ಬೆಂಗಳೂರು : ಲಂಚ ಪ್ರಕರಣ ಸಂಬಂಧ ಪ್ರಕರಣದ ಎ1 ಆರೋಪಿಯಾಗಿರುವ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅವರಿಗೆ ಹೈಕೋರ್ಟ್ ಬಿಗ್ ರಿಲೀಫ್ ನೀಡಿದೆ.
ಕರ್ನಾಟಕ ಹೈಕೋರ್ಟ್ ಇಂದು ಪ್ರಕರಣ ಸಂಬಂಧ ವಿಚಾರಣೆ ನಡೆಸಿದ್ದು, ಶಾಸಕ ಮಾಡಾಳ್ ವಿರೂಪಾಕ್ಷಪ್ಪಗೆ ಮಧ್ಯಂತರ ಜಾಮೀನು ಮಂಜೂರು ಮಾಡಿ ಆದೇಶ ನೀಡಿದೆ.
ಐದು ಲಕ್ಷ ಬಾಂಡ್, 2 ಶ್ಯೂರಿಟಿ
ಹೈಕೋರ್ಟ್ ಐದು ಲಕ್ಷ ಬಾಂಡ್, ಎರಡು ಶ್ಯೂರಿಟಿ ಮೇಲೆ ವಿರೂಪಾಕ್ಷಪ್ಪಗೆ ಜಾಮೀನು ನೀಡಲಾಗಿದೆ. ಅಲ್ಲದೆ, 48 ಗಂಟೆಗಳಲ್ಲಿ ವಿಚಾರಣೆಗೆ ಹಾಜರಾಗಬೇಕು ಎಂದು ಹೈಕೋರ್ಟ್ ಸೂಚನೆ ನೀಡಿದೆ.
ಶಾಸಕ ವಿರೂಪಾಕ್ಷಪ್ಪ ವಿರುದ್ಧ ಎಫ್ ಐಆರ್ ನಲ್ಲಿ ಯಾವುದೇ ಆರೋಪಗಳಿಲ್ಲ ಎಂದು ಮಾಡಾಳ್ ಪರ ಹಿರಿಯ ವಕೀಲ ಕೆ.ಸುಮನ್ ವಾದ ಮಂಡಿಸಿದ್ದಾರೆ.
ಇದನ್ನೂ ಓದಿ : ಮಾಡಾಳ್ ಮಿಸ್ಸಿಂಗ್ : ಶುರುವಾಯ್ತು ಕಾಂಗ್ರೆಸ್ ಪೋಸ್ಟರ್ ಅಭಿಯಾನ
ತನಿಖಾಧಿಕಾರಿಗಳು ವರ್ಗಾವಣೆ
ಲೋಕಾಯುಕ್ತ ಬಲೆಗೆ ಬಿದ್ದಿರುವ ಶಾಸಕ ಮಾಡಾಳ್ ಪುತ್ರನ ಲಂಚ ಪ್ರಕರಣ ಕ್ಷಣ ಕ್ಷಣಕ್ಕೂ ತಿರುವು ಪಡೆಯುತ್ತಿದೆ. ಒಂದು ಕಡೆ ಪೊಲೀಸರ ಕೈಗೆ ಸಿಗದಿರುವ ಶಾಸಕರಿಗೆ ಜಾಮೀನು ಮಂಜೂರು ಆಗಿದೆ. ಮತ್ತೊಂದೆಡೆ ಪ್ರಕರಣದ ತನಿಖೆ ನಡೆಸುತ್ತಿದ್ದ ತನಿಖಾಧಿಕಾರಿಗಳನ್ನು ಎತ್ತಗಂಗಡಿ ಮಾಡಲಾಗಿದೆ.
ಸರ್ಕಾರ, ಇಬ್ಬರು ತನಿಖಾಧಿಕಾರಿಗಳನ್ನು ವರ್ಗಾವಣೆ ಮಾಡಿ ಮತ್ತಿಬ್ಬರನ್ನು ಆ ಸ್ಥಾನಕ್ಕೆ ಹೊಸದಾಗಿ ನೇಮಕ ಮಾಡಿದೆ. ಸರ್ಕಾರದ ಕ್ರಮವನ್ನು ವಿರೋಧ ಪಕ್ಷಗಳು ಖಂಡಿಸಿವೆ.