Tuesday, December 24, 2024

ಇನ್ಫೋಸಿಸ್ ಅಧ್ಯಕ್ಷ ಸ್ಥಾನಕ್ಕೆ ಮೋಹಿತ್ ಜೋಶಿ ರಾಜೀನಾಮೆ

ಬೆಂಗಳೂರು : ಇನ್ಫೋಸಿಸ್ ಅಧ್ಯಕ್ಷ ಮೋಹಿತ್ ಜೋಶಿ ಅವರು ಐ.ಟಿ ಕ್ಷೇತ್ರದಲ್ಲಿ ಸುದೀರ್ಘ ಸೇವೆಯನ್ನು ಸಲ್ಲಿಸಿ ಅಧಿಕೃತವಾಗಿ ಇಂದು ರಾಜೀನಾಮೆ ನೀಡಿದ್ದಾರೆ ಎಂದು ಸಂಸ್ಥೆಯು ಪ್ರಕಟಣೆಯಲ್ಲಿ ತಿಳಿಸಿದೆ.

ಮೋಹಿತ್ ಜೋಶಿ ರಾಜೀನಾಮೆ ನೀಡಿದ್ದರೂ, ಜೂನ್ ವರೆಗೆ ಸಂಸ್ಥೆಯಲ್ಲಿ ಇರುತ್ತಾರೆ. ಜೋಶಿಯವರ ನಿರ್ಗಮನವು  ಇನ್ಫೋಸಿಸ್ ನಿರ್ವಹಣಾ ತಂಡದಲ್ಲಿ ದೊಡ್ಡ ನಷ್ಟವನ್ನು ಉಂಟುಮಾಡಲಿದೆ.

ಇನ್ಫೋಸಿಸ್ ಸಂಸ್ಥೆಯ ಅಧ್ಯಕ್ಷರಾಗಿ ಮೋಹಿತ್ ಜೋಶಿ ಅವರು ಇನ್ಫೋಸಿಸ್‌ನಲ್ಲಿ ಹಣಕಾಸು ಸೇವೆಗಳು ಹಾಗೂ ಆರೋಗ್ಯ, ಜೀವ ವಿಜ್ಞಾನ ವ್ಯವಹಾರಗಳ ಹೊಣೆಹೊತ್ತಿದ್ದರು.

ಇದನ್ನೂ ಓದಿ : ಆಗಸ್ಟ್​ನಿಂದ ಭಾರತದಲ್ಲಿ ಏರ್​ಟೆಲ್ 5G ಸೇವೆ

ಇನ್ಫೋಸಿಸ್ ಸಂಸ್ಥೆಯು ಮೋಹಿತ್ ಅವರನ್ನು ಉಳಿಸಿಕೊಳ್ಳಲು ಕೊನೆಯ ಪ್ರಯತ್ನವನ್ನು ಮಾಡಿದೆ. ಆದರೆ, ಅವರು ಸಂಸ್ಥೆಯಲ್ಲಿ ದೊಡ್ಡ ಪಾತ್ರವನ್ನು ನೋಡುತ್ತಿದ್ದಾರೆ ಎಂದು ತಿಳಿದುಬಂದಿದೆ.

ಮಾರ್ಚ್ 11, 2023 ರಿಂದ ಅವರು ರಜೆಯಲ್ಲಿರುತ್ತಾರೆ. ಅವರು ಕಂಪನಿಯೊಂದಿಗೆ ಜೂನ್ 09, 2023ವರೆಗೆ ಇರುತ್ತಾರೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

RELATED ARTICLES

Related Articles

TRENDING ARTICLES