ಬೆಂಗಳೂರು : ಭಾರತ ಹಾಗೂ ಆಸ್ಟ್ರೇಲಿಯಾ ವಿರುದ್ಧದ 4ನೇ ಹಾಗೂ ಅಂತಿಮ ಟೆಸ್ಟ್ ಪಂದ್ಯ ಡ್ರಾದಲ್ಲಿ ಅಂತ್ಯಗೊಂಡಿದೆ. ಇದರೊಂದಿಗೆ ಭಾರತ 4 ಟೆಸ್ಟ್‌ಗಳ ಸರಣಿಯನ್ನು 2-1 ಅಂತರದಿಂದ ವಶಪಡಿಸಿಕೊಂಡಿದೆ.
ಮೊದಲು ಬ್ಯಾಟ್ ಮಾಡಿದ ಆಸೀಸ್ ಮೊದಲ ಇನಿಂಗ್ಸ್ ನಲ್ಲಿ 480 ರನ್ ಗಳಿಗೆ ಆಲೌಟ್ ಆಗಿದ್ದರೆ, ಭಾರತ 571 ರನ್ ಗಳಿಸಿ ಅಲ್ಪ ಮುನ್ನಡೆ ಪಡೆಯಿತು. ಬಳಿಕ ಎರಡನೇ ಇನಿಂಗ್ಸ್ ಆರಂಭಿಸಿದ ಆಸೀಸ್ 175/2 ಸ್ಕೋರ್ ಮಾಡಿತ್ತು. ಅಂಪೈರ್ ಗಳು ಪಂದ್ಯ ಡ್ರಾ ಎಂದು ಘೋಷಿಸಿದರು.
ಫೈನಲ್ ಗೆ ಭಾರತ
ಇನ್ನು, ಭಾರತ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಗೆ ಅಂತಿಮವಾಗಿ ಪ್ರವೇಶ ಪಡೆದುಕೊಂಡಿದೆ. ಕ್ರೈಸ್ಟ್ ಚರ್ಚ್ ನಲ್ಲಿ ನಡೆದ ನ್ಯೂಜಿಲೆಂಡ್ ಹಾಗೂ ಶ್ರೀಲಂಕಾ ನಡುವಿನ ಮೊದಲ ಟೆಸ್ಟ್ ಪಂದ್ಯದಲ್ಲಿ ಅತಿಥೇಯ ಕಿವೀಸ್ ತಂಡ ಎರಡು ವಿಕೆಟ್ ಗಳ ರೋಚಕ ಜಯ ಸಾಧಿಸಿದೆ.
ಇದನ್ನೂ ಓದಿ : Wow : ಅಂತೋನಿ ಜೊತೆ ಸೆಲ್ಫಿಗೆ ಫೋಸ್ ಕೊಟ್ಟ ನರೇಂದ್ರ ಮೋದಿ
ಈ ಗೆಲುವು ಭಾರತದ ಫಯನಲ್ ಕನಸನ್ನು ಸುಗಮಗೊಳಿಸಿದೆ. ಜೂನ್ 7 ರಂದು ಭಾರತವು ವಿಶ್ವ ಟೆಸ್ಟ್ ಚಾಂಪಿಯನ್ ಶಿಫ್ (WTC) ಫೈನಲ್‌ನಲ್ಲಿ ಆಸ್ಟ್ರೇಲಿಯಾ ತಂಡವನ್ನು ಎದುರಿಸಲಿದೆ.