Saturday, May 18, 2024

ದಶಪಥ ಹೆದ್ದಾರಿ ಶ್ರೇಯಸ್ಸು ‘ಸಿಂಹ’ಕ್ಕೆ ಸಲ್ಲಬೇಕು ‘ನರಿ’ಗಳಿಗಲ್ಲ : ಪ್ರತಾಪ್ ಸಿಂಹ

ಬೆಂಗಳೂರು : ಬೆಂಗಳೂರು- ಮೈಸೂರು ದಶಪಥ ಹೆದ್ದಾರಿಯ ಕ್ರೆಡಿಟ್ ಯಾರಿಗೆ ಸಲ್ಲಬೇಕು? ಕಾಂಗ್ರೆಸ್, ಬಿಜೆಪಿ ಮಧ್ಯೆ ಈ ಬಗ್ಗೆ ಕ್ರೆಡಿಟ್ ವಾರ ಶುರುವಾಗಿದೆ. ಈ ಸಂಬಂಧ ಸಂಸದ ಪ್ರತಾಪ್ ಸಿಂಹ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುವ ಮೂಲಕ ಕಿಚ್ಚು ಹಚ್ಚಿದ್ದಾರೆ.

ಈ ಸಂಬಂಧ ಟ್ವೀಟ್ ಮಾಡಿರುವ ಅವರು, ಮೈಸೂರು- ಬೆಂಗಳೂರು ದಶಪಥ ಹೆದ್ದಾರಿಯನ್ನು ಯಾರು ಮಾಡಿದ್ದು? ಅದರ ಕ್ರೆಡಿಟ್ ಯಾರಿಗೆ ಸಲ್ಲಬೇಕು? ಎಂಬ ಪ್ರಶ್ನೆಗೆ ಉತ್ತರ ಕೊಟ್ಟಿದ್ದಾರೆ.

ಬೆಂಗಳೂರು- ಮೈಸೂರು ದಶಪಥದ ಹೆದ್ದಾರಿಯ ಶ್ರೇಯಸ್ಸು ಒಬ್ಬರಿಗೇ ಸಲ್ಲಬೇಕು. ಅದು ಪ್ರಧಾನಿನ ರೇಂದ್ರ ಮೋದಿಯವರಿಗೇ ಸಲ್ಲಬೇಕು. ಅವರಿಲ್ಲದಿದ್ದರೆ ನಾನು ಸಂಸದನೂ ಆಗುತ್ತಿರಲಿಲ್ಲ. ಗಡ್ಕರಿಯವರು ಹೆದ್ದಾರಿ ಸಚಿವರೂ ಆಗುತ್ತಿರಲಿಲ್ಲ ಎಂದು ಸಂಸದ ಪ್ರತಾಪ್ ಸಿಂಹ ಟ್ವೀಟ್ ನಲ್ಲಿ ಉಲ್ಲೇಖ ಮಾಡಿದ್ದಾರೆ.

ಸಿದ್ದು-ಸಿಂಹ ಫೋಟೋ

ತನ್ನ ಹಾಗೂ ವಿರೋಧ ಪಕ್ಷದ ನಾಯಕ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ಇರುವ ಫೋಟೋ ಇರುವ ಗ್ರಾಫಿಕ್ಸ್ ಕಾರ್ಡ್ ಹಾಕಿದ್ದಾರೆ. ಅದರಲ್ಲಿ, ಬೆಂಗಳೂರು- ಮೈಸೂರು ಎಕ್ಸ್ ಪ್ರೆಸ್ ಹೈವೇ ಕ್ರೆಡಿಟ್ ಯಾರಿಗೆ ಸಲ್ಲಬೇಕು ಎಂಬ ಪ್ರಶ್ನೆಗೆ ಜನರು ಕೊಟ್ಟ ಉತ್ತರ ಶೀರ್ಷಿಕೆಯನ್ನು ಹಾಕಲಾಗಿದೆ.

ಆಸ್ಕರ್ ಫರ್ನಾಂಡಿಸ್ ಕನಸಿನ ಕೂಸು

ಕರ್ನಾಟಕ ಕಾಂಗ್ರೆಸ್, ಇತ್ತೀಚೆಗೆ ಬೆಂಗಳೂರು – ಮೈಸೂರು ದಶಪಥ ನಿರ್ಮಿಸಿದ ಶ್ರೇಯಸ್ಸು ನಮಗೆ ಸಲ್ಲಬೇಕು. ನಾವೇ ಮೊದಲು ಅದನ್ನು ಶುರು ಮಾಡಿದ್ದು ಎಂದು ಹೇಳಿತ್ತು. ಈ ಸಂಬಂಧ ಪ್ರತಿಕ್ರಿಯಿಸಿದ್ದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಬೆಂಗಳೂರು – ಮೈಸೂರು ದಶಪಥ ಹೆದ್ದಾರಿಯನ್ನು ನಿರ್ಮಿಸಲು ಕಾಂಗ್ರೆಸ್ ಪಕ್ಷವೇ ಕಾರಣ. ಇದು ಕಾಂಗ್ರೆಸ್ ನಾಯಕರಾದ ದಿ.ಆಸ್ಕರ್ ಫರ್ನಾಂಡಿಸ್ ಅವರ ಕನಸಿನ ಕೂಸು ಎಂದು ಹೇಳಿದ್ದರು.

ಜೆಡಿಎಸ್ ಶಾಸಕ ಪುಟ್ಟಸ್ವಾಮಿ, ಈ ಹೆದ್ದಾರಿಯ ಶ್ರೇಯಸ್ಸು ಜೆಡಿಎಸ್ ಗೂ ಸಲ್ಲಬೇಕು. ಏಕೆಂದರೆ, ಎಚ್.ಡಿ ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾಗಿದ್ದಾಗ ಈ ಯೋಜನೆಯ ಪ್ರಸ್ತಾವನೆಗೆ ಅನುಮೋದನೆ ನೀಡಿ, ಕೇಂದ್ರ ಸರ್ಕಾರದ ಒಪ್ಪಿಗೆಗಾಗಿ ಕಳುಹಿಸಲಾಗಿತ್ತು. ಅವರು ಒಪ್ಪದೇ ಇದ್ದಿದ್ದರೆ ಈ ಯೋಜನೆ ಹೇಗೆ ಜಾರಿಯಾಗುತ್ತಿತ್ತು? ಹಾಗಾಗಿ, ಈ ಯೋಜನೆಯ ಶ್ರೇಯಸ್ಸು ಜೆಡಿಎಸ್ ಗೂ ಸಲ್ಲಬೇಕು ಎಂದು ಹೇಳಿದ್ದರು.

RELATED ARTICLES

Related Articles

TRENDING ARTICLES