Monday, December 23, 2024

ಕಿಕ್ಕೇರಿಸ್ತಿದೆ ಮಾಸ್ ಮಹಾರಾಜ ರವಿತೇಜಾ ‘ರಾವಣಾಸುರ’ ಲುಕ್

ಬೆಂಗಳೂರು : ಮಾಸ್ ಮಹಾರಾಜ ಈಸ್ ಆನ್ ಫೈಯರ್. ಹೌದು, ವರ್ಷಕ್ಕೆ ಕನಿಷ್ಟ ಮೂರ್ನಾಲ್ಕು ಸಿನಿಮಾಗಳಲ್ಲಿ ಬ್ಯುಸಿ ಇರೋ ರವಿತೇಜಾ, ಅದ್ಯಾವಾಗ ಸಿನಿಮಾನ ಶುರು ಮಾಡ್ತಾರೆ? ಯಾವಾಗ ಮುಗಿಸ್ತಾರೆ ಅನ್ನೋದೇ ಗೊತ್ತಾಗಲ್ಲ. ಸದ್ಯ ರಾವಣಾಸುರನ ಅವತಾರ ತಾಳಿರೋ ಅವರು, ಭಯಂಕರ ಟ್ರೈಲರ್​ನಿಂದ ಕಿಕ್ಕೇರಿಸಿದ್ದಾರೆ.

2021ರ ಮೊದಲ ತೆಲುಗು ಸಿನಿಮಾ ಆಗಿ ಕ್ರ್ಯಾಕ್ ಬಿಗ್ಗೆಸ್ಟ್ ಓಪನಿಂಗ್ ನೀಡಿತು. ಅಲ್ಲಿಂದ ಶುರುವಾದ ಮಾಸ್ ಮಹಾರಾಜ ಸಕ್ಸಸ್ ಪರ್ವ ಇನ್ನೂ ನಿಂತಿಲ್ಲ. ಖಿಲಾಡಿ, ರಾಮಾರಾವ್ ಆನ್ ಡ್ಯೂಟಿ ತಕ್ಕ ಮಟ್ಟಿಗೆ ಸೌಂಡ್ ಮಾಡಿದವಾದ್ರೂ, ಧಮಾಕ ನಿಜಕ್ಕೂ ಬಾಕ್ಸ್ ಆಫೀಸ್​​ನಲ್ಲಿ ದೊಡ್ಡ ಧಮಾಕಾನೇ ಮಾಡಿತು.

ಇದನ್ನೂ ಓದಿ : RRR ರೀ-ರಿಲೀಸ್ : ಮಾರ್ಚ್ 10ರಿಂದ ಮತ್ತೆ ಬೆಳ್ಳಿತೆರೆ ಮೇಲೆ ಕಮಾಲ್

ವೀರಯ್ಯ ಬ್ಲಾಕ್ ಬಸ್ಟರ್

ಮೆಗಾಸ್ಟಾರ್ ಚಿರಂಜೀವಿ ಜೊತೆಗಿನ ವಾಲ್ಟೈರ್ ವೀರಯ್ಯ ಬ್ಲಾಕ್ ಬಸ್ಟರ್ ಹಿಟ್ ಆಯ್ತು. ಹೀಗೆ ಸಾಲು ಸಾಲು ಸಿನಿಮಾಗಳ ಹಿಟ್ಸ್​ನಿಂದ ಅವರು ಯಾವಾಗ ಹೊಸ ಸಿನಿಮಾ ಶುರು ಮಾಡ್ತಾರೆ? ಅದ್ಯಾವಾಗ ಮುಗಿಸ್ತಾರೆ ಅನ್ನೋದೇ ಗೊತ್ತಾಗ್ತಿಲ್ಲ.

ಸದ್ಯ ರಾವಣಾಸುರ ಎಂಬ ಸಿನಿಮಾದ ಮಾಸ್ ಟ್ರೈಲರ್ ಲಾಂಚ್ ಆಗಿದ್ದು, ಇದೇ ಏಪ್ರಿಲ್ 7ಕ್ಕೆ ಥಿಯೇಟರ್​ಗೆ ಬರ್ತಿದೆ. ಸುಧೀರ್ ವರ್ಮಾ ನಿರ್ದೇಶನದ ಈ ಚಿತ್ರದಲ್ಲಿ ಸುಶಾಂತ್, ಅನು ಇಮ್ಯಾನುಯಲ್, ಮೇಘ ಆಕಾಶ್ ಹೀಗೆ ದೊಡ್ಡ ತಾರಾಗಣವಿದೆ.

RELATED ARTICLES

Related Articles

TRENDING ARTICLES