Thursday, April 25, 2024

ರಾಹುಲ್ ಗಾಂಧಿಗೆ ಅನುರಾಗ್ ಠಾಕೂರ್ ತಿರುಗೇಟು

ಬೆಂಗಳೂರು : ಭಾರತಕ್ಕೆ ದ್ರೋಹ ಮಾಡಬೇಡಿ ಎಂಬ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿಕೆಗೆ ಕೇಂದ್ರ ಸಚಿವ ಅನುರಾಗ್ ಠಾಕೂರ್ ತಿರುಗೇಟು ನೀಡಿದ್ದಾರೆ.

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಲಂಡನ್‌ ಸಂಸತ್ತಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಭಾರತದ ಸಂಸತ್ತಿನಲ್ಲಿ ಪ್ರತಿಪಕ್ಷ ನಾಯಕರುಗಳ ಧ್ವನಿಯನ್ನು ಹತ್ತಿಕ್ಕಲಾಗುತ್ತಿದೆ ಎಂದು ದೂರಿದ್ದರು. ಇದಕ್ಕೆ, ರಾಹುಲ್ ಗಾಂಧಿ ವಿದೇಶಿ ನೆಲದಲ್ಲಿ ಚೀನಾವನ್ನು ಹೊಗಳುತ್ತಾ, ಭಾರತವನ್ನು ನಿಂದಿಸಿದ್ದಾರೆ, ಭಾರತಕ್ಕೆ ದ್ರೋಹ ಮಾಡಬೇಡಿ ಎಂದು ಅನುರಾಗ್ ಠಾಕೂರ್ ಹೇಳಿದ್ದಾರೆ.

ನಮ್ಮ ಸಂಸತ್ತಿನಲ್ಲಿ ಭಾಷಣ ಮಾಡುತ್ತಿರುವಾಗ ಮೈಕ್ ಆಗಾಗ ಸ್ವಿಚ್ ಆಫ್ ಆಗುತ್ತದೆ, ಪ್ರತಿಪಕ್ಷದವರ ಧ್ವನಿಯನ್ನು ಹತ್ತಿಕ್ಕಲಾಗುತ್ತದೆ ಎಂದಿದ್ದರು.

ಇದನ್ನೂ ಓದಿ : ರಾಹುಲ್ ಗಾಂಧಿಗೆ ಮಕ್ಕಳಾಗಲ್ಲ..!

ಶರ್ಮಾ ಅವರು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ರಾಹುಲ್ ಗಾಂಧಿ ಅವರು ಭಾರತ್ ಜೋಡೋ ಯಾತ್ರೆಯ ಅನುಭವಗಳನ್ನು ಹಂಚಿಕೊಂಡರು ಮತ್ತು ಇದು ಭಾರೀ ಜನಸ್ತೋಮದ ನಡುವೆ ತೀವ್ರವಾದ ರಾಜಕೀಯ ಕಸರತ್ತು ಎಂದು ಬಣ್ಣಿಸಿದರು.

ನೋಟು ಅಮಾನ್ಯೀಕರಣ ಚರ್ಚೆಗೆ ಅವಕಾಶವಿಲ್ಲ

ಅನೇಕ ಬಾರಿ ನಾವು ಮಾತನಾಡುತ್ತಿರುವಾಗ ಮಧ್ಯೆ ಮೈಕ್ ಏಕಾಏಕಿ ಬಂದ್ ಆಗುತ್ತಿತ್ತು, ಅನಾಹುತಕಾರಿ ಆರ್ಥಿಕ ನಿರ್ಧಾರವಾದ ನೋಟು ಅಮಾನ್ಯೀಕರಣದ ಬಗ್ಗೆ ಚರ್ಚಿಸಲು ನಮಗೆ ಅವಕಾಶವಿರಲಿಲ್ಲ. ಜಿಎಸ್‌ಟಿ ಕುರಿತು ಚರ್ಚಿಸಲು ನಮಗೆ ಅವಕಾಶ ನೀಡಲಿಲ್ಲ ಎಂದು ರಾಹುಲ್ ಗಾಂಧಿ ಹೇಳಿದ್ದರು.

ಧ್ವನಿ ಎತ್ತಲು ಅವಕಾಶವಿರಲಿಲ್ಲ

ಚೀನೀ ಸೈನಿಕರು ನಮ್ಮ ಪ್ರದೇಶವನ್ನು ಪ್ರವೇಶಿಸಿದರು, ಆದರೆ ನಾವು ಅದನ್ನು ಚರ್ಚಿಸಲು ಅನುಮತಿಸುವುದಿಲ್ಲ. ಉತ್ಸಾಹಭರಿತ ಚರ್ಚೆಗಳು, ಬಿಸಿಯಾದ ಚರ್ಚೆಗಳು, ವಾದಗಳು ಮತ್ತು ಭಿನ್ನಾಭಿಪ್ರಾಯಗಳು ಇದ್ದಾಗಲೂ ಧ್ವನಿ ಎತ್ತಲು ಅವಕಾಶವಿರಲಿಲ್ಲ ಎಂದು ರಾಹುಲ್ ಗಾಂಧಿ ಉಲ್ಲೇಖಿಸಿದ್ದರು.

ರಾಹುಲ್ ಗಾಂಧಿ ಹೇಳಿಕೆಗೆ ಬಿಜೆಪಿ ನಾಯಕರು ತಿರುಗೇಟು ನೀಡುತ್ತಿದ್ದಾರೆ. ಅಲ್ಲದೆ, ವಿದೇಶಿ ನಡಲದಲ್ಲಿ ಭಾರತಕ್ಕೆ ದ್ರೋಹ ಮಾಡಬೇಡಿ ಎಂದು ಹೇಳಿದ್ದಾರೆ.

RELATED ARTICLES

Related Articles

TRENDING ARTICLES