Friday, November 22, 2024

852 ಕೋಟಿ ವೆಚ್ಚದ ಐಐಟಿ ಕ್ಯಾಂಪಸ್ಗೆ ಮೋದಿ ಚಾಲನೆ

ಬೆಂಗಳೂರು : ಪೇಡಾನಗರಿಯಲ್ಲಿ ದೇಶದ ಮೊದಲ ಹಸಿರು ಐಐಟಿ ಕ್ಯಾಂಪಸ್ ಲೋಕಾರ್ಪಣೆಯಾಗಿದೆ. ಧಾರವಾಡದ ಚಿಕ್ಕಮಲ್ಲಿಗವಾಡ ಬಳಿ ಇರುವ ಐಐಟಿ (IIT) ಕ್ಯಾಂಪಸ್‌ ಅನ್ನು ಪ್ರಧಾನಿ ಮೋದಿ ಲೋಕಾರ್ಪಣೆಗೊಳಿಸಿದ್ದಾರೆ.

ರಾಜ್ಯದ ಮೊಟ್ಟ ಮೊದಲ ಐಐಟಿ ಕ್ಯಾಂಪಸ್​ ಇದಾಗಿದ್ದು, 470 ಎಕರೆ ಪ್ರದೇಶದಲ್ಲಿ, 852 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿದೆ.

ಐಐಟಿ ಕ್ಯಾಂಪಸ್‌ನ ವಿಶೇಷತೆಗಳೇನು.?

  • ದೇಶದ ಮೊದಲ ಪರಿಸರ ಸ್ನೇಹಿ ಐಐಟಿ ಕ್ಯಾಂಪಸ್‌
  • ಕ್ಯಾಂಪಸ್​ನಲ್ಲಿದೆ ಚಾಲುಕ್ಯ, ವಿಜಯನಗರ ಸಾಮ್ರಾಜ್ಯದ ವಾಸ್ತುಶಿಲ್ಪ
  • ಮುಖ್ಯದ್ವಾರದಲ್ಲಿ ಕಂಗೊಳಿಸಿದ ಹಂಪಿ ಪ್ರಸಿದ್ಧ ಕಲ್ಲಿನ ರಥ
  • ಮುಖ್ಯದ್ವಾರಕ್ಕೆ ಮೆರುಗು ತಂದ ಚಾಲುಕ್ಯ, ವಿಜಯನಗರ ವಾಸ್ತುಶಿಲ್ಪ
  • 852 ಕೋಟಿ ರೂ. ವೆಚ್ಚದಲ್ಲಿ IIT ಕ್ಯಾಂಪಸ್‌ ನಿರ್ಮಾಣ
  • 470 ಎಕರೆ ಪ್ರದೇಶದಲ್ಲಿ IIT ಕ್ಯಾಂಪಸ್‌ ನಿರ್ಮಾಣ
  • 7 ವರ್ಷಗಳ ಬಳಿಕ ತಲೆ ಎತ್ತಿದೆ ಶಾಶ್ವತ ಕ್ಯಾಂಪಸ್‌

ಪ್ರಕತಿಗೆ  ಹಾನಿಯಾಗದಂತೆ 18 ಬೃಹತ್ ಕಟ್ಟಡಗಳ ನಿರ್ಮಾಣ

ಕ್ಯಾಂಪಸ್ 65 ಎಕರೆ ಸಂರಕ್ಷಿತ ಅರಣ್ಯ ವಲಯ ಹೊಂದಿದೆ

ಪ್ರಾಣಿ ಹಾಗೂ ಪಕ್ಷಿ ಸಂಕುಲಕ್ಕೂ ಆಶ್ರಯ ಕಲ್ಫಿಸಲಾಗಿದೆ

ಮಳೆ ನೀರು ಪೋಲಾಗದಂತೆ ಸಂರಕ್ಷಣೆ

ಕಟ್ಟಡ ಸಾಮಗ್ರಿ ತ್ಯಾಜ್ಯದಿಂದಲೇ 2 ಕಿ.ಮೀ. ಉದ್ದದ ರಸ್ತೆ ನಿರ್ಮಾಣ

ಉಷ್ಣಾಂಶವನ್ನು ಕಡಿಮೆ ಮಾಡಲು 5 ಸಾವಿರ ಗಿಡ ನೆಡಲು ಚಿಂತನೆ

6 ಕೆರೆಗಳು, 400 ಮಾವಿನ ಗಿಡಗಳನ್ನು ಹಾಗೇ ಉಳಿಸಿಕೊಳ್ಳಲಾಗಿದೆ

ಈ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕೇಂದ್ರ ಸಚಿವ ಪ್ರಹ್ಲಾದ್​ ಜೋಶಿ, ಸಿಎಂ ಬಸವರಾಜ ಬೊಮ್ಮಾಯಿ, ವಸತಿ ಸಚಿವ ವಿ.ಸೋಮಣ್ಣ,ಅರವಿಂದ ಬೆಲ್ಲದ್ ಹಾಗೂ ಇನ್ನಿತರ ಬಿಜೆಪಿ ನಾಯಕರು ಸಾಥ್​ ನೀಡಿದರು.

RELATED ARTICLES

Related Articles

TRENDING ARTICLES