Wednesday, January 22, 2025

Wow: ಅಣ್ಣ-ತಂಗಿಯ ಜಗಳ : ಅಬ್ಬಾ11 ಮಿಲಿಯನ್ ವೀಕ್ಷಣೆ!

ಬೆಂಗಳೂರು : ಇದು ಸೋಶಿಯಲ್ ಮೀಡಿಯಾ ಯುಗ. ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ವಿಡಿಯೋಗಳು ಮಿಲಿಯನ್ ಗಟ್ಟಲೆ ವೀಕ್ಷಣೆ ಪಡೆಯುತ್ತವೆ. ಅದೇ ರೀತಿ ಅಣ್ಣ-ತಂಗಿಯ ಜಗಳದ ವಿಡಿಯೋ ನೆಟ್ಟಿಗರಿಂದ 11 ಮಿಲಿಯನ್ ವೀಕ್ಷಣೆ ಪಡೆದಿದೆ.

ಹೌದು, ಅಣ್ಣ-ತಂಗಿಯ ಜಗಳವನ್ನು ತೋರಿಸುವ ಬೆಕ್ಕುಗಳು ಹಾಗೂ ನಾಯಿಯ ತಮಾಷೆ ವಿಡಿಯೋ ಇದಾಗಿದೆ. ಈ ವಿಡಿಯೋವನ್ನು ಇನ್ಟಾಗ್ರಾಮ್‌ನಲ್ಲಿ ಹಂಚಿಕೊಳ್ಳಲಾಗಿದ್ದು, ಬೇಜಾಬ್ ಹೈಪ್ ಕ್ರಿಯೇಟ್ ಮಾಡಿದೆ.

ಜೋರಾಗಿ ಕಿರುಚುವ ಬೆಕ್ಕನ್ನು ತಂಗಿಯಂತೆ

ಈ ವಿಡಿಯೋದಲ್ಲಿ ಎರಡು ಮುದ್ದಾದ ಬೆಕ್ಕುಗಳು ಒಂದನ್ನೊಂದು ದುರುಗುಡುತ್ತಾ ನಿಂತಿರುತ್ತದೆ. ಅದರಲ್ಲಿ ಒಂದು ಬೆಕ್ಕು ಜೋರಾಗಿ ಮ್ಯಾವ್.. ಮ್ಯಾವ್.. ಎಂದು ಜಗಳ ಕಾಯುವ ಹಾಗೆ ಜೋರಾಗಿ ಕಿರುಚುತ್ತದೆ. ಅದರಲ್ಲಿ ಜೋರಾಗಿ ಕಿರುಚುವ ಬೆಕ್ಕನ್ನು ತಂಗಿಗೆ ಹೋಲಿಸಿದ್ದಾರೆ. ಹಾಗೂ ಸುಮ್ಮನೆ ದುರುಗುಡುತ್ತಾ ನಿಂತಿರುವ ಬೆಕ್ಕನ್ನು ಅಣ್ಣನಿಗೆ ಹೋಲಿಸಿದ್ದಾರೆ.

ಬೆಕ್ಕುಗಳ ಮಧ್ಯೆ ನಾಯಿ ಬಂದಿದ್ದೇಕೆ?

ಕೆಲವು ಸೆಕೆಂಡುಗಳವರೆಗೆ ಈ ಎರಡು ಬೆಕ್ಕುಗಳು ಒಂದನ್ನೊಂದು ದುರುಗುಡುತ್ತಾ ನೋಡುತ್ತಿರುತ್ತವೆ. ಇನ್ನೇನೂ ಈ ಎರಡು ಬೆಕ್ಕುಗಳ ನಡುವೆ ಕಿತ್ತಾಟ ಶುರುವಾಗಬೇಕು ಎನ್ನುವಷ್ಟರಲ್ಲಿ ಒಂದು ದೊಡ್ಡ ನಾಯಿ ಈ ಬೆಕ್ಕುಗಳ ಮಧ್ಯೆ ಬಂದು ನಿಂತು ಅವುಗಳ ಜಗಳ ತಣ್ಣಗಾಗುವಂತೆ ನೋಡಿಕೊಳ್ಳುತ್ತದೆ. ಆ ಬೆಕ್ಕುಗಳ ಮಧ್ಯೆ ಬಂದಿರುವ ನಾಯಿಯನ್ನು ತಾಯಿಗೆ ಹೋಲಿಸಲಾಗಿದೆ.

ಇನ್ಟಾಗ್ರಾಮ್‌ನಲ್ಲಿ ಶೇರ್ ಆಗಿರುವ ಈ ವಿಡಿಯೋ 11 ಮಿಲಿಯನ್ ವೀಕ್ಷಣೆಯನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ಬೆಕ್ಕನ್ನು ನೋಡಿ ಎಷ್ಟು ಮುದ್ದಾಗಿರುವ ತಂಗಿ ಎಂದು ಕಮೆಂಟ್ ಮಾಡಿದ್ದಾರೆ. ಇನ್ನೊಬ್ಬರು ಇದು ನಿಜ ಪ್ರತಿ ಮನೆಯಲ್ಲೂ ಹೀಗೆಯೇ ಎಂದು ನಗುತ್ತಾ ಕಮೆಂಟ್ ಮಾಡಿದ್ದಾರೆ.

RELATED ARTICLES

Related Articles

TRENDING ARTICLES