Monday, December 23, 2024

ಕಿಂಗ್ ಖಾನ್ ‘ಜವಾನ್’ನಲ್ಲಿ ರಾಮ್ ಚರಣ್

ಬೆಂಗಳೂರು : ಪಠಾಣ್ ಸಕ್ಸಸ್ ಗುಂಗಲ್ಲಿರೋ ಕಿಂಗ್ ಖಾನ್ ಶಾರೂಖ್, ತನ್ನ ಫ್ಯಾನ್ಸ್​ಗೆ ಜವಾನ್ ಚಿತ್ರದ ಮೂಲಕ ಬಿಗ್ ನ್ಯೂಸ್ ಕೊಟ್ಟಿದ್ದಾರೆ. ಪಂಚಭಾಷೆಯಲ್ಲಿ ತಯಾರಾಗ್ತಿರೋ ಪ್ಯಾನ್ ಇಂಡಿಯಾ ಮೂವಿಗೆ ವರ್ಲ್ಡ್​ ಸೆನ್ಸೇಷನ್ ರಾಮ್ ಚರಣ್ ತೇಜಾ ಎಂಟ್ರಿ ಕೊಡಲಿದ್ದಾರಂತೆ.

ಹೌದು, ಶಾರೂಖ್- ನಯನತಾರಾ ಜೋಡಿ ಜೊತೆ ಬಿಗ್ ಸ್ಟಾರ್ ಗಳು ಮೋಡಿ ಮಾಡಲಿದ್ದಾರೆ. ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಹಾಗೂ ಹ್ಯಾಟ್ರಿಕ್ ಹೀರೋ ಶಿವಣ್ಣ ಒಲ್ಲೆ ಎಂದಿದ್ದಕ್ಕೆ ಆ ಚಾನ್ಸ್ ಇದೀಗ ರಾಮ್ ಚರಣ್ ಪಾಲಾಗಿದೆ.

ಪಠಾಣ್ ಸಿನಿಮಾ ಸಾವಿರ ಕೋಟಿ ಪೈಸಾ ವಸೂಲ್ ಮಾಡಿದ. ಶಾರೂಖ್ ಖಾನ್ ಜೊತೆ ಬಾಲಿವುಡ್ ಪ್ರತಷ್ಠೆ ಕೂಡ ಕಾಪಾಡಿದ ಪಠಾಣ್ ಇನ್ನೂ ಬಾಕ್ಸ್ ಆಫೀಸ್​​ನಲ್ಲಿ ಅಬ್ಬರಿಸುತ್ತಲೇ ಇದೆ. ಸದ್ಯದಲ್ಲೇ ಓಟಿಟಿಗೂ ಬರಲಿದ್ದು, ವಾಟ್ ನೆಕ್ಸ್ಟ್ ಶಾರೂಖ್ ಅಂದ್ರೆ ಜವಾನ್ ಹೆಸರು ಕೇಳಿಬರುತ್ತಿದೆ.

ಟೈಟಲ್ ಅನೌನ್ಸ್​ಮೆಂಟ್ ಟೀಸರ್​ನಿಂದಲೇ ನೋಡುಗರ ನಾಡಿಮಿಡಿತ ಹೆಚ್ಚಿಸಿದ್ದ ಜವಾನ್, ಇದೀಗ ಆಪರೇಷನ್​ ಕಿಕ್​ಸ್ಟಾರ್ಟ್​ ಮಾಡೋಕೆ ಸಜ್ಜಾಗಿದ್ದಾರೆ. ಅಂದಹಾಗೆ ರೆಡ್ ಚಿಲ್ಲೀಸ್ ಎಂಟರ್​ಟೈನ್ಮೆಂಟ್ ಬ್ಯಾನರ್​ನಡಿ ಶಾರೂಖ್ ಪತ್ನಿ ಗೌರಿ ಖಾನ್ ಈ ಸಿನಿಮಾನ ತಮ್ಮ ಹೋಂ ಬ್ಯಾನರ್​ನಲ್ಲಿ ನಿರ್ಮಾಣ ಮಾಡ್ತಿದ್ದು, ಮತ್ತೊಂದು ಮೆಗಾ ಪ್ಯಾನ್ ಇಂಡಿಯನ್ ಮೂವಿ ಆಗಲಿದೆ.

ತಂತ್ರಜ್ಞರ ಗ್ಯಾಂಗ್ ನಲ್ಲಿ ಸೌತ್ ಮಂದಿ

ಹೆಸರಿಗಷ್ಟೇ ಇದು ಬಾಲಿವುಡ್ ಮೂವಿ. ನಿರ್ದೇಶಕ ಹಾಗೂ ಚಿತ್ರದ ಪ್ರಮುಖ ತಾರಾಗಣದಿಂದ ಹಿಡಿದು ತಂತ್ರಜ್ಞರೆಲ್ಲಾ ಸೌತ್ ಮಂದಿಯೇ. ತಮಿಳಿನ ಖ್ಯಾತ ನಿರ್ದೇಶಕ ಅಟ್ಲಿ ಈ ಚಿತ್ರದ ಕ್ಯಾಪ್ಟನ್. ನಾಯಕಿಯಾಗಿ ನಯನತಾರಾ ಬಣ್ಣ ಹಚ್ಚಿದ್ದು, ಶಾರೂಖ್ ಜೊತೆ ಸೌತ್​ನ ಲೇಡಿ ಸೂಪರ್ ಸ್ಟಾರ್ ಕಾಂಬೋ ಹೇಗಿರಲಿದೆ ಎನ್ನುವುದು ಕ್ಯೂರಿಯಾಸಿಟಿ ಹುಟ್ಟಿಸಿದೆ.

ಕಿಂಗ್ ಖಾನ್ ಎದುರು ವಿಜಯ್ ಸೇತುಪತಿ

ಇನ್ನು ಖಡಕ್ ಖಳನಾಯಕನಾಗಿ ವಿಜಯ್ ಸೇತುಪತಿ ಬಣ್ಣ ಹಚ್ಚಿದ್ದಾರೆ. ಮೋಸ್ಟ್ ವರ್ಸಟೈಲ್ ಌಕ್ಟರ್ ವಿಜಯ್ ಸೇತುಪತಿ, ಕಿಂಗ್ ಖಾನ್ ಶಾರೂಖ್ ಎದುರು ಕಿಲ್ಲಿಂಗ್ ಪರ್ಫಾಮೆನ್ಸ್ ನೀಡಲಿದ್ದು, ಇವರಿಬ್ಬರ ಮುಖಾಮುಖಿಯ ವಿಶ್ಯುವಲ್ಸ್ ಸಖತ್ ಕಿಕ್ ಕೊಡಲಿವೆ. ಇದಲ್ಲದೆ, ಜವಾನ್ ಅಡ್ಡಾಗೆ ಮತ್ತೊಬ್ಬ ಸೂಪರ್ ಸ್ಟಾರ್ ಎಂಟ್ರಿ ಕೊಡೋದು ಪಕ್ಕಾ ಆಗಿದೆ.

ಬನ್ನಿ, ಶಿವಣ್ಣ ನೋ.. ರಾಮ್ ಇನ್..

ಮೊದಲಿಗೆ ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಹೆಸರು ಕೇಳಿಬಂದಿತ್ತು. ಡೇಟ್ಸ್ ಕ್ಲ್ಯಾಶ್​​ನಿಂದ ಅದು ನಮ್ಮ ಹ್ಯಾಟ್ರಿಕ್ ಹೀರೋ ಡಾ. ಶಿವರಾಜ್​ಕುಮಾರ್​ಗೆ ಆಫರ್ ಬಂತು. ಇವರೂ ಸಹ ಒಲ್ಲೆ ಎಂದ ಕಾರಣ, ಇದೀಗ ಅದು RRR ಸ್ಟಾರ್ ರಾಮ್ ಚರಣ್ ಪಾಲಾಗಿದೆ. ಆಸ್ಕರ್​ ನಾಮಿನೇಷನ್​ನಿಂದ ವರ್ಲ್ಡ್​ ಸೆನ್ಸೇಷನ್ ಆಗಿರೋ ರಾಮ್ ಚರಣ್, ಜವಾನ್ ಚಿತ್ರದಲ್ಲಿ ಬಾಲಿವುಡ್ ಬಾದ್​ಷಾ ಜೊತೆ ತೆರೆ ಹಂಚಿಕೊಳ್ತಾರೆ ಎಂದು ತಿಳಿದುಬಂದಿದೆ.

ಇನ್ನೂ, ದೀಪಿಕಾ ಪಡುಕೋಣೆ ಕೂಡ ಚಿತ್ರದಲ್ಲಿ ಸ್ಪೆಷಲ್ ಅಪಿಯರೆನ್ಸ್​ನಿಂದ ಬಿಗ್ ಸರ್​ಪ್ರೈಸ್ ಕೊಡಲಿದ್ದಾರೆ. ಅನಿರುದ್ದ್ ರವಿಚಂದರ್ ಸಂಗೀತ, ಜಿಕೆ ವಿಷ್ಣು ಕ್ಯಾಮೆರಾ ಹಾಗೂ ರುಬೆನ್ ಸಂಕಲನ ಚಿತ್ರಕ್ಕಿದೆ. ಜೂನ್ 2ಕ್ಕೆ ರಿಲೀಸ್ ಡೇಟ್ ಕೂಡ ಈಗಾಗ್ಲೇ ಫಿಕ್ಸ್ ಆಗಿದ್ದು, ತಮಿಳು ಹಾಗೂ ಬಾಲಿವುಡ್ ಮಂದಿಯ ಸಮಾಗಮದಿಂದ ಜವಾನ್ ಮಸ್ತ್ ಮ್ಯಾಜಿಕ್ ಮಾಡಲಿದೆ.

  • ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ

RELATED ARTICLES

Related Articles

TRENDING ARTICLES