Wednesday, January 22, 2025

‘MeToo’ ಬಗ್ಗೆ ಶಾಕಿಂಗ್ ಹೇಳಿಕೆ ಕೊಟ್ಟ ಸಾಯಿ ಪಲ್ಲವಿ

ಬೆಂಗಳೂರು : ಕನ್ನಡ ಸೇರಿದಂತೆ ಚಿತ್ರರಂಗದಲ್ಲಿ ಕೆಲ ಸಮಯದ ಹಿಂದೆ ಬಹುದೊಡ್ಡ ಅಲೆಯನ್ನೇ ಸೃಷ್ಟಿಸಿದ್ದ ʼಮಿಟೂʼ (MeToo) ಬಗ್ಗೆ ಸೌತ್‌ ಇಂಡಿಯಾ ಬ್ಯೂಟಿ ನಟಿ ಸಾಯಿ ಪಲ್ಲವಿ ಅವರು ಶಾಕಿಂಗ್ ಹೇಳಿಕೆ ನೀಡಿದ್ದಾರೆ.

ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಕಾರ್ಯಕ್ರಮವೊಂದರಲ್ಲಿ ಆರಂಭಿಕ ದಿನಗಳಲ್ಲಿದ್ದ ಡ್ಯಾನ್ಸ್‌ ಹವ್ಯಾಸದ ಕುರಿತು ಸಾಯಿ ಪಲ್ಲವಿ ಮಾತನಾಡಿದ್ದಾರೆ. ಈ ವೇಳೆ ಅವರು ಮಿಟೂ ಬಗ್ಗೆ ಮಾತನಾಡಿದ್ದಾರೆ.

ಪ್ರಶ್ನೆಯೊಂದಕ್ಕೆ ಮುಕ್ತವಾಗಿ ಪ್ರತಿಕ್ರಿಯೆ ನೀಡಿರುವ ಅವರು, ‘ದೈಹಿಕ ಹಿಂಸೆ ಮಾತ್ರವಲ್ಲ, ಮಾತಿನ ಮೂಲಕ ಹಿಂಸಿಸುವುದು ಕೂಡ ಮಿಟೂ ವರ್ಗದ ಅಡಿಯಲ್ಲೇ ಬರುತ್ತದೆ’ ಎಂದು ಸಾಯಿ ಪಲ್ಲವಿ ಹೇಳಿದ್ದಾರೆ.

ಜನಪ್ರಿಯ ನಟಿಯಾಗಿ ಹೆಸರುಗಳಿಸಿರುವ ಸಾಯಿ ಪಲ್ಲವಿ ʼಮಿಟೂʼ ಬಗ್ಗೆ ಮಾತನಾಡಿರುವುದು ಇದೀಗ ಅನೇಕ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಸಾಯಿ ಪಲ್ಲವಿ ಅವರಿಗೆ ಯಾರಾದರೂ ದೈಹಿಕ ಅಥವಾ ಅವರೇ ಹೇಳಿದಾಗೆ ಮಾತಿನ ಮೂಲಕ ಕಿರುಕುಳ ನೀಡಿದ್ದಾರೆಯೇ? ಎಂಬ ಪ್ರಶ್ನೆಗಳನ್ನು ಹುಟ್ಟು ಹಾಕಿದೆ.

ಇದನ್ನೂ ಓದಿ : ನಟಿ ನಗ್ಮಾಗೆ ವಂಚನೆ : ಒಂದೇ ಕ್ಲಿಕ್ ನಲ್ಲಿ 1 ಲಕ್ಷ ಕಳೆದುಕೊಂಡ ‘ಕುರುಬನ ರಾಣಿ’

ಸಾಕಷ್ಟು ʼಮಿಟೂʼ ಪ್ರಕರಣ ಸದ್ದು

ಹಾಲಿವುಡ್‌ ನಲ್ಲಿ ನಿರ್ಮಾಪಕರೊಬ್ಬರು ದೈಹಿಕವಾಗಿ ಕಿರುಕುಳ ನೀಡಿದ ಆರೋಪವನ್ನು ಮುಕ್ತವಾಗಿ ಎಲ್ಲರ ಎದುರಿಗೆ ಕೆಲ ನಟಿಯರು ಹೇಳಿದ ಬಳಿಕ ಭಾರತ ಸೇರಿದಂತೆ ಅನೇಕ ಕಡೆ ʼಮಿಟೂʼ ಪ್ರಕರಣದ ಬಗ್ಗೆ ಧ್ವನಿ ಹೊರಬಂತು.

ಕನ್ನಡದಲ್ಲೆ ಶ್ರುತಿ ಹರಿಹರನ್‌, ಸಂಜನಾ ಧ್ವನಿ

ಹಿಂದಿಯ ನಿರ್ಮಾಪಕ ಸಾಜಿದ್‌ ಅವರ ಮೇಲೆ ಅನೇಕ ನಟಿಯರು ಮಿಟೂ ಆರೋಪವನ್ನು ಮಾಡಿದ್ದರು. ಇದಲ್ಲದೇ ಕನ್ನಡದಲ್ಲೂ ಸಂಗೀತ ಭಟ್‌, ಶ್ರುತಿ ಹರಿಹರನ್‌, ಸಂಜನಾ ಗೆಲ್ರಾನಿ ಸೇರಿದಂತೆ ಹಲವು ನಟಿಯರು ಮಿಟೂ ಬಗ್ಗೆ ಮಾತನಾಡಿದ್ದರು. 2018 ರಲ್ಲಿ ದೊಡ್ಡ ಮಟ್ಟದಲ್ಲಿ ಕೇಳಿ ಬಂದ ಮಿಟೂ ಬಗ್ಗೆ ಇದೀಗ ನಟಿ ಸಾಯಿ ಪಲ್ಲವಿ ಮಾತನಾಡಿದ್ದಾರೆ.

RELATED ARTICLES

Related Articles

TRENDING ARTICLES