Monday, December 23, 2024

ಜನರು ಧಾರಾವಾಹಿ ಬಿಟ್ಟು ಸದನದ ಕಲಾಪ ನೋಡಿದ್ದಾರೆ : ವಿಶ್ವೇಶ್ವರ ಹೆಗಡೆ ಕಾಗೇರಿ

ಬೆಂಗಳೂರು : ಜನ ಸಾಮಾನ್ಯರು ಧಾರಾವಾಹಿಗಳನ್ನು ಬಿಟ್ಟು ಮಾಧ್ಯಮಗಳಲ್ಲಿ ನೇರ ಪ್ರಸಾರದಲ್ಲಿ ಬಿತ್ತರವಾಗುತ್ತಿದ್ದ ಸದನದ ಕಲಾಪಗಳನ್ನು ನೋಡಿದ್ದಾರೆ ಎಂಬುದು ಹೆಮ್ಮೆತರುವಂತಹುದಾಗಿದೆ ಎಂದು ವಿಧಾನ ಸಭೆಯ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊರೋನಾ ಸಂದರ್ಭದಲ್ಲಿ ಅಧಿವೇಶನದ ವೀಕ್ಷಣೆಗೆ ಸಾರ್ವಜನಿಕರಿಗೆ ಅವಕಾಶ ಕಲ್ಪಿಸಿರಲಿಲ್ಲ. ಆದರೂ, ಅಧಿವೇಶನ ಅವಧಿಯಲ್ಲಿ ಈವರೆಗೆ ಒಂದು ಲಕ್ಷದ ಎಂಟು ಸಾವಿರ ಮಂದಿ, ವಿಶೇಷವಾಗಿ ಯುವ ಜನತೆ ಮತ್ತು ವಿದ್ಯಾರ್ಥಿಗಳು, ಸದನ ಕಲಾಪವನ್ನು ವೀಕ್ಷಿಸಿದ್ದಾರೆ ಎಂದು ತಿಳಿಸಿದ್ದಾರೆ.

ಹದಿನೈದನೇ ವಿಧಾನಸಭೆಯ ಅವಧಿಯಲ್ಲಿ 15 ಉಪವೇಶನಗಳಲ್ಲಿ 167 ದಿನಗಳ ಕಾಲ ಸದನ ಕಲಾಪಗಳು ಅತ್ಯಂತ ಯಶಸ್ವಿಯಾಗಿ ನಡೆದಿವೆ. ಈ ಉಪವೇಶಗಳ ಸಂದರ್ಭದಲ್ಲಿ  ಸದನ ಕಾರ್ಯಕಲಾಪಗಳು ಸುಗಮವಾಗಿ ನಡೆಸಲು ಮುಕ್ತ ಮನಸ್ಸಿನಿಂದ ಸಹಕರಿಸಿ ಸದನದ ಕಾರ್ಯ ಕಲಾಪಗಳ ಯಶಸ್ಸಿಗೆ ಕಾರಣಕರ್ತರಾದ ಆಡಳಿತ ಪಕ್ಷ ಹಾಗೂ ಪ್ರತಿಪಕ್ಷದ ಎಲ್ಲಾ ಸದಸ್ಯರಿಗೂ ಹೃದಯಪೂರ್ವಕವಾಗಿ ಅಭಿನಂದನೆ ಸಲ್ಲಿಸುವುದಾಗಿ ಹೇಳಿದ್ದಾರೆ.

ಇದನ್ನೂ ಓದಿ : ಗಂಡನಿಗೆ ಹಾಲಿನಲ್ಲಿ ಜಾಪಾಳ ಮಾತ್ರೆ ಹಾಕಿ ಕೊಡಿ ಎಂದ ರೇವಣ್ಣ

ಶಾಸಕರಲ್ಲಿ ಸ್ವಯಂ ಶಿಸ್ತು ಹೆಚ್ಚಾಗಲಿ

ಶಾಸಕರಲ್ಲಿ ಸ್ವಯಂ ಶಿಸ್ತು ಮತ್ತಷ್ಟು ಹೆಚ್ಚಾಗಬೇಕು. ಕೋರಂ ಹೆಚ್ಚು ಹೊತ್ತು ಸದ್ದು ಮಾಡುವ ಮುನ್ನವೇ ಸದನ ಕಲಾಪದಲ್ಲಿ ಪಾಲ್ಗೊಳ್ಳುವ ಉತ್ಸುಕತೆ ಮತ್ತು ಜವಾಬ್ದಾರಿಯನ್ನು ತೋರಬೇಕು. ಇದರಲ್ಲಿ ರಾಜಕೀಯ ಪಕ್ಷಗಳ‌ ಪಾತ್ರವೂ ದೊಡ್ಡದು ಎಂದು ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದ್ದಾರೆ.

ರಾಜ್ಯ ವಿಧಾನ ಸಭೆಯ ಕಾರ್ಯದರ್ಶಿ ಎಂ ಕೆ ವಿಶಾಲಾಕ್ಷಿ ಅವರೂ ಸೇರಿದಂತೆ ವಿಧಾನಸಭಾ ಸಚಿವಾಲಯದ ಹಲವು ಅಧಿಕಾರಿಗಳು ಈ ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.

RELATED ARTICLES

Related Articles

TRENDING ARTICLES