Saturday, May 18, 2024

ಬಂಧನ ಭೀತಿ! : ‘ಜೈಲು ಹಕ್ಕಿ’ಯಾಗ್ತಾರಾ ಶಾಸಕ ಜಮೀರ್?

ಬೆಂಗಳೂರು : ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ಸಮೀಪಿಸಿರುವಂತೆಯೇ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮಾಜಿ ಸಚಿವ ಅವರ ಆಪ್ತ ಬಣದ ನಾಯಕ ಹಾಗೂ ಶಾಸಕ ಬಿ.ಝಡ್ ಜಮೀರ್ ಅಹಮ್ಮದ್ ಖಾನ್ ಸಂಕಷ್ಟ ಎದುರಾಗಿದೆ.

ಹೌದು, ದೆಹಲಿಯಲ್ಲಿರುವ ಜಾರಿ ನಿರ್ದೇಶನಾಲಯ(ED)ದ ಕಚೇರಿಗೆ ಇಂದು ಮಾಜಿ ಸಚಿವ ಜಮೀರ್ ಅಹಮ್ಮದ್ ಖಾನ್ ವಿಚಾರಣೆಗೆ ಹಾಜರಾಗಿದ್ದಾರೆ. ಜಮೀರ್ ಅಹಮ್ಮದ್ ಆಪ್ತ ವಲಯದಲ್ಲಿರುವವರಿಗೆ ನಡುಕ ಉಂಟಾಗಿದೆ.

ಇ.ಡಿ (ಜಾರಿ ನಿರ್ದೇಶನಾಲಯ) ಅಧಿಕಾರಿಗಳು ಇತ್ತೀಚೆಗೆ ಶಾಸಕ ಜಮೀರ್ ಅಹಮ್ಮದ್ ಮನೆಗಳ ಮೇಲೆ ದಾಳಿ ಮಾಡಿ ದಾಖಲೆಗಳನ್ನು ವಶಪಡಿಸಿಕೊಂಡಿದ್ದರು. ಈ ಹಿಂದೆ ಕೆಜಿಎಫ್ ಬಾಬು ಅವರಿಂದ ಜಮೀರ್ ಅಹಮ್ಮದ್ ಸಾಲ ಪಡೆದಿದ್ದರು ಎನ್ನುವ ಆರೋಪವೂ ಇದೆ. ಹೀಗಾಗಿ, ಇ.ಡಿ (ಜಾರಿ ನಿರ್ದೇಶನಾಲಯ) ಕಚೇರಿಗೆ ಶಾಸಕ ಜಮೀರ್ ಅಹಮ್ಮದ್ ವಿಚಾರಣೆಗೆ ಖುದ್ದು ಹಾಜರಾಗಿದ್ದಾರೆ. ಈ ನಡುವೆ ಅವರಿಗೆ ಬಂಧನದ ಭೀತಿಯೂ ಎದುರಾಗಿದೆ ಎಂದು ವರದಿಯಾಗಿದೆ.

ಜಮೀರ್​​ ಮನೆ ಮೇಲೆ ಎಸಿಬಿ ದಾಳಿ

ಕಳೆದ 2022ರಲ್ಲಿ ಭ್ರಷ್ಟಾಚಾರ ನಿಗ್ರಹ ದಳ ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಯ ಒಟ್ಟು 85 ಅಧಿಕಾರಿ ಮತ್ತು ಸಿಬ್ಬಂದಿಗಳನ್ನೊಳಗೊಂಡ 5 ವಿವಿಧ ತಂಡ ಜಮೀರ್ ಅಹಮ್ಮದ್ ಮನೆ ಹಾಗೂ ಕಚೇರಿಗಳ ಮೇಲೆ ದಾಳಿ ನಡೆಸಿ ತಲಾಶ್ ನಡೆಸಿತ್ತು.

ಜಮೀರ್ ಅಹಮ್ಮದ್ ಅವರ ತಮ್ಮ ಬಲ್ಲ ಮೂಲಗಳಿಗಿಂತ ಅಕ್ರಮ ಆಸ್ತಿ-ಪಾಸ್ತಿಗಳನ್ನು ಹೊಂದಿರುವ ಬಗ್ಗೆ ಜಾರಿ ನಿರ್ದೇಶನಾಲಯ ಹಾಗೂ ದಾಖಲಾತಿಗಳನ್ನು ಆಧರಿಸಿ ಅಕ್ರಮ ಆಸ್ತಿ ಗಳಿಕೆ ಪ್ರಕರಣಗಳನ್ನು ದಾಖಲಿಸಿ ಅವರಿಗೆ ಸಂಬಂಧಿಸಿದ 4 ಸ್ಥಳಗಳ ಮೇಲೆ ಏಕ ಕಾಲಕ್ಕೆ ದಾಳಿ ನಡೆಸಲಾಗಿತ್ತು.

RELATED ARTICLES

Related Articles

TRENDING ARTICLES