Thursday, April 25, 2024

ಸ್ಫೋಟಕ ಹೇಳಿಕೆ : ಮೋದಿ ಸಮಾಧಿ ನಿರ್ಮಿಸಲು ಪ್ಲಾನ್

ಬೆಂಗಳೂರು : ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನಲ್ಲಿ ಬೆಂಗಳೂರು-ಮೈಸೂರು ಎಕ್ಸ್ ಪ್ರೆಸ್ ವೇ ಯನ್ನು ಲೋಕಾರ್ಪಣೆಗೊಳಿಸಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ಕಾಂಗ್ರೆಸ್ ವಿರುದ್ಧ ಟೀಕಾ ಪ್ರಹಾರ ನಡೆಸಿದ್ದಾರೆ.

ಪ್ರಧಾನಿ ಮೋದಿ ರಸ್ತೆ, ವಸತಿ, ಕೃಷಿಕರ ಅಭಿವೃದ್ಧಿಗೆ ಶ್ರಮಿಸುತ್ತಿದ್ದರೆ, ಕಾಂಗ್ರೆಸ್ ಮೋದಿಯ ಸಮಾಧಿ ಅಗೆಯಲು ಕನಸು ಕಾಣುತ್ತಿದೆ. ಇದಕ್ಕೆಲ್ಲಾ ನಾನು ತಲೆಕೆಡಿಸಿಕೊಳ್ಳುವುದಿಲ್ಲ ಎಂದು ಕಾಂಗ್ರೆಸ್ ನಾಯಕರಿಗೆ ತಿರುಗೇಟು ಕೊಟ್ಟಿದ್ದಾರೆ.

ಮೋದಿಯ ಹಿಂದೆ ದೇಶದ ಜನರ ಆಶೀರ್ವಾದ ನನ್ನ ರಕ್ಷಾ ಕವಚವಾಗಿದೆ. ಶೋಷಿತ ವರ್ಗಗಳ ಆಶೀರ್ವಾದ ನನ್ನ ಜೊತೆಯಿದೆ. ಮೋದಿಯನ್ನು ಎಂದೂ ಇವರು ಹಿಂದೆ ತಿರುಗಿ ನೋಡಲು ಬಿಡುವುದಿಲ್ಲ ಅನ್ನುವ ನಂಬಿಕೆ ಇದೆ. ಸಮಾಧಿ ಸೇರಿಸುವ ಕಾಂಗ್ರೆಸ್ ಕನಸು ಎಂದೂ ನನಸಾಗುವುದಿಲ್ಲ ಎಂದು ಕಿಡಿಕಾರಿದ್ದಾರೆ.

ಇದನ್ನೂ ಓದಿ : ಹೀಗಿರಲಿದೆ ಕರುನಾಡಲ್ಲಿ ಪ್ರಧಾನಿ ಮೋದಿ ಮೇನಿಯಾ..!

ಕನ್ನಡದಲ್ಲೇ ಮೋದಿ ಮಾತು

ಕರ್ನಾಟಕದ ಎಲ್ಲಾ ಸಹೋದರ-ಸಹೋದರಿಯರಿಗೆ  ನನ್ನ ನಮಸ್ಕಾರಗಳು ಎಂದು ಹೇಳುವ ಮೂಲಕ ಪ್ರಧಾನಿ ಮೋದಿ ಅವರು ಕನ್ನಡದಲ್ಲೇ ಭಾಷಣ ಆರಂಭಿಸಿದರು. ತಾಯಿ ಭುವನೇಶ್ವರಿಗೂ, ಆದಿಚುಂಚನಗಿರಿ ಶ್ರೀಗಳಿಗೆ ನನ್ನ ನಮಸ್ಕಾರ. ಮೇಲುಕೋಟೆ ಚೆಲುವನಾರಾಯಣನಿಗೆ ನನ್ನ ನಮಸ್ಕಾರಗಳು ಎಂದು ಹೇಳಿದರು.

ನಾನು ಕರ್ನಾಟಕದ ಹಲವು ಜಿಲ್ಲೆಗಳಿಗೆ ಭೇಟಿ ನಿಡಿದ್ದೇನೆ. ಮಂಡ್ಯ ಜನತೆ ಆಶೀರ್ವಾದ ಸಿಹಿ ಆಗಿರುತ್ತದೆ. ಇದಕ್ಕೆ ಇಲ್ಲಿ ನೆರೆದಿರುವ ಜನರೇ ಸಾಕ್ಷಿ ಎಂದು ತಿಳಿಸಿದ್ದಾರೆ.

RELATED ARTICLES

Related Articles

TRENDING ARTICLES