆದು, ರಿಜೆಕ್ಟ್ ಆದ ಬಳಿಕ, ಚಿತ್ರತಂಡದ ವೋಟಿಂಗ್​ನಿಂದ ನಾಟು ನಾಟು ಫೈನಲ್ ಆಗಿತ್ತು.

ಇದನ್ನೂ ಓದಿ : IMDB ಟ್ರೆಂಡಿಂಗ್ ನಲ್ಲಿ ಕಬ್ಜ ನಂ.1 : ಗ್ಲೋಬಲ್ ಮಾರ್ಕೆಟ್ ಕಬ್ಜಾಗೆ ಉಪ್ಪಿ ರೆಡಿ

ಆಸ್ಕರ್‌ ಪಡೆದ ಭಾರತೀಯರು

  1. ಭಾನು ಅತ್ತಯ್ಯ, ‘ಬೆಸ್ಟ್ ಕಾಸ್ಟ್ಯೂಮ್ ಡಿಸೈನರ್’- 1982ರ ಗಾಂಧಿ ಬಯೋಗ್ರಫಿಗಾಗಿ
  2. ಸತ್ಯಜಿತ್ ರೇ,1992ರಲ್ಲಿ ‘ಜೀವಮಾನ ಸಾಧನೆ’ಗಾಗಿ ಆಸ್ಕರ್‌ ಪ್ರಶಸ್ತಿ
  3. ರೆಸೂಲ್ ಪೂಕುಟ್ಟಿ, 2009ರಲ್ಲಿ ‘ಸ್ಲಂ ಡಾಗ್ ಮಿಲಿಯನೇರ್’ ಚಿತ್ರದ ‘ಬೆಸ್ಟ್ ಸೌಂಡ್ ಡಿಸೈನರ್’
  4. ಗುಲ್ಜಾರ್, 2009ರಲ್ಲಿ ‘ಜೈಹೋ’ ‘ಬೆಸ್ಟ್ ಒರಿಜಿನಲ್ ಸಾಂಗ್’ಗಾಗಿ ಪ್ರಶಸ್ತಿ
  5. ಎ.ಆರ್.ರಹಮಾನ್, 2009ರ ಸ್ಲಂ ಡಾಗ್ ಮಿಲಿಯನೇರ್ ಚಿತ್ರದ ಜೈಹೋ ಸಾಂಗ್‌ನ ‘ಬೆಸ್ಟ್ ಕಂಪೋಸರ್’
  6. 2019ರಲ್ಲಿ ಗುನೀತ್‌ ಮೊಂಗಾ,‘ ಪಿರಿಯಡ್‌ ಎಂಡ್ ಆಫ್‌ ಸೆಂಟೆನ್ಸ್‌’ ಸಾಕ್ಷ್ಯಚಿತ್ರಕ್ಕೆ ಪ್ರಶಸ್ತಿ
  7. 2023ರ ಅತ್ಯುತ್ತಮ ಸಾಕ್ಷ್ಯ ಚಿತ್ರ ‘ದಿ ಎಲಿಫೆಂಟ್‌ ವಿಸ್ಪರರ್ಸ್‌’
  8. 2023ರ ಬೆಸ್ಟ್‌ ಒರಿಜಿನಲ್‌ ವಿಭಾಗದಲ್ಲಿ ‘ನಾಟು ನಾಟು’ ಹಾಡಿಗೆ ಪ್ರಶಸ್ತಿ

RELATED ARTICLES

Related Articles

TRENDING ARTICLES