Sunday, December 22, 2024

‘ಸಿಂಗ್’ ಪ್ರಧಾನಿ ಆಗಿದ್ದಿದ್ರೆ ‘ಸೋನಿಯಾ’ಗೆ ಮೊದಲ ಲಸಿಕೆ : ಕಟೀಲ್ ಲೇವಡಿ

ಬೆಂಗಳೂರು : ಇತ್ತೀಚೆಗೆ ಸಮಾರಂಭವೊಂದರಲ್ಲಿ ‘ರಾತ್ರಿ ಕದ್ದು ಕೊರೊನಾ ಲಸಿಕೆ ಪಡೆದಿರುವ ರಾಹುಲ್ ಗಾಂಧಿಗೆ ಮಕ್ಕಳಾಗಲ್ಲ. ಹೀಗಾಗಿ, ಅವರು ಮದುವೆ ಆಗುವುದಿಲ್ಲ’ ಎಂದು ಲೇವಡಿ ಮಾಡಿದ್ದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮತ್ತೆ ಗಾಂಧಿ ಕುಟುಂಬವನ್ನು ಕೆಣಕಿದ್ದಾರೆ.

ಹೌದು, ಕೊರೊನಾ ಸಂದರ್ಭದಲ್ಲಿ ಮನಮೋಹನ್ ಸಿಂಗ್ ಪ್ರಧಾನಿ ಆಗಿದ್ದರೆ, ಮೊದಲ ಲಸಿಕೆ ಸೋನಿಯಾ ಗಾಂಧಿಗೆ ನೀಡುತ್ತಿದ್ದರು ಎಂದು ನಳಿನ್ ಕುಮಾರ್ ಕಟೀಲ್ ವ್ಯಂಗ್ಯವಾಡಿದ್ದಾರೆ. ಇದು ಕಾಂಗ್ರೆಸ್ ನಾಯಕರನ್ನು ಕೆರಳುವಂತೆ ಮಾಡಿದೆ.

ಇದನ್ನೂ ಓದಿ : ನಾಳೆ ‘ಸ್ವಾಭಿಮಾನಿ’ ಸುಮಲತಾ ಮಹತ್ವದ ಸುದ್ದಿಗೋಷ್ಠಿ

ಎರಡನೇ ಲಸಿಕೆ ರಾಹುಲ್ ಗಾಂಧಿಗೆ

ಸಿಂಗ್ ಮೊದಲ ಲಸಿಕೆಯನ್ನು ಸೋನಿಯಾ ಗಾಂಧಿಗೆ, ಎರಡನೇ ಲಸಿಕೆ ರಾಹುಲ್ ಗಾಂಧಿಗೆ, ಮೂರನೇ ಲಸಿಕೆ ಪ್ರಿಯಾಂಕಾ ಗಾಂಧಿಗೆ ಹಾಗೂ ನಾಲ್ಕನೇ ಲಸಿಕೆಯನ್ನು ರಾಬರ್ಟ್ ವಾದ್ರಾಗೆ ಕೊಡುತ್ತಿದ್ದರು ಎಂದು ಕಟೀಲ್ ಲೇವಡಿ ಮಾಡಿದ್ದಾರೆ.

ಕಾಂಗ್ರೆಸ್ ಅಧಿಕಾರದಲ್ಲಿದ್ದರೆ ಕುಟುಂಬ ಮೊದಲ ಪ್ರಾಶಸ್ತ್ಯ ನೀಡುತ್ತಿತ್ತು. ಆದರೆ, ಪ್ರಧಾನಿ ನರೇಂದ್ರ ಮೋದಿಯವರು ಪ್ರತಿಯೊಬ್ಬರಿಗೂ ಲಸಿಕೆ ನೀಡಿದ್ದಾರೆ ಎಂದು ಹೇಳುವ ಮೂಲಕ ರಾಹುಲ್ ಗಾಂಧಿಗೆ ಟಾಂಗ್ ಕೊಟ್ಟಿದ್ದಾರೆ.

ಇದನ್ನೂ ಓದಿ : ಗಂಡನಿಗೆ ಹಾಲಿನಲ್ಲಿ ಜಾಪಾಳ ಮಾತ್ರೆ ಹಾಕಿ ಕೊಡಿ ಎಂದ ರೇವಣ್ಣ

ಇದಕ್ಕೆ.. ರಾಹುಲ್ ಮದುವೆಯಾಗಿಲ್ಲ

‘ಕೋವಿಡ್ ಲಸಿಕೆ ತೆಗೆದುಕೊಳ್ಳಬೇಡಿ ಮಕ್ಕಳಾಗಲ್ಲ ಎಂದು ರಾಹುಲ್ ಗಾಂಧಿ, ಸಿದ್ರಾಮಣ್ಣ ಹೇಳ್ತಾ ಇದ್ರು. ಆದರೆ, ಅವರಿಬ್ಬರೂ ರಾತ್ರಿ ಕದ್ದು ಕೊರೊನಾ ಲಸಿಕೆ ಹಾಕಿಸಿಕೊಂಡ್ರು. ಒಬ್ಬ ಎಂಎಲ್ ಸಿ ಇದನ್ನೇ ಹೇಳ್ತಾ ಇದ್ರು, ಅದಕ್ಕೆ ರಾಹುಲ್ ಗಾಂಧಿ ಮದುವೆಯಾಗಿಲ್ಲ. ಹೇಗೋ ಮಕ್ಕಳಾಗಲ್ಲ ಅಲ್ವಾ?’ ಎಂದು ಈ ಹಿಂದೆ ನಳಿನ್ ಕುಮಾರ್ ವಿವಾದಾತ್ಮಕ ಹೇಳಿಕೆ ಹರಿಬಿಟ್ಟಿದ್ದರು.

RELATED ARTICLES

Related Articles

TRENDING ARTICLES