Wednesday, January 22, 2025

Gangleader Re Release : ಮತ್ತೆ ಥಿಯೇಟರ್ ಅಂಗಳಕ್ಕೆ ಮೆಗಾಸ್ಟಾರ್ ‘ಗ್ಯಾಂಗ್ ಲೀಡರ್’

ಬೆಂಗಳೂರು : ಗ್ಯಾಂಗ್​ಲೀಡರ್.. ಇದು 90ರ ದಶಕದಲ್ಲಿ ಟಾಲಿವುಡ್ ನಲ್ಲಿ ಕಮಾಲ್ ಮಾಡಿದ ಸಿನಿಮಾ. ಈ ಗ್ಯಾಂಗ್​ಲೀಡರ್ ಮತ್ತೆ ಥಿಯೇಟರ್ ಅಂಗಳಕ್ಕೆ ಕಾಲಿಟ್ಟಿದೆ.

ಹೌದು, ಟಾಲಿವುಡ್ ಮೆಗಾಸ್ಟಾರ್ ಮೈಂಡ್ ಬ್ಲೋಯಿಂಗ್ ಡ್ಯಾನ್ಸ್, ವಿಜಯಶಾಂತಿ ಗ್ಲಾಮರ್ ಜೊತೆ ಹೈ ವೋಲ್ಟೇಜ್ ಌಕ್ಷನ್ ಸಿನಿಮಾ. ಗ್ಯಾಂಗ್​ಲೀಡರ್ ಇಂದಿಗೂ ಫ್ರೆಶ್ ಫೀಲ್ ಕೊಡುತ್ತಿದೆ. 50ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ 100 ದಿನ ಕಂಡ ಚಿರು ಬಿಗ್ಗೆಸ್ಟ್ ಹಿಟ್ ಮೂವಿ ಕಹಾನಿ ಇಲ್ಲಿದೆ ನೋಡಿ.

ಗ್ಯಾಂಗ್​ಲೀಡರ್ ಅಂದಾಕ್ಷಣ ಮೆಗಾಸ್ಟಾರ್ ಚಿರಂಜೀವಿ ಕಣ್ಮುಂದೆ ಬರ್ತಾರೆ. ಕಾರಣ ಇದು ಮೆಗಾಸ್ಟಾರ್ ಕರಿಯರ್​​ನಲ್ಲೇ ಒನ್ ಆಫ್ ದಿ ಬಿಗ್ಗೆಸ್ಟ್ ಹಿಟ್ ಮೂವಿ. 1991ರ ಮೇ 9ರಂದು ತೆರೆಕಂಡ ಈ ಸಿನಿಮಾ ಌಕ್ಷನ್ ಕ್ರೈಂ ಜಾನರ್​ನಿಂದ ಕೂಡಿತ್ತು. ಇದೊಂದು ಮಾಸ್ ಸಿನಿಮಾ ಆದರೂ, ಮ್ಯುಸಿಕ್​​ನಿಂದ ಇನ್ನಿಲ್ಲದೆ ಎಲ್ಲರನ್ನ ಕಾಡಿತ್ತು.

ಡ್ಯಾನ್ಸ್ ಮೂಲಕ ಧೂಳೆಬ್ಬಿಸಿದ ಚಿರು

ಗ್ಯಾಂಗ್​ಲೀಡರ್ ಸಿನಿಮಾಗೆ ಬಪ್ಪಿ ಲಹರಿ ಸಂಗೀತ ಸಂಯೋಜನೆ ಮಾಡಿದ್ದರು. ಚಿತ್ರದ ಹಾಡುಗಳು ಎಲ್ಲರೂ ಗುನುಗುವಂತಾಗಿತ್ತು. ಚಿತ್ರಾ ಹಾಗೂ ಎಸ್​.ಪಿ. ಬಾಲಸುಬ್ರಮಣ್ಯಂ ಗಾಯನದಲ್ಲಿ ಎಲ್ಲಾ ಹಾಡುಗಳು ಮೂಡಿಬಂದಿದ್ದು, ಇಂದಿಗೂ ಎವರ್​ಗ್ರೀನ್ ಸಾಂಗ್ಸ್ ಆಗಿ ಉಳಿದುಕೊಂಡಿವೆ. ಅದರಲ್ಲೂ ಆ ಮ್ಯೂಸಿಕ್​ಗೆ ತಕ್ಕನಾಗಿ ಚಿರು ಅದ್ಭುತ ಡ್ಯಾನ್ಸ್ ಮಾಡಿ, ಧೂಳೆಬ್ಬಿಸಿದ್ದರು.

50ಕ್ಕೂ ಹೆಚ್ಚು ಸೆಂಟರ್​ಗಳಲ್ಲಿ ಶತದಿನೋತ್ಸವ

ನಟ ಪ್ರಭುದೇವ ಕೊರಿಯೋಗ್ರಫಿಯಲ್ಲಿ ಚಿರು ಡ್ಯಾನ್ಸ್​ಗೆ ಪ್ರೇಕ್ಷಕರು ಹುಚ್ಚೆದ್ದು ಕುಣಿದಿದ್ದರು. ಈ ಸಿನಿಮಾ 50ಕ್ಕೂ ಅಧಿಕ ಸೆಂಟರ್​ಗಳಲ್ಲಿ 100 ದಿನದ ಸೆಲೆಬ್ರೇಟ್ ಮಾಡಿತ್ತು. ಬಾಕ್ಸ್ ಆಫೀಸ್ ಬ್ಯಾಂಗ್ ಮಾಡಿದ್ದ ಈ ಸಿನಿಮಾ ಇಂಟರ್​ನ್ಯಾಷನಲ್ ಫಿಲ್ಮ್ ಫೆಸ್ಟಿವಲ್​​ನಲ್ಲಿ ಪ್ರದರ್ಶನ ಕಂಡಿತ್ತು. ತಮಿಳಿಗೆ ಡಬ್ ಆಗಿ, ಹಿಂದಿಗೆ ರಿಮೇಕ್ ಮಾಡಲಾಯ್ತು. ಅಷ್ಟೇ ಅಲ್ಲದೆ ಸ್ಯಾಂಡಲ್ ವುಡ್ ರಿಯಲ್ ಸ್ಟಾರ್ ಉಪೇಂದ್ರ, ಈ ಕಥೆಗೆ ಫಿದಾ ಆಗಿ ‘ಕುಟುಂಬ’ ಟೈಟಲ್​​ನಲ್ಲಿ ಕನ್ನಡ ಸಿನಿಪ್ರೇಕ್ಷಕರಿಗೆ ಕಿಕ್ ಕೊಟ್ಟಿದ್ದರು.

ಇದನ್ನೂ ಓದಿ : RRR ರೀ-ರಿಲೀಸ್ : ಮಾರ್ಚ್ 10ರಿಂದ ಮತ್ತೆ ಬೆಳ್ಳಿತೆರೆ ಮೇಲೆ ಕಮಾಲ್

ಫ್ಯಾಮಿಲಿ-ಎಮೋಷನ್ಸ್ ಬ್ಲೆಂಡ್

ಗ್ಯಾಂಗ್​ಲೀಡರ್ 90ರ ದಶಕದಲ್ಲೇ 70 ಮಿಲಿಯನ್ ಡಿಸ್ಟ್ರಿಬ್ಯೂಷನ್ ಶೇರ್ ಪಡೆದಿತ್ತು. ಈ ಗ್ಯಾಂಗ್​​​ನಲ್ಲಿ ಚಿರು ಜೊತೆ ಲೇಡಿ ಬಾಂಡ್ ವಿಜಯಶಾಂತಿ ಬಣ್ಣ ಹಚ್ಚಿದ್ದರು. ಇಬ್ಬರ ಕೆಮಿಸ್ಟ್ರಿಗೆ ಸಿನಿ ಪ್ರೇಕ್ಷಕರು ದಂಗಾಗಿದ್ದರು.

ಗ್ಯಾಂಗ್​ಲೀಡರ್ ಸಿನಿಮಾದಲ್ಲಿ ಕ್ರೈಂ ಥ್ರಿಲ್ಲರ್​​ನಲ್ಲಿ ಫ್ಯಾಮಿಲಿ ವ್ಯಾಲ್ಯೂಸ್ ಹಾಗೂ ಎಮೋಷನ್ಸ್​ನ ಅದ್ಭುತವಾಗಿ ಬ್ಲೆಂಡ್ ಮಾಡಲಾಗಿತ್ತು. ಸಿಟ್ರೋಯೆನ್ CX ಪಲ್ಲಾಸ್ ಅನ್ನೋ ಕ್ಲಾಸಿಕ್ ಕಾರ್​​ನ ಈ ಚಿತ್ರದಲ್ಲಿ ಬಳಸಲಾಗಿತ್ತು. ಈ ಕಾರ್ ಸೌತ್ ಇಂಡಿಯಾದಲ್ಲಿ ಒಬ್ಬರ ಬಳಿ ಮಾತ್ರ ಇತ್ತು ಎನ್ನುವುದು ಇತಿಹಾಸವೇ ಸರಿ.

ಒಟ್ನಲ್ಲಿ, ಚಿರಂಜೀವಿ ಕರಿಯರ್​​ನಲ್ಲೇ ಒನ್ ಆಫ್ ದಿ ಬೆಸ್ಟ್ ಮೂವಿ ಎನಿಸಿಕೊಂಡ ಗ್ಯಾಂಗ್​ಲೀಡರ್ ಇದೀಗ ರೀ ರಿಲೀಸ್ ಆಗಿದೆ. ಬದಲಾದ ತಂತ್ರಜ್ಞಾನದಲ್ಲಿ ಮತ್ತೆ ಬೆಳ್ಳಿಪರದೆ ಬೆಳಗುತ್ತಿದೆ. ಇಂದಿಗೂ ಪ್ರೇಕ್ಷಕರು ಮುಗಿಬಿದ್ದು ಈ ಸಿನಿಮಾನ ಫ್ಯಾಮಿಲಿ ಸಮೇತ ನೋಡ್ತಿದ್ದಾರೆ. ಇದು ಚಿರಂಜೀವಿಗಿರೋ ಗತ್ತು, ಗ್ಯಾಂಗ್​ಲೀಡರ್ ಸಿನಿಮಾದ ಗಮ್ಮತ್ತು ಎನ್ನುವುದು ಟಾಲಿವುಡ್ ಮಂದಿಯ ಮಾತಾಗಿದೆ.

  • ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ

RELATED ARTICLES

Related Articles

TRENDING ARTICLES